Breaking News

ಬೆಳಗಾವಿಯಲ್ಲಿ ಮಟ್ಕಾ ಅಡ್ಡೆ ಮೇಲೆ ದಾಳಿ: ನಾಲ್ವರ ಬಂಧನ

Spread the love

ಬೆಳಗಾವಿಯಲ್ಲಿ ಮಟ್ಕಾ ಅಡ್ಡೆ ಮೇಲೆ ದಾಳಿ: ನಾಲ್ವರ ಬಂಧನ

ಬೆಳಗಾವಿ : ಅಷ್ಟೇ ಗ್ರಾಮದಲ್ಲಿನ ಮಟಕಾ ಅಡ್ಡೆ ಮೇಲೆ ಮಾರಿಹಾಳ ಠಾಣೆ ಪೊಲೀಸರು ನಿನ್ನೆ ತಡರಾತ್ರಿ ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಷ್ಟೇ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ನಾಯಕ್, ರಾಜು ಕಾಕತಿ, ರಮೇಶ ಗುರುನಾಥ ದೊಡಮನಿ, ಸುಧಾಕರ ನಂದಗಡಕರ ಬಂಧಿತರು. ಮಾರಿಹಾಳ ಠಾಣೆ ಪೊಲೀಸರು ಖಚಿತ ಮಾಹಿತಿ ಆದಾರದ ಮೇಲೆ ಡಿಸಿಪಿ ವಿಕ್ರಂ ಆಮಟೆ ನೇತೃತ್ವದ ತಂಡ ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.

ಅವರಿಂದ ರೂ. 8220 ನಗದು ಹಣ, 3 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಓಸಿ ಬುಕ್ಕಿಗಳಾದ ಅಶೋಕ ನಾಯಕ, ನಿತೀನ್ ಪೆಡ್ನೆಕರ ಇವರ ಮೇಲೆಯೂ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ತರಳಬಾಳು ಹುಣ್ಣಿಮೆ ವೇದಿಕೆ | ದೂಷಣೆ ಬಿಟ್ಟು ಒಂದಾಗಿ: ಶ್ರೀಗಳ ತಾಕೀತು.

Spread the loveಭದ್ರಾವತಿ (ಶಿವಮೊಗ್ಗ): ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವು ‘ದಾವಣಗೆರೆ ರಾಜಕಾರಣ’ದ ರಾಜಿ ಪಂಚಾಯಿತಿಗೆ ವೇದಿಕೆ ಆಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ