Breaking News

ಬೆಳಗಾವಿ ವಿಭಾಗ ಮಟ್ಟದ ಮಹಿಳಾ ರಕ್ಷಣಾ ಪಡೆಗಳಿಗೆ ಕಾರ್ಯಾಗಾರ

Spread the love

ಬೆಳಗಾವಿ: ದೇಶ ಪ್ರಗತಿ ಸಾಧಿಸಲು ಮಹಿಳೆಯ ಪಾತ್ರ ದೊಡ್ಡದು. ಎರಡನೇ ಮಹಾಯುದ್ಧದ ನಂತರ ಜಪಾನ ಮಹಿಳೆಯರು ಕೈ ಕಟ್ಟಿ ಕುಳಿತಿದ್ದರೇ ಆ ದೇಶ  ಇಂದು ಇಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಮ್ಮ ದೇಶದಲ್ಲೂ ಮಹಿಳೆಯರು ಸ್ವಾವಲಂಬಿಗಳಾಗಿ ಹೆಚ್ಚು ಬೆಳೆಯಬೇಕಿದ್ದು, ಇದಕ್ಕಾಗಿಯೇ ಹೆಣ್ಣು ಮಕ್ಕಳ ಸಂರಕ್ಷಣೆ ಮತ್ತು ಸುರಕ್ಷತೆ ಮಹತ್ವ ನೀಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪೊಲೀಸ್ ಆಯುಕ್ತರ  ಕಚೇರಿಯಲ್ಲಿ ಗುರುವಾರ ಬೆಳಗಾವಿ ವಿಭಾಗ ಮಟ್ಟದ ಗೃಹ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಮತ್ತು ಸಖಿ ಕೇಂದ್ರದ ಸಿಬ್ಬಂದಿ ಹಾಗೂ ಬೆಳಗಾವಿ ವಿಭಾಗದ 7 ಜಿಲ್ಲೆಗಳ ಅಕ್ಕ ಪಡೆ ಸಿಬ್ಬಂದಿಗಾಗಿ ಏರ್ಪಡಿಸಿದ್ದ ‘ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ’ ಹಾಗೂ ‘ಅಕ್ಕ ಪಡೆ ಕಾರ್ಯನಿರ್ವಹಣೆ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಕ ಪಡೆ ರಾಜ್ಯ ಸಂಯೋಜಕಿ ಶೈನಿ ರಾಜೇಂದ್ರಕುಮಾರ ಅಕ್ಕ ಪಡೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ ಎಂ.ಎನ್., ಕಾಂಚನ ಅಮಟೆ, ಬೆಳಗಾವಿ ವಿಭಾಗದ ಜಿಲ್ಲೆಗಳ ಉಪನಿರ್ದೇಶಕರು  ಇದ್ದರು. ಪಾರ್ವತಿ ಹೊನವಾಡ ನಿರೂಪಿಸಿದರು. ಸುಚೇತಾ ಕುಲಕರ್ಣಿ ವಂದಿಸಿದರು.

Spread the love

About Laxminews 24x7

Check Also

ಬೆಳಗಾವಿಯ ಯೆಳ್ಳೂರ ಫಲಕ ವಿವಾದ: 10 ವರ್ಷಗಳ ಸುದೀರ್ಘ ಹೋರಾಟಕ್ಕೆ ಸಿಕ್ಕಿತು ಜಯ; ಎಲ್ಲಾ ಆರೋಪಿಗಳು ನಿರ್ದೋಷಿ ಮುಕ್ತ!

Spread the loveಬೆಳಗಾವಿಯ ಯೆಳ್ಳೂರಿನಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ‘ಮಹಾರಾಷ್ಟ್ರ ರಾಜ್ಯ ಯೆಳ್ಳೂರ’ ಫಲಕ ವಿವಾದಕ್ಕೆ ಸಂಬಂಧಿಸಿದಂತೆ ಈಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ