ಬೆಳಗಾವಿ (ಜು.05): ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸರ್ಕಾರದಿಂದ 13.54 ಕೋಟಿ ರು. ಖರ್ಚು ಆಗಿರುವುದು ಮಾಹಿತಿ ಹಕ್ಕಿನಿಂದ ಬಹಿರಂಗಗೊಂಡಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಅಧಿಕಾರಿಗಳು ನೀರಿನಂತೆ ಪೋಲು ಮಾಡಿದ್ದಾರೆ ಎಂದು ಆರೋಪಿಸಿದರು. ಯಾವುದೇ ಜನಪ್ರತಿನಿಧಿ ಅವಧಿಗೆ ಮುನ್ನ ಪಕ್ಷಾಂತರ ಮಾಡುವ, ರಾಜೀನಾಮೆ ನೀಡಿದ ಮೇಲೆ ನಡೆಯುವ ಉಪಚುನಾವಣೆಯಲ್ಲಿ ರಾಜೀನಾಮೆ ನೀಡಿದಲ್ಲಿ ಅವರಿಂದಲೇ ಉಪಚುನಾವಣೆಯ ಖರ್ಚು ವೆಚ್ಚ ಭರಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.
‘ಕೈ’ಸಂಪರ್ಕದಲ್ಲಿ ಬಿಜೆಪಿ, ಜೆಡಿಎಸ್‌ನ ಕೆಲವರು
ಉಪಚುನಾವಣೆಯಲ್ಲಿ ಎಲ್ಲ ತಹಸೀಲ್ದಾರಗೆ ಪ್ರತಿಯೊಂದು ಮತಗಟ್ಟೆಗೆ 30 ಸಾವಿರದಂತೆ 8,69,89,000 ರು.
ವೆಚ್ಚ ಮಾಡಿದ್ದಾರೆ. ಅಲ್ಲದೆ ವೆಬ್ ಕಾಸ್ಟಿಂಗ್ ಮಾಡಿದ ಕಂಪನಿಗೆ 1,41,53,000 ರು. ವೆಚ್ಚ ಮಾಡಿದ್ದಾರೆ. ವಿವಿಧ ಕಾಮಗಾರಿ ಹೆಸರಿನಲ್ಲಿ ನಿರ್ಮಿತಿ ಇಲಾಖೆಗೆ 1,32,95,000 ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕೋವಿಡ್ ಕಿಟ್‌ಗೆ 72 ಲಕ್ಷ, 337 ಬಸ್‌ಗಳಿಗೆ ಬಾಡಿಗೆ 68.36 ಲಕ್ಷ ರು. ನೀಡಿದ್ದಾರೆ ಎಂದರು. ಚುನಾವಣೆಯ ವೇಳೆ ತಹಸೀಲ್ದಾರ್ ಜೊತೆಗೆ ಮತಗಟ್ಟೆಗೆ 30 ಸಾವಿರ ನೀಡಿದ್ದು, ಸಾರ್ವಜನಿಕರಿಗೆ ಪ್ರಶ್ನೆ ಎದುರಾಗಿದೆ.
ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ?: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು .
ಸರ್ಕಾರವೇ ಇದಕ್ಕೆಲ್ಲ ವ್ಯವಸ್ಥೆ ಇರುತ್ತದೆ. ಮತಯಂತ್ರಗಳನ್ನು ತಂದುಕೊಡುತ್ತದೆ. ಆದರೆ ಮತಗಟ್ಟೆಗೆ ತಹಸೀಲ್ದಾರ್ ಅವರಿಗೆ 30 ಸಾವಿರ ಯಾವುದಕ್ಕೆ ವೆಚ್ಚ ಮಾಡಿದ್ದಾರೆ ಎನ್ನುವುದು ಸಾರ್ವಜನಿಕರ ಮುಂದೆಯೇ ಬಹಿರಂಗಪಡಿಸಲು ಆಗ್ರಹಿಸಿದರು.