Breaking News

ಕರ್ನಾಟಕದಲ್ಲಷ್ಟೇ ಅಲ್ಲ ದೇಶಾದ್ಯಂತ ಈ ಬಾರಿ ರಾಜ್ಯಸಭೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ:B.S.Y.

Spread the love

ಬೆಂಗಳೂರು,ಜೂ.9- ಕರ್ನಾಟಕದಲ್ಲಷ್ಟೇ ಅಲ್ಲ ದೇಶಾದ್ಯಂತ ಈ ಬಾರಿ ರಾಜ್ಯಸಭೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಕೆಲವು ಶಿಫಾರಸ್ಸುಗಳನ್ನು ಮಾಡಲಾಗಿತ್ತು.

ಬಿಜೆಪಿ ರಾಷ್ಟ್ರೀಯ ವರಿಷ್ಠರು ನನ್ನ ಜೊತೆ ಮಾತನಾಡಿ ಈ ಬಾರಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಡಬೇಕಿದೆ ಎಂದು ಹೇಳಿದರು. ಅದರಂತೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರಿಗೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿದೆ.

ಕೇವಲ ಕರ್ನಾಟಕದಲ್ಲಿ ಮಾತ್ರ ಈ ರೀತಿಯಾಗಿಲ್ಲ. ದೇಶಾದ್ಯಂತ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಲಾಗಿದೆ. ಬಿಜೆಪಿ ವರಿಷ್ಠರ ಈ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದರು.

ರಾಜ್ಯಸಭೆಗೆ ಸದಸ್ಯರಾಗಿ ನಾಮಪತ್ರ ಸಲ್ಲಿಸುವ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ಶುಭವಾಗಲಿ. ರಾಜ್ಯಸಭಾ ಸದಸ್ಯರಾಗಿ ಅವರಿಬ್ಬರು ಉತ್ತಮ ಕೆಲಸ ಮಾಡಲಿ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರೊಂದಿಗಿರುವ ಸಲುವಾಗಿ ನಾನು ಬಂದಿದದೇನೆ ಎಂದರು.


Spread the love

About Laxminews 24x7

Check Also

ಕೊನೆಗೂ ರಾಸಲೀಲೆ ಡಿಜಿಪಿ ರಾಮಚಂದ್ರರಾವ್ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- ಇಲಾಖೆ ಮರ್ಯಾದೆ ತೆಗೆದ IPS – DGP ramachandra roa case

Spread the love ಕೊನೆಗೂ ರಾಸಲೀಲೆ ಡಿಜಿಪಿ ರಾಮಚಂದ್ರರಾವ್ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- ಇಲಾಖೆ ಮರ್ಯಾದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ