Breaking News

ಲಾಕ್ ಡೌನ ಸಮಯದಲ್ಲಿ ಸಂಕಷ್ಟಕ್ಕೊಳಗಾದ ವಡಗಾವಿಯ 40 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು.

Spread the love

ಬೆಳಗಾವಿ: ಕೊರೊನಾ ದಿಂದಾಗಿ ಸರ್ಕಾರ ಘೋಷಿಸಿದ ಲಾಕ್ ಡೌನ ಸಮಯದಲ್ಲಿ ಸಂಕಷ್ಟಕ್ಕೊಳಗಾದ ವಡಗಾವಿಯ 40 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು.
 ಇಲ್ಲಿನ ಅಲಾರವಾಡ ಸೇತುವೆಯ ಕೆಳಗಡೆ ಬುಧವಾರ  ಹಿರಿಯ ಕನ್ನಡ ಹೋರಾಟಗಾರ ಮಲ್ಲಪ್ಪ ಅಕ್ಷರದ, ಗಜಾನನ ಗುಂಜೇರಿ, ರಾಜೂ ಟೋಪಗಿ, ಮ್ಯಾಗೋಟಿ ಆಯೋಜಿಸಿದ್ದರು.
ಜನರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಕಳೆದ ಮಾರ್ಚ 23 ರಂದು,ದಾನಿಗಳ ನೆರವಿನಿಂದ, ಆರಂಭಿಸಿದ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನವು ಬುಧವಾರಕ್ಕೆ  86 ನೇ ದಿನದಲ್ಲಿ ಕಾಲಿರಿಸಿದೆ.
ಪ್ರಾದೇಶಿಕ ಆಯುಕ್ತರ ಕಚೇರಿಯ ಉಪತಹಸಿಲ್ದಾರ  ಸಾರಿಕಾ ಸಿಂಗನಮಕ್ಕಿ, ರಾಜೇಶ ಸಿಂಗನಮಕ್ಕಿ, ಖ್ಯಾತ ಚಾರ್ಟರ್ಡ ಅಕೌಂಟಂಟ್  ಪ್ರಕಾಶ ತಿಗಡಿ, ಹಣಕಾಸು ಇಲಾಖೆಯ ಜಂಟೀ ನಿರ್ದೇಶಕ  ಈರಣ್ಣ ಚಂದರಗಿ ,ರವಿ ಸಂಕೇಶ್ವರಿ, ಹರೀಶ ಕರಿಗೊಣ್ಣವರ ಕಿಟ್ ವಿತರಿಸಿದರು.

Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ