Breaking News

ಕರ್ನಾಟಕಕ್ಕೆ ಕಾದಿದೆ ದೊಡ್ಡ ಗಂಡಾತರ..? ಬೆಂಗಳೂರಿನ ಮೇಲೆ ಕೊರೋನಾ ಕಾರ್ಮೋಡ…!

Spread the love

ಬೆಂಗಳೂರು, ಮೇ 12- ರಾಜಧಾನಿ ಬೆಂಗಳೂರಿಗೆ ಹೊಸ ಕಂಟಕ ಎದುರಾಗಿದೆ. ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಮಹಾಮಾರಿ ಕೊರೊನಾ ದಶದಿಕ್ಕುಗಳಿಂದಲೂ ಆವರಿಸುವ ಆತಂಕ ಪ್ರಾರಂಭವಾಗಿದೆ. ಹೊರರಾಜ್ಯಗಳಿಂದ ನಗರಕ್ಕೆ ಸುಮಾರು 30 ಸಾವಿರಕ್ಕೂ ಹೆಚ್ಚು ಕನ್ನಡಿಗರು ಬರುತ್ತಿದ್ದು, ಅವರನ್ನು ಕ್ವಾರಂಟೈನ್ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರಿಗೆ ವಿವಿಧೆಡೆಯಿಂದ ಬರುತ್ತಿರುವ 30 ಸಾವಿರ ಜನರನ್ನು ನಿಭಾಯಿಸುವುದು ಹೇಗೆ, ಕ್ವಾರಂಟೈನ್ ಮಾಡುವುದು ಹೇಗೆ ಎಂಬ ಟೆನ್ಷನ್ ಅಧಿಕಾರಿಗಳಿಗೆ ಪ್ರಾರಂಭವಾಗಿದೆ. ಇವರಲ್ಲಿ ಸೋಂಕು ತಗುಲಿದವರು ಕಂಡುಬಂದರೆ ಅವರನ್ನು ಬೇರ್ಪಡಿಸಿ ಐಸೊಲೇಷನ್ ಮಾಡಬೇಕಾಗುತ್ತದೆ.

ಕ್ವಾರಂಟೈನ್‍ನಲ್ಲಿದ್ದವರನ್ನು 14 ದಿನಗಳ ನಂತರ ಬಿಡುಗಡೆ ಮಾಡಿ ಹೋಂ ಕ್ವಾರಂಟೈನ್ ಮಾಡಬೇಕು. ಇವರೆಲ್ಲರ ಮೇಲೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಇಷ್ಟೆಲ್ಲ ಸಿಬ್ಬಂದಿಗಳು ಇದ್ದಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.

30 ಸಾವಿರ ಜನರ ಗಂಟಲು ದ್ರವ, ರಕ್ತ ಪರೀಕ್ಷೆ ನಡೆಸಬೇಕು. ಅವರೆಲ್ಲರ ವರದಿ ತರಿಸಿಕೊಳ್ಳಬೇಕು. ಆ ಸಂದರ್ಭದಲ್ಲಿ ಅದೆಷ್ಟು ಜನರಿಗೆ ಪಾಸಿಟಿವ್ ಬರುತ್ತದೆಯೋ? ರಾಜಧಾನಿಯಲ್ಲಿ ಮತ್ತೆಷ್ಟು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತವೆಯೋ ಎಂಬ ಆತಂಕ ಈಗಾಗಲೇ ಶುರುವಾಗಿದೆ.

ಈಗಾಗಲೇ ಸೋಂಕಿತರನ್ನು ಪತ್ತೆಹಚ್ಚಲು, ಶಂಕಿತರನ್ನು ಕ್ವಾರಂಟೈನ್ ಮಾಡಲು, ಹೆಲ್ತ್ ಸರ್ವೆ ಮಾಡಲು ಬೇರೆ ಬೇರೆ ಕೆಲಸಗಳಿಗೆ ಆರೋಗ್ಯಾಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ಹೆಲ್ತ್ ಸರ್ವೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈಗ ಆಗಮಿಸುತ್ತಿರುವ 30 ಸಾವಿರ ಜನರನ್ನು ಯಾವ ರೀತಿ ನಿಭಾಯಿಸುವುದು ಎಂಬುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇವರೆಲ್ಲರನ್ನೂ ಏಕಕಾಲಕ್ಕೆ ಟೆಸ್ಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ.

ಯಾರ್ಯಾರಿಗೆ ಯಾವ್ಯಾವ ಸೋಂಕಿರುತ್ತದೆ ಎಂಬುದು ಗೊತ್ತಿಲ್ಲ. ಇವರ ಟ್ರಾವೆಲ್ ಹಿಸ್ಟರಿ ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಬೇಕಾಗುತ್ತದೆ. ಹೊರದೇಶಗಳಿಂದ ಆಗಮಿಸುವವರಿಗೆ ಕ್ವಾರಂಟೈ ನ್ ಮಾಡಲು ಸರ್ಕಾರ ಸಮುದಾಯ ಭವನ, ಛತ್ರ, ಪಂಚತಾರಾ ಹೊಟೇಲ್, ತ್ರಿಸ್ಟಾರ್ ಹೊಟೇಲ್‍ಗಳ ವ್ಯವಸ್ಥೆಯನ್ನೇನೋ ಮಾಡಿದೆ.

ಆದರೆ, ಅಷ್ಟು ಪ್ರಮಾಣದ ಆರೋಗ್ಯ ಸಿಬ್ಬಂದಿಗಳಿದ್ದಾರೆಯೇ? ಅಪಾಯವನ್ನು ಮತ್ತಷ್ಟು ಮೈ ಮೇಲೆ ಎಳೆದುಕೊಂಡಂತೆ ಆಗುವುದಿಲ್ಲವೆ ಎಂಬುದು ಸ್ಥಳೀಯ ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ನಡುವೆ ಸಾಮಾಜಿಕ ಅಂತರ, ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ರೋಗವನ್ನು ಜಯಿಸಬೇಕೆಂಬುದು ಸರ್ಕಾರದ ನಿಯಮವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಈವರೆಗೆ 904 ಸೋಂಕಿತರಿದ್ದಾರೆ. 1158 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಹಲವಾರು ಜನರನ್ನು ನಿಗಾದಲ್ಲಿ ಇಡಲಾಗಿದೆ. ಈಗ 30 ಸಾವಿರ ಜನರ ಮೇಲೆ ನಿಗಾ ವಹಿಸಬೇಕಿದೆ.

# ಪಾದರಾಯನಪುರದಲ್ಲಿ ಸಾಮೂಹಿಕ ತಪಾಸಣೆ ವಿಳಂಬ:
ಈ ನಡುವೆ ಕಂಟೈನ್ಮೆಂಟ್ ಝೋನ್ ಆದ ಪಾದರಾಯನಪುರದಲ್ಲಿ ಲಾಕ್‍ಡೌನ್ ನಿಯಮಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಗಂಟಲು ದ್ರವ, ಆರೋಗ್ಯ ತಪಾಸಣೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹಾಗೂ 6000 ಕೋವಿಡ್ ಟೆಸ್ಟ್‍ಗಳ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ತಪಾಸಣೆ ವಿಳಂಬವಾಗಿದೆ.

ನಿನ್ನೆಯಿಂದಲೇ ಪಾದರಾಯನಪುರದಲ್ಲಿ ಸಾಮೂಹಿಕ ತಪಾಸಣೆ ಆರಂಭವಾಗಬೇಕಿತ್ತು. ಟೆಸ್ಟ್ ಮಾಡಲು ಸರಿಯಾದ ವ್ಯವಸ್ಥೆ ಮಾಡಿಕೊಳ್ಳದ ಕಾರಣ ವಿಳಂಬ ಮಾಡಲಾಗಿದೆ. ಇಂತಹ ಸನ್ನಿವೇಶ ಇರುವಾಗ ರಾಜ್ಯಕ್ಕೆ ಆಗಮಿಸುವ 30 ಸಾವಿರ ಜನರನ್ನು ಯಾವ ರೀತಿ ಪರೀಕ್ಷೆ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ