Breaking News

ಮಾದಕ ವಸ್ತು ಮುಕ್ತ ಕರ್ನಾಟಕ ಜಾಗೃತಿಗಾಗಿ ಬೆಳಗಾವಿ ಪೊಲೀಸ್ ಇಲಾಖೆಯಿಂದ ಮ್ಯಾರಾಥಾನ್

Spread the love

ಬೆಳಗಾವಿ : ಜಿಲ್ಲಾ ಹಾಗೂ ನಗರ ಪೊಲೀಸ್ ಕಮೀಷ್ನರೇಟ್ ವತಿಯಿಂದ ‘ಮಾದಕ ವಸ್ತು ಮುಕ್ತ ಕರ್ನಾಟಕ’ ಜಾಗೃತಿಗಾಗಿ ನಗರದಲ್ಲಿ ಭಾನುವಾರು 5 ಮತ್ತು 10 ಕಿಮೀ ವಿಭಾಗದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು.
ಜಿಲ್ಲಾ ಪೊಲೀಸ್ ಮೈದಾನದಿಂದ ಬೆಳಗ್ಗೆ ಆರಂಭಗೊಂಡ 5ಕಿಮೀ ಓಟವು ಆರ್‌ಟಿಒ ವೃತ್ತ, ಅಶೋಕ ಸ್ಥಂಭ ವೃತ್ತ, ಕನಕದಾಸ ವೃತ್ತ, ಶ್ರೀನಗರ ಗಾರ್ಡನ್, ಧರ್ಮನಾಥ ವೃತ್ತದ ಮೂಲಕ ಸಂಚರಿಸಿ ಪುನಃ ಮೈದಾನದಲ್ಲಿ ಮುಕ್ತಾಯವಾಯಿತು. 10ಕಿಮೀ ಓಟ ಕೃಷ್ಣದೇವರಾಯ ವೃತ್ತ, ಸದಾಶಿವ ನಗರ, ಜಾಧವ ನಗರ, ಹನುಮಾನ ನಗರವೃತ್ತ, ಹಿಂಡಲಗಾ ಗಣೇಶ ಮಂದಿರ, ಬಿ.ಶಂಕರಾನಂದ ವೃತ್ತ, ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಂಚರಿಸಿತು.
ಐರನ್ ಮ್ಯಾನ್ ಸ್ಪರ್ಧೆಯ ಸಾಧಕ ಆರ್‌ಎಸ್‌ಐ ಸಂಗಮೇಶ ಅನಿ, ಓಟಕ್ಕೆ ಚಾಲನೆ ನೀಡಿದರು. ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಮತ್ತು ಎಸ್ಪಿ ಕೆ.ರಾಮರಾಜನ್ ಖುದ್ದು ಓಟದಲ್ಲಿ ಪಾಲ್ಗೊಂಡು ತಮ್ಮ ಸಿಬ್ಬಂದಿಯನ್ನು ಹುರಿದುಂಬಿಸಿದರು.
ನಗರ ಪೊಲೀಸ್, ಜಿಲ್ಲಾ ಪೊಲೀಸ್, ಮಚ್ಛೆಯ ಕೆಎಸ್‌ಆರ್‌ಪಿ, ಕಂಗ್ರಾಳಿಯ ಪಿಟಿಎಸ್, ಎಸ್‌ಡಿಆರ್‌ಎಫ್ ಪಡೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಮಾದಕ ವಸ್ತು ಮುಕ್ತ ಕರ್ನಾಟಕದ ಜತೆಗೆ ಆರೋಗ್ಯ ಜಾಗೃತಿ, ನಮ್ಮ ಪೊಲೀಸ್ ನಮ್ಮ ಹೆಮ್ಮೆ ಕುರಿತು ಜಾಗೃತಿ ಮೂಡಿಸಲಾಯಿತು.

Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರುದ್ಧ ಜನ ಚಳುವಳಿ

Spread the loveಬೆಳಗಾವಿ : ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಜನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ