ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ.. ಚಿಕ್ಕ ನದಿಯೇ ಭೋರ್ಗರೆಯುತ್ತಿದೆ.. ರಸ್ತೆಗಳಿಗೂ ನೀರು ನುಗ್ಗಿದೆ, ಮನೆ ಮುಂದೆಯೇ ನೀರು ಬಂದು ನಿಂತಿದೆ.. ವರುಣನ ಅಬ್ಬರಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ.
ಬೆಳಗಾವಿಗೆ ಮತ್ತೆ ಎದುರಾಯ್ತು ಜಲಕಂಟಕ!
ಭಯ.. ಮತ್ತದೇ ಭಯ.. ನೆರೆ ನರಕದಿಂದ ಪಾರಾಗಿ ತಿಂಗಳ ತುಂಬೋ ಮೊದಲೇ, ಬೆಳಗಾವಿ ಜನರಲ್ಲಿ ಮತ್ತೆ ಪ್ರವಾಹ ಆತಂಕ ಕಾಡ್ತಿದೆ. ಯಾಕಂದ್ರೆ, ಕಳೆದೆರಡು ದಿನದಿಂದ ಸುರೀತಿರೋ ಮಳೆಯಿಂದಾಗಿ, ಮಲಪ್ರಭಾ ನದಿ ಅಪಾಯದ ಮಟ್ಟಕ್ಕೇರಿದೆ. ಕಿತ್ತೂರಿನ ಎಂ.ಕೆ.ಗ್ರಾಮದಲ್ಲಿರುವ ಗಾಂಗಾಬಿಕಾ ಐಕ್ಯ ಮಂಟಪದ ದಂಡೆಯೂ ಮುಳುಗಡೆಯಾಗಿದ್ದು, ಜಮೀನುಗಳಿಗೆಲ್ಲ ನೀರು ನುಗ್ಗಿದೆ. ತರಕಾರಿ ಬೆಳೆಯೆಲ್ಲ ಕೊಚ್ಚಿ ಹೋಗಿದ್ದು, ಉದ್ದು, ಸೋಯಾ ಹಾಳಾಗಿದೆ. ಇನ್ನು, ಚಿಕ್ಕೋಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಯ್ತು.
ವರುಣನ ನರ್ತನಕ್ಕೆ ಹಾಳಾಯ್ತು ಬೆಳೆ!
ಕಲಬುರಗಿಯಲ್ಲಿ ಕಳೆದೆರಡು ದಿನದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದ್ರಿಂದಾಗಿ, ಚೇತರಿಸಿಕೊಳ್ತಿದ್ದ ಬೆಳೆಯೆಲ್ಲ ಮತ್ತೆ ಜಲಾವೃತಗೊಂಡಿದೆ. ಕಲಬುರಗಿ, ಚಿಂಚೋಳಿಯ ಹತ್ತಾರು ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಉದ್ದು ಮತ್ತು ಹೆಸರು ಹಳಾಗಿದ್ದು, ರೈತರು ಕಂಗಾಲಾಗಿದ್ದಾರೆ.
ನೂರಾರು ಮನೆಗಳಿಗೆ ನುಗ್ಗಿದ ನೀರು!
ಗದಗದ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿಯಲ್ಲಿ ಜಲತಾಂಡವ ಆಡಿದೆ. ಧೋ ಎಂದು ಸುರಿದ ಮಳೆಯಿಂದಾಗಿ, ನೂರಾರು ಮನೆಗಳು ಮುಳುಗಿಹೋಗಿದ್ವು. ಇದ್ರಿಂದಾಗಿ, ಮಕ್ಕಳು, ವೃದ್ಧರೆನ್ನದೆ ಜನರೆಲ್ಲ ಪರದಾಡಿದ್ರು
ಹಾಗೇ ದಾವಣಗೆರೆ ಜಿಲ್ಲೆಯಲ್ಲೂ ತಡರಾತ್ರಿ ಭಾರೀ ಮಳೆಯಾಗಿದೆ. ಅದ್ರಲ್ಲೂ ಹರಿಹರ ತಾಲೂಕಿನಲ್ಲಿ ಮಳೆ ನೀರು ರಸ್ತೆಗಳನ್ನೇ ನುಂಗಿ ಹಾಕಿತ್ತು. ಇದ್ರಿಂದ ಸಂಕ್ಲಿಪುರ-ಗುಳದಹಳ್ಳಿ ಗ್ರಾಮದ ನಡುವಿನ ರಸ್ತೆ ಸಂಚಾರ ಸ್ಥಗಿತವಾಗಿತ್ತು. ದಾವಣಗೆರೆ ತಾಲೂಕಿನ ಲೋಕಿಕೆರೆಯಲ್ಲೂ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಅಣಜಿ ಗೊಲ್ಲರಹಳ್ಳಿಯಲ್ಲಿ ಮೂರು ಮನೆಗಳು ನೆಲಸಮವಾಗಿವೆ. ತುಮಕೂರು ಜಿಲ್ಲೆಯಲ್ಲೂ ಭರ್ಜರಿ ಮಳೆಯಾಗಿದ್ದು, ಸುವರ್ಣಮುಖಿ ನದಿ ತುಂಬಿ ಹರಿದಿದೆ.
ಮುಚ್ಚಿದ ರಾಜಕಾಲುವೆ, ಮನೆಗೆ ನುಗ್ಗಿದ ನೀರು :
ಮೈಸೂರು ತಾಲೂಕಿನ ಶೆಟ್ಟಿ ನಾಯಕನ ಹಳ್ಳಿಯಲ್ಲಿ ರಾಜಕಾಲುವೆ ಮುಚ್ಚಿಹೋಗಿದ್ರಿಂದ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇದ್ರಿಂದ ನಿವಾಸಿಗಳು ಸಂಕಷ್ಟ ಅನುಭವಿಸಿದ್ರು.
ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ:
ಸೆಪ್ಟೆಂಬರ್ 13 ರ ತನಕ ರಾಜ್ಯದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಮಳೆಗೆ ಅನುಗುಣವಾಗಿ ಅಲರ್ಟ್‌ಗಳನ್ನ ಘೋಷಣೆ ಮಾಡಿದೆ.
ರೆಡ್ ಅಲರ್ಟ್ ಜಿಲ್ಲೆಗಳು:
ಉತ್ತರ ಕನ್ನಡ, ಉಡುಪಿ , ದಕ್ಷಿಣ ಕನ್ನಡ
ಆರೆಂಜ್ ಅಲರ್ಟ್ ಜಿಲ್ಲೆಗಳು
ಬೆಳಗಾವಿ , ಧಾರವಾಡ , ರಾಯಚೂರು, ಬೀದರ್, ಕಲಬುರಗಿ, ಗದಗ , ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು , ಹಾಸನ, ಕೊಡಗು
ಯಲ್ಲೋ ಅಲರ್ಟ್ ಜಿಲ್ಲೆಗಳು
ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಬೆಂಗಳೂರು, ತುಮಕೂರು, ರಾಮನಗರ, ದಾವಣಗೆರೆ
ಚಿತ್ರದುರ್ಗ
ಒಟ್ನಲ್ಲಿ ರಾಜ್ಯದ ಉದ್ದಗಲಕ್ಕೂ ಭಾರಿ ಮಳೆಯಾಗಿದ್ದು ಹಲವೆಡೆ ರೈತರು ಖುಷಿಯಾಗಿದ್ರೆ ,ಕೆಲವಡೆ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಅದಲ್ಲೂ ಇನ್ನೂ ಮೂರು ದಿನಗಳ ರಾಜ್ಯವನ್ನ ಮಳೆರಾಯ ಕಾಡಲಿದ್ದು, ಮತ್ತೆ ಏನ್ ಏನ್ ಅವಾಂತರ ಸೃಷ್ಟಿಯಾಗುತ್ತೋ
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??