ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಗೊಳ್ಳಲು ಇನ್ನು ಮೂರು ವಾರಗಳು ಬಾಕಿ ಉಳಿದಿವೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಎಲ್ಲಾ ಎಂಟು ಫ್ರಾಂಚೈಸಿಗಳು ಈಗಾಗಲೇ ಯುಎಇ ತಲುಪಿದ್ದು, ಅಲ್ಲಿ 6 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸುತ್ತಿವೆ. ಆರ್‌ಸಿಬಿಯ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ. ಆಗಸ್ಟ್ 27ರ ಗುರುವಾರದಿಂದ 3 ವಾರಗಳ ತರಬೇತಿಯಲ್ಲಿ ಬೆಂಗಳೂರು ತಂಡ ತೊಡಗಿಕೊಳ್ಳಲಿದೆ.
ಐಪಿಎಲ್‌ನ ಆಕರ್ಷಣೀಯ ತಂಡವಾದ ಆರ್‌ಸಿಬಿಗೆ ಕಪ್ ಗೆಲ್ಲದ ತಂಡವೆಂಬ ಹಣೆಪಟ್ಟಿಯಿದೆ.
ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಬೇಕಾದ ಬಲಿಷ್ಠ ತಂಡ ಆರ್‌ಸಿಬಿ ಕೈಯಲ್ಲಿದೆ. ಆದರೆ ಕೊಹ್ಲಿ ಪಡೆ ಎಚ್ಚರಿಕೆಯ ಆಟವಾಡಬೇಕಷ್ಟೆ, ಉತ್ತಮ ಪ್ರದರ್ಶನ ನೀಡಬೇಕಷ್ಟೇ.
ಈ ಬಾರಿಯ ಐಪಿಎಎಲ್‌ನಲ್ಲಿ ಕಪ್ ಗೆಲ್ಲಬಹುದಾದ ಬಲಿಷ್ಠ ಆರ್‌ಸಿಬಿ ಸಂಭಾವ್ಯ XI ಕೆಳಗಿದೆ ನೋಡಿ.
ಆರಂಭಿ ಬ್ಯಾಟ್ಸ್‌ಮನ್‌ಗಳು
ಆರ್‌ಸಿಬಿ ಈ ಸಾರಿ ಇನ್ನೂ ಬಲಿಷ್ಠ ತಂಡವಾಗಿದೆ ಯಾಕೆಂದರೆ ಈ ಬಾರಿ ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್ ಆಯರನ್ ಫಿಂಚ್ ಕೂಡ ಇದ್ದಾರೆ. ಈ ಆವೃತ್ತಿಯಲ್ಲಿ ಫಿಂಚ್ ಮತ್ತು ಪಾರ್ಥಿವ್ ಪಟೇಲ್ ಆರ್‌ಸಿಬಿಗೆ ಉತ್ತಮ ಆರಂಭಿಕ ಜೋಡಿಯಾಗಿ ಕಾಣಿಸಿದ್ದಾರೆ.
ಬಲಿಷ್ಠ ದಾಂಡಿಗರು
ಆರ್‌ಸಿಬಿಯಲ್ಲಿ ಎಂದಿನಂತೆ ಈ ಬಾರಿಯೂ ಬ್ಯಾಟ್ಸ್‌ಮನ್‌ಗಳ ಬಣ ಬಲಿಷ್ಠವಾಗಿದೆ. ಆಯರನ್ ಫಿಂಚ್, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಜೋಶುವಾ ಫಿಲಿಪ್ (ವಿಕೆ), ಪಾರ್ಥಿವ್ ಪಟೇಲ್ (ವಿಕೆ), ಶಹಬಾಜ್ ಅಹ್ಮದ್ (ವಿಕೆ), ಮತ್ತು ವಿರಾಟ್ ಕೊಹ್ಲಿ (ಸಿ) ಇವರು ತಂಡಕ್ಕೆ ಬ್ಯಾಟಿಂಗ್ ಬಲ ನೀಡಬಲ್ಲರು.
ಪ್ರತಿಭಾನ್ವಿತ ಆಲ್ ರೌಂಡರ್‌ಗಳು
ಕ್ರಿಸ್ ಮೋರಿಸ್, ಗುರ್ಕೀರತ್ ಸಿಂಗ್, ಇಸುರು ಉದಾನಾ, ಮೊಯೀನ್ ಅಲಿ, ಪವನ್ ದೇಶಪಾಂಡೆ, ಪವನ್ ನೇಗಿ, ಶಿವಮ್ ದೂಬೆ, ಮತ್ತು ವಾಷಿಂಗ್ಟನ್ ಸುಂದರ್ ಇವರು 2020ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಆಲ್ ರೌಂಡರ್‌ಗಳು.
ಬೌಲರ್‌ಗಳ ಬಳಗ
ಆರ್‌ಸಿಬಿ ಬೌಲಿಂಗ್ ಬಳಗ ಕೂಡ ಈ ಸಾರಿ ತುಂಬಾ ಚೆನ್ನಾಗಿದೆ. ಡೇಲ್ ಸ್ಟೇನ್, ಕೇನ್ ರಿಚರ್ಡ್ಸನ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಉಮೇಶ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ತಂಡವನ್ನು ಗೆಲುವಿನತ್ತ ಎಳೆಯಬಲ್ಲರು. ಮುಖ್ಯವಾಗಿ ಡೇಲ್ ಸ್ಟೇನ್ ಕಣಕ್ಕಿಳಿದರೆ ಆರ್‌ಸಿಬಿ ನಿಜಕ್ಕೂ ಅಪಾಯಕಾರಿ ತಂಡವೆನಿಸಲಿದೆ.
ಆರ್‌ಸಿಬಿ ಸಂಭಾವ್ಯ XI
ಆಯರನ್ ಫಿಂಚ್, ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಗುರುಕೀರತ್ ಸಿಂಗ್, ಶಿವಂ ದೂಬೆ, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಡೇಲ್ ಸ್ಟೇನ್, ಯುಜುವೇಂದ್ರ ಚಾಹಲ್.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??