ಬೆಳಗಾವಿ: ಒಂದೇ ವರ್ಷದಲ್ಲಿ ಅಪಘಾತಕ್ಕೆ 800 ಬಲಿ

Spread the love

ಬೆಳಗಾವಿ: ಜಿಲ್ಲೆಯಲ್ಲಿ ಚಾಲಕರ ರ್ನಿಲಕ್ಷ$್ಯ ಮದ್ಯಸೇವನೆ ಮಾಡಿ ವಾಹನ ಚಲಾವಣೆ, ಅತಿಯಾದ ವೇಗ ಹೀಗೆ ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ವರ್ಷದಲ್ಲಿ 800 ಜನ ಮೃತಪಟ್ಟಿದ್ದಾರೆ ಎಂದು ಎಸ್ಪಿ ಕೆ.ರಾಮರಾಜನ್​ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತ ತಡೆಗಟ್ಟಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕೇಸ್​ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಶಬ್ದಮಾಲಿನ್ಯ ತಡೆಗಟ್ಟಲು ಟ್ರಾಕ್ಟರ್​ಗಳಲ್ಲಿನ ಸೌಂಡ್​ ಸಿಸ್ಟಂ ಜಪ್ತಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಸಿದ 300 ಟ್ರಾಕ್ಟರ್​ ಮಾಲೀಕರು, ಚಾಲಕರ ವಿರುದ್ಧ ಕೇಸ್​ ದಾಖಲಿಸಿ ಸೌಂಡ್​ ಸಿಸ್ಟಂ ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಪರಾಧಗಳಲ್ಲಿ ಭಾಗಿಯಾಗುತ್ತಿರುವ ರೌಡಿಶೀಟರ್​ಗಳನ್ನು ಗಡಿಪಾರು ಮಾಡುವುದು ಹಾಗೂ ಅನಗತ್ಯವಾಗಿ ಗುಂಪು ಕಟ್ಟಿಕೊಂಡು ಓಡಾಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ರೌಡಿಶೀಟರ್​ ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ. ಯರಗಟ್ಟಿ ಪಟ್ಟಣದ ಹೊರವಲಯದಲ್ಲಿ ರೌಡಿಶೀಟರ್​ ಒಬ್ಬನ ಜನ್ಮದಿನ ಆಚರಣೆ ನೆಪದಲ್ಲಿ ಹೆದ್ದಾರಿ ತುಂಬ ವಾಹನ ಓಡಾಡಿಸಿ, ಸಾರ್ವಜನಿಕರಿಗೆ ಕಿರಿಕಿರಿ ನೀಡಿ, ಸಂಚಾರ ನಿಯಮ ಉಲ್ಲಂಸಿರುವ ಹಿನ್ನೆಲೆಯಲ್ಲಿ ಕೇಸ್​ ದಾಖಲಿಸಿ ವಾಹನ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪ ಮಲಪ್ರಭಾ ನದಿಯಲ್ಲಿ  ಪತ್ತೆಯಾಗಿರುವ ಮೂರು ಬೈಕ್​ ಕಳವಾಗಿದ್ದವು. ಈ ಕುರಿತು ಸವದತ್ತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನದಿಯಲ್ಲಿ ಬೈಕ್​ ಎಸೆದಿರುವವರ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

Spread the love

About Laxminews 24x7

Check Also

Belagavi: ಡಾ.ಕೋರೆಗೆ ಪದ್ಮಶ್ರೀ ನಾಡಿಗೆ ಸಂದ ಗೌರವ

Spread the loveಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ