Breaking News

ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್

Spread the love

ಬೆಂಗಳೂರು: ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್ ಹೊಕ್ಕಿದೆ.

ಸಿದ್ದಾಪುರ ವಾರ್ಡ್ ಕಾರ್ಪೊರೇಟರ್ ಮುಜಾಯಿದ್ ಪಾಷಾಗೆ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ 39 ವರ್ಷದ ಕಾರ್ಪೊರೇಟರ್ ಮುಜಾಯಿದ್ ಪಾಷಾ ಕಂಟೈನ್ಮೆಂಟ್ ಝೋನ್‍ನಲ್ಲಿ ಓಡಾಡಿದ್ದರು.

4 ದಿನಗಳಿಂದ ಪುಲಕೇಶಿನಗರದ ತಂಗಿ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ವಾರದಿಂದ ಜ್ವರ-ಶೀತದಿಂದ ಬಳಲುತ್ತಿದ್ದ ಕಾರ್ಪೊರೇಟರ್‍ಗೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ದೃಢಪಟ್ಟಿದೆ. ಸದ್ಯಕ್ಕೆ ಕಾರ್ಪೊರೇಟರ್ ಮನೆಯವರನ್ನ ಮತ್ತು ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ.

4 ದಿನದ ಹಿಂದೆನೆ ಪಾಸಿಟಿವ್ ಅಂತ ಬಂದಿತ್ತು. ಸ್ವತಃ ಕಾರ್ಪೊರೇಟರ್ ಅವರೇ ಆರೋಗ್ಯಾಧಿಕಾರಿಗಳಿಗೆ ಯಾರಿಗೂ ಹೇಳಬೇಡಿ ಅಂದಿದ್ದಾರೆ. ಆದರೆ 4 ದಿನದ ಹಿಂದೆನೆ ಕಾರ್ಪೊರೇಟರ್ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರಂತೆ. ಹೀಗಾಗಿ ವಿಷಯವನ್ನು ಯಾರಿಗೂ ಹೇಳದೇ ಅಧಿಕಾರಿಗಳು ಮುಚ್ಚಿಟಿದ್ದರು. ಆದರೆ 4 ದಿನದ ಹಿಂದೆಯೇ ಆರೋಗ್ಯಾಧಿಕಾರಿಗಳು ಪ್ರೈಮರಿ ಕಾಂಟ್ಯಾಕ್ಟ್ ಅನ್ನು ಕ್ವಾರಂಟೈನ್ ಮಾಡಿದ್ದಾರೆ. ಕಾರ್ಪೊರೇಟರ್ ಪಕ್ಕದ ಮನೆಯವರಿಗೆ ಪಾಸಿಟಿವ್ ಬಂದಿತ್ತಂತೆ ಹೀಗಾಗಿ ಇವರಿಗೆ ಸೊಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 4 ಜನ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ