ಬೆಂಗಳೂರು: ಕೊರೊನಾ ಸೋಂಕಿನ ಸರಣಿ ಸ್ಫೋಟ ಆಗುತ್ತಿರುವ ಬೆನ್ನಲ್ಲೇ ರಾಜ್ಯಕ್ಕೆ ಜೂನ್ ಆತಂಕ ಶುರುವಾಗಿದೆ. ಇವತ್ತಿನಿಂದ ಸೋಂಕು ಸುನಾಮಿ ನಗರಿ ಮುಂಬೈನಿಂದ ಕರ್ನಾಟಕಕ್ಕೆ ಎರಡು ರೈಲುಗಳು ಸಂಚರಿಸಲಿವೆ. ಕೊರೊನಾ ಬಾಧಿತ ಮುಂಬೈನಿಂದ ಇವತ್ತು ಬೆಂಗಳೂರಿಗೆ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಬೆಳೆಸುತ್ತಿದೆ.
ಇವತ್ತು ಬೆಳಗ್ಗೆ 8.5ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್‍ನಿಂದ ಉದ್ಯಾನ್ ಎಕ್ಸ್‌ಪ್ರೆಸ್ ಹೊರಡಲಿದೆ. ಇದು ಕರ್ನಾಟಕದ ಪಾಲಿಗೆ ಅಕ್ಷರಶಃ ಕೊರೊನಾ ಎಕ್ಸ್‍ಪ್ರೆಸ್ ಆಗಿದೆ. ಯಾಕಂದರೆ ಈ ಉದ್ಯಾನ್ ಎಕ್ಸ್‌ಪ್ರೆಸ್ ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಹೊರಟು ನಾಳೆ ಬೆಳಗ್ಗೆ (ಮಂಗಳವಾರ) 8.50ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಎಂಟ್ರಿ ಕೊಡಲಿದೆ. ಇದರ ಮಧ್ಯೆ ಈ ರೈಲು ಮುಂಬೈ, ಲೋನಾವಾಲಾ, ಪುಣೆಯ ಹಾಟ್‍ಸ್ಪಾಟ್ ದಾಟಿ ಕರ್ನಾಟಕದ ಕಲಬುರಗಿ, ಷಹಬಾದ್, ವಾಡಿ, ಯಾದಗಿರಿ, ರಾಯಚೂರು, ಗೌರಿಬಿದನೂರು, ದೊಡ್ಡಬಳ್ಳಾಪುರ, ಯಲಹಂಕ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ.
ಕರ್ನಾಟಕದ ಈ 6 ಜಿಲ್ಲೆಗಳಲ್ಲೂ ಈಗ ಕೊರೊನಾ ಭೀತಿ ಶುರುವಾಗಿದೆ. ಯಾಕೆಂದರೆ ಈ ಉದ್ಯಾನ್ ಎಕ್ಸ್‌ಪ್ರೆಸ್ ನಲ್ಲಿ 1,000 ದಿಂದ 1,200 ಜನ ಬರುವ ಸಾಧ್ಯತೆ ಇದೆ. ಮೊದಲಿಗೆ ಕಲಬುರಗಿ, ಷಹಬಾದ್, ವಾಡಿಯಲ್ಲಿ ಸ್ಟಾಪ್ ಆಗಲಿದೆ. ಇಲ್ಲಿ ನೂರಾರು ಜನ ಇಳಿಯುವ ನಿರೀಕ್ಷೆ ಇದೆ. ನಂತರ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಉದ್ಯಾನ್ ಎಕ್ಸ್‍ಪ್ರೆಸ್ ಆಗಮಿಸಲಿದೆ. ಶ್ರಮಿಕ ರೈಲು ಮೂಲಕ ಮಹಾರಾಷ್ಟ್ರ ಮತ್ತು ಮುಂಬೈಯಿಂದ ಬಂದವರಲ್ಲಿ ಅತೀ ಹೆಚ್ಚು ಪಾಸಿಟಿವ್ ಕಾಣಿಸಿಕೊಂಡಿದೆ. ಈಗ ಮತ್ತೆ ರೈಲ್ವೆ ಸಂಚಾರ ಆರಂಭಿಸಿರುವುದು ಯಾದಗಿರಿ ಜನರ ಆತಂಕಕ್ಕೆ ಕಾರಣವಾಗಿದೆ.
ಯಾದಗಿರಿ ಮುಖಾಂತರ ರಾಯಚೂರಿಗೆ ಈ ರೈಲು ಆಗಮಿಸಲಿದೆ. ನಂತರ ಆಂಧ್ರ ಪ್ರದೇಶ ಮೂಲಕ ಚಿಕ್ಕಬಳ್ಳಾಪುರದ ಗೌರಿಬಿದನೂರು, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ, ಬೆಂಗಳೂರು ನಗರದ ಯಲಹಂಕದಲ್ಲಿ ಸ್ಟಾಪ್ ಆಗಲಿದೆ. ನಂತರ ಬೆಂಗಳೂರಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಿಲ್ದಾಣಕ್ಕೆ ಈ ಎಕ್ಸ್‌ಪ್ರೆಸ್ ಬರಲಿದೆ.
ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಅಂದಾಜು 1,000-1,200 ಜನರ ಆಗಮನವಾಗಲಿದ್ದಾರೆ. ಸದ್ಯ ಬಿಬಿಎಂಪಿ ಇನ್ನೂ ಕೂಡ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ, ವ್ಯವಸ್ಥೆಯ ಬಗ್ಗೆ ಅಧಿಕಾರಿಗಳ ಜೊತೆ ಸಂವಹನ ನಡೆಸಿಲ್ಲ. ಆದರೆ ಪ್ರತಿನಿತ್ಯವೂ ನೂರಾರು ಸಂಖ್ಯೆಯಲ್ಲಿ ರೈಲಿನಲ್ಲಿ ಜನ ಬಂದರೆ ಸರ್ಕಾರಿ ಕ್ವಾರಂಟೈನ್ ಸಾಧ್ಯವೇ ಇಲ್ಲ ಅನ್ನುವ ನಿರ್ಧಾರಕ್ಕೆ ಬಹುತೇಕವಾಗಿ ಬಿಬಿಎಂಪಿ ಬಂದಿದ
ಮುಂಬೈನಿಂದ ಗದಗ್ ಎಕ್ಸ್‌ಪ್ರೆಸ್ ರೈಲು ಕೂಡ ಇವತ್ತಿನಿಂದಲೇ ಸಂಚರಿಸಲಿದೆ. ರಾತ್ರಿ 9.20ಕ್ಕೆ ಮುಂಬೈನಿಂದ ಹೊರಡಲಿರುವ ಈ ರೈಲು ವಿಜಯಪುರ, ಬಾಗಲಕೋಟೆ ಮಾರ್ಗವಾಗಿ ನಾಳೆ ಮಧ್ಯಾಹ್ನ 12.20ಕ್ಕೆ ಗದಗಕ್ಕೆ ಬರಲಿದೆ. ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ಈ ರೈಲು ನಿಲ್ಲಲಿದೆ.
ಹೀಗಾಗಿ ಈ ಮೂರು ಜಿಲ್ಲೆಗಳಲ್ಲೂ ಕೊರೊನಾ ಸ್ಫೋಟದ ಭೀತಿಯಿದೆ. ಈಗಾಗಲೇ ವಿಜಯಪುರ, ಬಾಗಲಕೋಟೆ, ಗದಗ್‍ಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಈಗ ಮುಂಬೈನಿಂದ ರೈಲು ಬರುತ್ತಿರುವ ರೈಲು ಮತ್ತಷ್ಟು ಕೊರೊನಾ ಅಂಟಿಸುವ ಸಾಧ್ಯತೆ ಇದೆ.
ನಾಳೆಯಿಂದ ಪ್ರತಿನಿತ್ಯ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಸಾವಿರಾರು ಜನರು ಬರಲಿದ್ದಾರೆ. 15 ದಿನಗಳ ಹಿಂದೆ ಕರ್ನಾಟಕ ಗಡಿ ಬಂದ್ ಮಾಡಿದ ಮೇಲೆ ಮಹಾರಾಷ್ಟ್ರ ವಲಸೆಗೆ ಬ್ರೇಕ್ ಬಿದ್ದಿತ್ತು. ಆದ್ರೀಗ ರೈಲು ಯಾನ ಆರಂಭವಾಗುವುದರಿಂದ ರಾಜ್ಯ ಸರ್ಕಾರ ಅಸಹಾಯಕವಾಗಿದೆ. ಮಹಾರಾಷ್ಟ್ರದಿಂದ ಬರೋರನ್ನು ಕ್ವಾರಂಟೈನ್ ಮಾಡುವುದೇ ಈಗ ದೊಡ್ಡ ಸವಾಲು ಎದುರಾಗಿದೆ
https://youtu.be/OYEMtBeW6b0