ಬೆಂಗಳೂರು: ಲಾಕ್ ಡೌನ್ ಜಾರಿಯಲ್ಲಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ 35 ಸಾವಿರ ದಾಟಿದ್ದರೆ ಸಾವಿನ ಸಂಖ್ಯೆ 1,147ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸೋಂಕು ಅಪಾಯಕಾರಿ ಮಟ್ಟದಲ್ಲಿರುವ ಪ್ರದೇಶಗಳನ್ನ ಗುರುತಿಸಿರುವ ಕೇಂದ್ರ ಆರೋಗ್ಯ ಇಲಾಖೆ ಮೂರು ವಲಯಗಳನ್ನು ಗುರುತಿಸಿದೆ.
ವೈರಸ್ ಸೋಂಕಿನ ತೀವ್ರತೆಯ ಆಧಾರದ ಮೇಲೆ ಮೂರು ಪಟ್ಟಿ ಮಾಡಲಾಗಿದ್ದು, ರೆಡ್ ಜೋನ್, ಆರೆಂಜ್ ಜೋನ್ ಮತ್ತು ಗ್ರೀನ್ ಜೋನ್ ಎಂದು ವಿಂಗಡಿಸಲಾಗಿದೆ. ರೆಡ್ ಜೋನ್ನಲ್ಲಿ ಸೋಂಕಿನ ತೀವ್ರತೆ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಬೆರಳೆಣಿಕೆ ಪ್ರಕರಣಗಳಿರುವುವು ಆರೆಂಜ್ ಪಟ್ಟಿಯಲ್ಲಿವೆ. ಕಳೆದ 15 ದಿನಗಳಿಂದ ಒಂದೂ ಪ್ರಕರಣ ದಾಖಲಾಗದೇ ಇರುವವನ್ನು ಗ್ರೀನ್ ಜೋನ್ಗೆ ಸೇರಿಸಲಾಗಿದೆ. ಒಟ್ಟು 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಾಗಿಸಲಾಗಿದೆ. ರೆಡ್ ಜೋನ್ ಪಟ್ಟಿಯಲ್ಲಿ ದೇಶಾದ್ಯಂತ 130 ಜಿಲ್ಲೆಗಳಿದ್ದು, ಅದರಲ್ಲಿ ಕರ್ನಾಟಕದ ಮೂರು ಜಿಲ್ಲೆಗಳು ಸೇರಿವೆ.
ರೆಡ್ ಝೋನ್:
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಮೈಸೂರು ಜಿಲ್ಲೆಗಳು ರೆಡ್ ಝೋನ್ ವಲಯದಲ್ಲಿವೆ.
ಆರೆಂಜ್ ಪಟ್ಟಿಯಲ್ಲಿ ರಾಜ್ಯದ 13 ಜಿಲ್ಲೆಗಳು
ಬೆಳಗಾವಿ
ವಿಜಯಪುರ
ಕಲಬುರ್ಗಿ
ಬಾಗಲಕೋಟೆ
ಮಂಡ್ಯ
ಬಳ್ಳಾರಿ
ಧಾರವಾಡ
ದಕ್ಷಿಣ ಕನ್ನಡ
ಬೀದರ್
ಚಿಕ್ಕಬಳ್ಳಾಪುರ
ಗದಗ
ಉತ್ತರ ಕನ್ನಡ
ತುಮಕೂರು
ಗ್ರೀನ್ ಝೋನ್:
ರಾಮನಗರ
ಹಾಸನ
ಚಿಕ್ಕಮಗಳೂರು
ಮೇ 3ರ ನಂತರ ಈ ಮೂರು ವಲಯಗಳಿಗೆ ಪ್ರತ್ಯೆಕ ಲಾಕ್ಡೌನ್ ನಿಯಮಗಳು ಅನ್ವಯವಾಗುವ ಸಾಧ್ಯತೆ ಇದೆ.