Breaking News

ಕೊರೋನಾ ಭಯ ಬೇಡ- ನಿಮ್ಮೊಂದಿಗೆ ಡಾ.ಸೀಮಾ ಸಾಧಿಕಾ ಇರ್ತಾರೆ…!

Spread the love

ಬೆಂಗಳೂರು: ಕೊರೋನಾ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ಬಹುತೇಕರಿಗೆ ಈಗಾಗಲೇ ಸಹಾಯ ಮಾಡುತ್ತಿರುವ ನಮ್ಮ ಮಿತ್ರ ಫೌಂಡೇಷನ್ ಸಂಸ್ಥಾಪಕಿ ಡಾ.ಸೀಮಾ ಸಾಧಿಕಾ ಅವರು, ಪ್ರತಿಯೊಂದು ಮಾಹಿತಿಯನ್ನ ನೀಡಲು ಮುಂದಾಗಿದ್ದಾರೆ.

 

 

ಕೊರೋನಾ ಸಮಯದಲ್ಲಿ ಆರೋಗ್ಯ ಏರುಪೇರಾದ ತಕ್ಷಣ ಏನು ಮಾಡಬೇಕು. ಮನೆಯಲ್ಲಿಯೇ ಹೇಗೆ ಆರೋಗ್ಯ ಸುಧಾರಿಸಿಕೊಳ್ಳಬಹುದು. ನೀವು ಯಾವ ಔಷಧ ತೆಗೆದುಕೊಳ್ಳಬಹುದೆಂಬ ಮಾಹಿತಿಯನ್ನ ನೀಡಲಿದ್ದಾರೆ. ಅವಶ್ಯಕವಿದ್ದ ಸಮಯದಲ್ಲಿ ಆಸ್ಪತ್ರೆಗಳ ಮಾಹಿತಿಯನ್ನೂ ತಮಗೆ ನೀಡಲಿದ್ದಾರೆ.

 

 

ಜ್ವರ, ಕೆಮ್ಮು ಬಂದ ತಕ್ಷಣವೇ ಹಲವರು ಭಯದಲ್ಲಿ ಮುಳುಗುತ್ತಿದ್ದಾರೆ. ಏನೇ ಆರೋಗ್ಯದಲ್ಲಿ ಏರುಪೇರಾದರೂ, ಭಯಗೊಳ್ಳದೇ ತಮ್ಮನ್ನ ಸಂಪರ್ಕ ಮಾಡಿದ್ರೇ ಉತ್ತಮ ಸಲಹೆ, ಸೂಚನೆಯನ್ನ ನೀಡಲಾಗುವುದೆಂದು ಡಾ.ಸೀಮಾ ಸಾಧಿಕಾ ಅವರು ಕರ್ನಾಟಕವಾಯ್ಸ್.ಕಾಂ ಗೆ ತಿಳಿಸಿದ್ದಾರೆ.

 

ಡಾ.ಸೀಮಾ ಸಾಧಿಕಾ ಅವರ ಮೊಬೈಲ್ ಸಂಖ್ಯೆ 8971750001 ಸಂಪರ್ಕಿಸಿದರೇ, ಯಾವುದೇ ರೀತಿಯ ಫೀ ಪಡೆಯದೇ ಉಚಿತವಾಗಿ ಸಹಾಯ ಮಾಡಲಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಹಲವರಿಗೆ ಮಾಹಿತಿಯನ್ನ ನೀಡಿದ್ದು, ಹಲವರಿಗೆ ಆಸ್ಪತ್ರೆಯ ವ್ಯವಸ್ಥೆಯನ್ನೂ ಕಲ್ಪಿಸುತ್ತಿದ್ದಾರೆ. ಕೆಲ ಜನರಿಗೆ ಆಕ್ಸಿಜನ್ ವ್ಯವಸ್ಥೆಯನ್ನೂ ಮಾಡಿಸಿದ್ದಾರೆ.

 

ಕೊರೋನಾದಿಂದ ಭಯಭೀತರಾಗದೇ ಧೈರ್ಯದಿಂದ ಚಿಕಿತ್ಸೆ ಪಡೆದರೇ, ಅದರಿಂದ ಪಾರಾಗುವುದು ಸುಲಭ ಎನ್ನುವ ಡಾ.ಸೀಮಾ ಸಾಧಿಕಾ ಅವರು, ಯಾವುದೇ ಸಮಯದಲ್ಲೂ ಮೊಬೈಲ್ ಮೂಲಕ ಸಂಪರ್ಕ ಮಾಡಬಹುದೆಂದು ಹೇಳಿದ್ದಾರೆ.


Spread the love

About Laxminews 24x7

Check Also

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ– -ಎಸಿಪಿ ನಾರಾಯಣ ಬರಮನಿ

Spread the love ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ