ಬೆಳಗಾವಿ,.ಜು.23: ರಾಜಸ್ಥಾನ ಮೂಲದ ಅನುಪ ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ಜೈನ ಧರ್ಮ ಮತ್ತು ಜೈನ ಸಮಾಜದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದು, ಈ ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸಬೇಕೆಂದು ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿ ಇಂದು ಬುಧವಾರ ವಿವಿಧ ಜೈನ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅನುಪ ಮಂಡಲ ಸಂಘಟನೆಯು ಜೈನ ಧರ್ಮ ಮತ್ತು ಜೈನ ಸಮಾಜ ಕುರಿತಂತೆ ಅಪಪ್ರಚಾರ ಮಾಡುತ್ತಿದೆ. ಜೈನ ಸಾಧು ಸಾಧ್ವಿಗಳ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ.ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಜೈನ ಸಮಾಜದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ವರ್ತಿಸುತ್ತಿದೆ. ಅದಲ್ಲದೇ ಹಿಂದು ಧರ್ಮದ ದೇವ ದೇವತೆಗಳ ಬಗ್ಗೆಯೂ ಅಪಪ್ರಚಾರ ನಡೆಸಿದ್ದು, ಇಂತಹ ಸಮಾಜ ವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಲಾಯಿತು.
ಭಾರತದಂತಹ ಬಹು ಧರ್ಮ ಆಚರಣೆಯಲ್ಲಿರುವ ದೇಶಗಳಲ್ಲಿ ಇಂತಹ ಸಮಾಜಘಾತುಕ ಶಕ್ತಿಗಳು ಧರ್ಮ ಧರ್ಮಗಳ ವಿರುದ್ದ ಜಗಳ ಹಚ್ಚುವ ಕೆಲಸ ಮಾಡುತ್ತಿವೆ. ಈಗಾಲೇ ರಾಜಸ್ಥಾನ ಸರಕಾರ ಅನುಪ ಮಂಡಲ ಸಂಘಟನೆಯನ್ನು ನಿಷೇಧಿಸಿದ್ದರೂ ಸಹ ಈ ಸಂಘಟನೆ ಸಾಮಾಜಿಕ ಜಾಲತಾಣಗಳ ಮೂಲಕ ಜೈನ ಸಮಾಜ ವಿರುದ್ದ ಅವಹೇಳನಕಾರಿ ಹೇಳಿಕೆಗಳನ್ನು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಸಮಾಜದಲ್ಲಿ ಒಡಕು ಹುಟ್ಟಿಸುವಂತ ಕೆಲಸ ಮಾಡುತ್ತಿದೆ. ಆದ್ದರಿಂದ ಇಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಜೈನ ಅಲ್ಪಸಂಖ್ಯಾಕ ಒಕ್ಕೂಟ ಬೆಳಗಾವಿ ಘಟಕ, ಭರತೇಶ ಶಿಕ್ಷಣ ಸಂಸ್ಥೆ, ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ , ಶ್ರೀ. ಚಂದ್ರಪ್ರಭು ಮೂರ್ತಿ ಪೂಜಕ ಸಂಘದ ವತಿಂದ ಮನವಿ ಸಲ್ಲಿಸಲಾಯಿತು.. ಭರತ ಪಾಟೀಲ, ರಾಜೀವ ದೊಡ್ಡಣ್ಣವರ, ಪ್ರಮೋದ ಪಾಟೀಲ, ಅಂಕಿತ ಖೋಡಾ, ರಾಜೇಂದ್ರ ಜೈನ, ವಿಕ್ರಮ ಜೈನ, ವಿಜಯ ಪಾಟೀಲ, ರಾಜು ಖೋಡಾ, ಹೀರಾಚಂದ ಕಲಮನಿ, ಹರ್ಷವರ್ಧನ ಇಂಚಲ, ಉತ್ತಮ ಪೋರವಾಲ, ಪುಷ್ಪಕ ಹಣಮಣ್ಣವರ, ಕುಂತಿನಾಥ ಕಲಮನಿ, ಅಭಯ ಅವಲಕ್ಕಿ, ಕಿರಣ ಕಲಕುಪ್ಪಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Check Also
ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ
Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …