(ಬೆಳಗಾವಿ) – ಇಲ್ಲಿಯ ಮುತಗಾ ಬಳಿ ಭೀಕರ ಅಪಘಾತದಲ್ಲಿ ವಾಕಿಂಗ್ ಹೋಗಿದ್ದ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ.
ಭಾನುವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದ್ದು, ಸವಿತಾ ಬಾಲಕೃಷ್ಣ ಪಾಟೀಲ (44) ಮತ್ತು ವಿದ್ಯಾ ಬಾಲಕೃಷ್ಣ ಪಾಟೀಲ (52 ) ಎನ್ನುವ ಮಹಿಳೆಯರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಾಂತಾ ಕೃಷ್ಣಾ ಚೌಗಲೆ (55) ಎನ್ನುವ ಮಹಿಳೆ ಗಾಯಗೊಂಡಿದ್ದಾಳೆ.
ಬಾಳೆಕುಂದ್ರಿ ಕೆಎಚ್ ಗ್ರಾಮದ ಯುವರಾಜ ಜಾಧವ ಎನ್ನುವವರು ವೇಗ ಮತ್ತು ನಿರ್ಲಕ್ಷತನದಿಂದ ಕಾರು ಚಾಲನೆ ಮಾಡಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯರ ಮೇಲೆ ಹಾಯಿಸಿ ಅಪಘಾತ ಮಾಡಿದ್ದಾರೆ ಎಂದು ಮಾರಿಹಾಳ ಪೊಲೀಸರು ತಿಳಿಸಿದ್ದಾರೆ.
ಯುವರಾಜ ಜಾಧವ ಬಿಜೆಪಿ ಯುವ ಮೋರ್ಚಾ ಮುಖಂಡರಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಈಗ ಎಫ್ ಐಆರ್ ದಾಖಲಾಗುತ್ತಿದೆ