ಬಳ್ಳಾರಿ, ಡಿ.06:ಹೊಸಪೇಟೆ ರಸ್ತೆಯ ಅಲ್ಲಿಪುರ ಬಸ್ ನಿಲ್ದಾಣ ಸಮೀಪ, ಮಜೀದ್ ಎ ಆಲಿಯಾದಲ್ಲಿ ಕಳ್ಳತನ ಶನಿವಾರ ರಾತ್ರಿ ನಡೆದಿದೆ. ಮಸೀದಿಯಲ್ಲಿದ್ದ ವೆಂಟಿಲೇಟರ್‍ಗಳು, ಗ್ರಿಲ್‍ಗಳು, ಯುಪಿಎಸ್ ಬ್ಯಾಟರಿ, ಕಟ್ಟಡ ನಿರ್ಮಾಣಕ್ಕೆ ಇಡಲಾಗಿದ್ದ ಕಬ್ಬಿಣ, 14 ಕಬ್ಬಿಣದ ಕಿಟಕಿಗಳು, ನೀರಿನ ಸಂಪ್‍ನ ಬಾಗಿಲುಗಳು ಸೇರಿದಂತೆ ಅಂದಾಜು 2 ಲಕ್ಷ ರೂ.
ಮಾಲೀಕರು, ನಿರ್ವಹಣೆ ಹೊಂದಿರುವ ಆಲಿಯಾಬೇಗಂ ಅವರು ತಿಳಿಸಿದರು.
ಈ ಹಿಂದೆ ಮೂರು ಸಲ ಕಳ್ಳತನ ಆದಾಗಲೂ ಕೂಡ ಗ್ರಾಮೀಣ ಠಾಣೆಗೆ ಮೌಖಿಕ ದೂರು ನೀಡಿದರೂ ಕೂಡ, ಪೊಲೀಸರು ದೂರು ದಾಖಲಿಸಿಕೊಂಡು ಎಫ್‍ಐಆರ್ ದಾಖಲಿಸಿಲ್ಲ. ಈಗ ನಾಲ್ಕನೇ ಸಲ ಕಳ್ಳತನ ಆಗಿದೆ. ಕಳೆದ 9 ವರ್ಷಗಳಿಂದ ಮಸೀದಿಯಲ್ಲಿ ನಾಲ್ಕು ಹೊತ್ತು ಪ್ರಾರ್ಥನೆ ನಡೆಯುತ್ತಿದೆ, 2014 ರಲ್ಲಿ ಮಸೀದಿ ಕಾರ್ಯಾರಂಭ ಮಾಡಿತ್ತು. ದಿ.ಸಯ್ಯದ್ ಜಾಕೀರ್ ಅಲಿ ಅವರು ತಮ್ಮ ವೈಯಕ್ತಿಕವಾಗಿ ಹಣ ವಿನಿಯೋಗಿಸಿ ಮಸೀದಿ ನಿರ್ಮಾಣ ಮಾಡಿದ್ದರು.
“ಪೊಲೀಸರು ಈ ಸಮಸ್ಯೆಗೆ ಸಂಬಂಧಿಸಿ ಕೇವಲ ಬಂದು ಪರಿಶೀಲನೆ ಮಾಡಿದ್ದಾರೆ ಅಷ್ಟೇ, ನಿಮ್ಮ ಭದ್ರತೆ ನೀವು ಮಾಡಿಕೊಳ್ಳಿ, ಸಿಸಿಟಿವಿ ಕ್ಯಾಮೆರಾ ಹಾಕಿ ಅಥವಾ ವಾಚ್‍ಮನ್ ನಿಯೋಜನೆ ಮಾಡಿ ಎಂದು ಪೊಲೀಸರು ಸಬೂಬು ಹೇಳುತ್ತಾರೆ, ಯಾರಾದರೂ ವ್ಯಕ್ತಿಗಳನ್ನು ಅನುಮಾನದ ಆಧಾರದಲ್ಲಿ ಬಂಧಿಸಿದರೆ ಕೋಮು ಗಲಭೆಗೆ ಅವಕಾಶ ಮಾಡಿದಂತಾಗುತ್ತದೆ ಎಂದು ನಮ್ಮನ್ನೇ ಹೆದರಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು” ಎಂದು ಮಸೀದಿಯ ಮಾಲೀಕತ್ವ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಆಲಿಯಾಬೇಗಂ ಅವರು ಪತ್ರಿಕೆಗೆ ತಿಳಿಸಿದರು.