ಬೆಳಗಾವಿ: ತಾಲೂಕಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಮಿತಿ(ಟಿಎಪಿಎಂಎಸ್) ದಿಂದ ಎಂಪಿಎಂಸಿಯ ನಿರ್ದೇಶಕ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾರಿಹಾಳದ ಆಶಿಫ್ ಮುಲ್ಲಾ 9 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಪ್ರತಿ ಸ್ಪರ್ಧಿ ಶಿವನಗೌಡ ಪಾಟೀಲ್ 6 ಮತಗಳ ಪಡೆದು ಪರಾಭವಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಎಂ.ಎಸ್. ಗೌಡಪ್ಪಗೋಳ ಅವರು ಕಾರ್ಯನಿರ್ವಹಿಸಿದರು.
ಚುನಾವಣೆ ಗೆಲುವಿಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಟಿಎಪಿಎಂಎಸ್ ನೂತನ ನಿರ್ದೇಶಕ ಆಶಿಕ್ ಮುಲ್ಲಾ ಅಭಿನಂದನೆ ಸಲ್ಲಿಸಿದರು.
Laxmi News 24×7