ಬೆಳಗಾವಿ: ಎರಡು ದಿನ ರಜೆ ಹಿನ್ನೆಲೆ ಮದ್ಯ ಪ್ರಿಯರು ಬಾಕ್ಸ್‌ಗಟ್ಟಲೇ ಎಣ್ಣೆ ಖರೀದಿಸಿದ ಪ್ರಸಂಗ ನಗರದಲ್ಲಿ ಕಂಡುಬಂದಿತು.
ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆ 7ರಿಂದ ಭಾನುವಾರದವರೆಗೆ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಘೋಷಿಸಲಾಗಿದೆ. ಜೊತೆಗೆ ರಂಜಾನ್ ಹಿನ್ನೆಲೆ ಸೋಮವಾರ ಕೂಡ ಸರ್ಕಾರಿ ರಜೆ ಇದೆ. ಇದರಿಂದಾಗಿ ಎರಡು ದಿನಗಳ ಕಾಲ ಬಾರ್ ಬಂದ್ ಆಗಲಿವೆ.
ಎರಡು ದಿನ ರಜೆ ಇರುವುದನ್ನು ಅರಿತ ಮದ್ಯ ಪ್ರಿಯರು ಶನಿವಾರ ಬೆಳಗ್ಗೆಯಿಂದಲೇ ಮದ್ಯದಗಂಡಿ ಮುಂದೆ ಸಾಲುಗಟ್ಟಿ ಎರಡು ದಿನಕ್ಕೆ ಬೇಕಾಗುವಷ್ಟು ಎಣ್ಣೆ ಖರೀದಿಸಿದ್ದಾರೆ. ಅದರಲ್ಲೂ ಕೆಲವರಂತೂ ಬಾಕ್ಸ್‌ಗಟ್ಟಲೇ ಮದ್ಯವನ್ನು ಖರೀದಿಸಿದರು. ಮದ್ಯ ಪ್ರಿಯರು ಎಣ್ಣೆ ಖರೀದಿಯ ವೇಳೆ ಮಾಸ್ಕ್ ಹಾಕಿಕೊಂಡು ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರು.
ಕೊರೊನಾ ಲಾಕ್‍ಡೌನ್ 4ರ ಮಾರ್ಗಸೂಚಿ ಪ್ರಕಟಣೆ ವೇಳೆ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಮೇ 31ರವರೆಗೆ ಅನ್ವಯ ಆಗುವಂತೆ ಪ್ರತಿ ಭಾನುವಾರ ಲಾಕ್‍ಡೌನ್ ಇರುತ್ತೆ ಅಂತಾ ಘೋಷಣೆ ಮಾಡಿದ್ದರು. ಕೊರೊನಾ ಡಬಲ್ ಸೆಂಚುರಿ ಹೊಡೆದ ಸೂತಕ ಮತ್ತು ಲಾಕ್‍ಡೌನ್ 4.0 ವಿನಾಯ್ತಿಯ ಸಂಭ್ರಮದ ನಡುವೆ ಮೊದಲ ಭಾನುವಾರ ಬಂದಿದೆ. ನಾಳೆ ಇಡೀ ರಾಜ್ಯ ಲಾಕ್‍ಡೌನ್ ಆಗಲಿದೆ.
ಲಾಕ್‍ಡೌನ್ ಒಂದು ಮತ್ತು ಎರಡರಲ್ಲಿದ್ದ ಎಲ್ಲಾ ನಿಯಮಗಳು ನಾಳೆ ಅನ್ವಯ ಆಗಲಿವೆ. ಅಗತ್ಯ ವಸ್ತು, ಸೇವೆ ಹೊರತುಪಡಿಸಿ ಉಳಿದಂತೆ ಏನು ಸಿಗಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ರೀತಿಯಲ್ಲೇ ನಾಳೆಯೂ ಮನೆಯಲ್ಲೇ ಜನತೆ ಇರಬೇಕು. ಒಂದು ವೇಳೆ ಅನಗತ್ಯವಾಗಿ ಜನ ಮನೆಯಿಂದ ಹೊರಬಂದ್ರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ವಾಹನಗಳನ್ನು ಮುಲಾಜಿಲ್ಲದೇ ಜಪ್ತಿ ಮಾಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಈಗಾಗಲೇ ಹೆಚ್ಚುಕಡಿಮೆ ಲಾಕ್‍ಡೌನ್ ಶುರುವಾಗಿದೆ. ಸಂಜೆ ಏಳರಿಂದಲೇ ಕಫ್ರ್ಯೂ ಜಾರಿಯಲ್ಲಿ ಇದ್ದು, ಇದು ನಾಡಿದ್ದು ಅಂದ್ರೆ ಸೋಮವಾರ ಬೆಳಗ್ಗೆ 7 ಗಂಟೆಯವರೆಗೂ ಮುಂದುವರೆಯಲಿದೆ. ಇದನ್ನು ಮೊದಲು ಕೇರಳದಲ್ಲಿ ಜಾರಿಗೆ ತರಲಾಗಿತ್ತು. ಇದೀಗ ರಾಜ್ಯದಲ್ಲಿಯೂ ಜಾರಿ ಆಗ್ತಿದೆ.
ಸಂಡೇ ಲಾಕ್‍ಡೌನ್: ಏನಿರುತ್ತೆ?
* ಚಿಕನ್, ಮಟನ್ ಸ್ಟಾಲ್
* ಹಣ್ಣು, ತರಕಾರಿ ಅಂಗಡಿ
* ಹಾಲು, ದಿನಸಿ ಅಂಗಡಿ
* ಆಸ್ಪತ್ರೆ, ಮೆಡಿಕಲ್ ಸ್ಟೋರ್, ಆಂಬ್ಯುಲೆನ್ಸ್
* ಮದುವೆಗಳಿಗೆ ಷರತ್ತಿನ ಅನುಮತಿ
* ಪೇಪರ್, ಇಂಟರ್ನೆಟ್ ಸೇವೆ
ಸಂಡೇ ಲಾಕ್‍ಡೌನ್: ಏನಿರಲ್ಲ?
* ಮದ್ಯ ಮಾರಾಟ ಇರಲ್ಲ
* ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಇರಲ್ಲ
* ಆಟೋ, ಟ್ಯಾಕ್ಸಿ ರಸ್ತೆಗೆ ಇಳಿಯುವಂತಿಲ್ಲ
* ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ
* ಜನ ಅನಗತ್ಯವಾಗಿ ಹೊರಗೆ ಬರುವಂತಿಲ್ಲ
* ಎಲ್ಲಾ ಉದ್ಯಾನವನಗಳು ಬಂದ್
* ಜಾಗಿಂಗ್, ವಾಕಿಂಗ್‍ಗೆ ಪರ್ಮಿಷನ್ ಇಲ್ಲ
* ಸಲೂನ್, ಬ್ಯೂಟಿ ಪಾರ್ಲರ್, ಸ್ಪಾ ಇರಲ್ಲ
* ಬಟ್ಟೆ, ಚಪ್ಪಲಿ ಅಂಗಡಿ, ಜ್ಯುವೆಲ್ಲರಿ ಶಾಪ್ ಬಂದ್
* ಗಾರ್ಮೆಂಟ್ಸ್ ಸೇರಿ ಎಲ್ಲಾ ಕಾರ್ಖಾನೆ ಬಂದ್
* ಖಾಸಗಿ ಕಂಪನಿಗಳು ಕೆಲಸ ನಿರ್ವಹಿಸುವಂತೆ ಇಲ್ಲ
* ನಗರದ ಪ್ರಮುಖ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್
* ಅಂತರ್ ಜಿಲ್ಲೆಗಳ ನಡುವೆ ಸಂಚಾರಕ್ಕೆ ಅವಕಾಶ ಇಲ್ಲ
https://youtu.be/tmeRCcpCcmg