Breaking News

ಸೈನಿಕನ ಕುಟುಂಬಸ್ಥರ ಮೇಲೆ ಬೆಳಗಾವಿ ಬಿಜೆಪಿ ಮುಖಂಡನ ದರ್ಪ : ಕಬ್ಬಿಣ ರಾಡ್ ನಿಂದ ಹಲ್ಲೆ !

Spread the love

 

ಬೆಳಗಾವಿ : ಆಸ್ತಿ ವಿಚಾರವಾಗಿ ಬೆಳಗಾವಿ ಮಹಾನಗರ ಘಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ ನಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಧಿಕಾರಿಗಳು ಕೇಸ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸೈನಿಕ ಭೀಮ್ಮಪ್ಪಾ ನರಸಗೌಡ ಕುಟುಂಬಸ್ಥರು ಆರೋಪಿಸಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮದವರ ಮುಂದೆ ಅಳಲು ತೊಡಿಕೊಂಡ ಸೈನಿಕ ಕುಟುಂಬ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ಅತ್ತ ಸೇನೆಯಲ್ಲಿ ಸೈನಿಕ ಸೇವೆ ಸಲ್ಲಿಸುತ್ತಿದ್ದರೆ. ಇತ್ತ ಸೈನಿಕ ಕುಟುಂಬಸ್ಥರ ಮೇಲೆ ಬಿಜೆಪಿ ಮುಖಂಡ ಹಲ್ಲೆ ಮಾಡಿದ್ದಾನೆ. 2005ರಲ್ಲಿ ಬೆಳಗಾವಿ ಕಣಬರ್ಗಿ ಗ್ರಾಮದಲ್ಲಿ ಸೈನಿಕ 1.5 ಗುಂಟೆ ಜಮೀನನ್ನು ಖರೀದಿ ಮಾಡಲಾಗಿದೆ. ಬಳಿಕ ಹಣದ ಕೊರತೆಯಿಂದ ಕೆಲವು ವರ್ಷದಿಂದ ಖಾಲಿ ಬಿಡಲಾಗಿದೆ.

ಸದ್ಯ ಮನೆ ನಿರ್ಮಿಸಲು ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ ಜ. 31ರಂದು ಏಕಾಏಕಿ ಮುರುಘೇಂದ್ರಗೌಡ ಪಾಟೀಲ ಸೇರಿ ಮೂವರು ಜಮೀನು ನಮ್ಮದು ಎಂದು ಬೇದರಿಕೆ ಹಾಕುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಹೊದ ಮಗನಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ .

ಆಸ್ತಿಯ ಸುಳ್ಳು ದಾಖಲಾತಿ ಪತ್ರಗಳನ್ನು ಸೃಷ್ಟಿಸಿ, ಬೇದರಿಕೆ ಹಾಕುತ್ತಿದ್ದಾರೆ. ನಾವು ಪ್ರಶ್ನೆ ಮಾಡಿದ್ರೆ ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಇದೇನಿ. ಯಾರಿಗೆ ಬೇಕಾದವರಿಗೂ ಹೇಳಿಕೊಳ್ಳಿ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳುತ್ತೇನೆ ಎಂದು ಬೇದರಿಕೆ ಹಾಕುತ್ತಿದ್ದಾನೆ ಅಂತಾ ಸೈನಿಕ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೊದ್ರೆ, ಪೊಲೀಸರು ರಾಜಿ ಪಂಚಾಯಿತಿ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ