ಯಾದಗಿರಿ: ತಾಲೂಕಿನಲ್ಲಿ ಇಂದು ಎರಡು ವರ್ಷದ ಗಂಡು ಮಗುವಿಗೂ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಜಿಲ್ಲೆಯ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 11ಕ್ಕೇರಿದೆ.
ತಾಲೂಕಿನ ಚಿನ್ನಕಾರ ಗ್ರಾಮದ ಗುರುಮಿಠಕಲ್‍ನ ರೋಗಿ ನಂ.1,256 ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟದೆ. ಈ ಹಿನ್ನೆಲೆ ಮಗುವಿನ ತಂದೆ, ತಾಯಿಯರ ಸ್ಯಾಂಪಲ್ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮೇ 14ರಂದು ತಂದೆ ತಾಯಿ ಮಗುವಿನೊಂದಿಗೆ ಖಾಸಗಿ ವಾಹನದ ಮೂಲಕ ಮುಂಬೈನಿಂದ ಯಾದಗಿರಿಗೆ ಬಂದಿದ್ದರು. ಇವರೊಟ್ಟಿಗೆ ಇನ್ನೂ 11 ಜನ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮುಂಬೈನಿಂದ ಆಗಮಿಸಿದ ಎಲ್ಲರನ್ನೂ ಜ್ವರ ತಪಾಸಣೆ ಮಾಡಿ ಬಳಿಕ ತಾಲೂಕಿನ ಗುಂಜನೂರ ಕ್ವಾರೆಂಟೆನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ ಕೊರೊನಾ ಸೋಂಕಿತ ಮಗು ಸೇರಿ ತಂದೆ ತಾಯಿಯರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Laxmi News 24×7