Breaking News

ಕನ್ನಡಿಗರ ಕ್ಷಮೆ ಕೇಳಿದ ಬೆಳಗಾವಿಯ ಉದ್ಯಮಬಾಗಿನ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ..!

Spread the love

ನಿನ್ನೆ ಬೆಳಗಾವಿಯ ಉದ್ಯಮಬಾಗಿನ ಬ್ಯಾಂಕ್ ಆಫ್ ಬರೋಡಾಗೆ ವಯಕ್ತಿಕ ಕೆಲಸದ ನಿಮಿತ್ಯ ಅನೀಲ್ ದಡ್ಡಿಮನಿ ಅವರು ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಯ ಸಿಬ್ಬಂದಿ ಕನ್ನಡದಲ್ಲಿ ಮಾತನಾಡದಿದ್ದಾಗ, ಕನ್ನಡದಲ್ಲಿ ಸೇವೆ ಕೊಡುವಂತೆ ಅನೀಲ್ ದಡ್ಡಿಮನಿ ಅವರು ಕೇಳಿಕೊಂಡಿದ್ದಾರೆ. ಆದರೆ ಈ ಬ್ಯಾಂಕಿನ ಸಿಬ್ಬಂದಿ ಅನೀಲ್ ದಡ್ಡಿಮನಿ ಅವರು ಕೆಲಸ ಮಾಡುವ ಕಂಪನಿಗೆ ಕರೆ ಮಾಡಿ, ಅನೀಲ್ ಅವರ ಬಗ್ಗೆ ಅವರು ಕೆಲಸ ಮಾಡುವ ಕಂಪನಿಗೆ ಆರೋಪ ಮಾಡಿದ್ದಾರೆ. ಇದರಿಂದ ಆ ಕಂಪನಿಯ HR ಅನೀಲ್ ಅವರಿಗೆ ಕರೆ ಮಾಡಿ, ವಿಚಾರಿಸಿದ್ದಾರೆ. ಇದರಿಂದ ಅನೀಲ್ ದಡ್ಡಿಮನಿ ಅವರು ಬೇಸರ ವ್ಯಕ್ತಪಡಿಸಿ, ಇಂದು ಆ ಬ್ಯಾಂಕಿಗೆ ತೆರಳಿ ಪ್ರಶ್ನೆ ಮಾಡಿದ್ದಾರೆ. ಕನ್ನಡಪರ ಹೋರಾಟಗಾರರು ಬ್ಯಾಂಕಿಗೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೋಲೀಸರು, ಪರಿಸ್ಥಿತಿಯನ್ನಾ ಶಾಂತಗೊಳಿಸಿದ್ದಾರೆ.

ಈ ಬ್ಯಾಂಕಿನ ಸಿಬ್ಬಂದಿ ಕನ್ನಡದಲ್ಲಿ ಗ್ರಾಹಕರಿಗೆ ಸೇವೆ ಕೊಡದೆ ಇದ್ದದ್ದು ಮೊದಲನೇ ತಪ್ಪು, ಇದನ್ನಾ ಪ್ರಶ್ನೆ ಮಾಡಿದ ಅನೀಲ್ ದಡ್ಡಿಮನಿ ಅವರು ಕೆಲಸ ಮಾಡುವ ಕಂಪನಿಗೆ ಆರೋಪ ಮಾಡಿದ್ದು ಎರಡನೇ ತಪ್ಪು. ಗ್ರಾಹಕನ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿದ ಈ ಬ್ಯಾಂಕ್ ಸಿಬ್ಬಂದಿಯನ್ನಾ ಕೂಡಲೇ ಅಮಾನತ್ತು ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ.


Spread the love

About Laxminews 24x7

Check Also

ಮಹಾವೀರ ನಗರದಲ್ಲಿ ಶಾಸಕ ಆಸೀಫ್ ಸೇಠ್ ಜನತಾ ದರ್ಬಾರ್: ಸಾರ್ವಜನಿಕರ ಅಹವಾಲು ಆಲಿಕೆ

Spread the loveಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಸೀಫ್ ಸೇಠ್ ಅವರು ಮಹಾವೀರ ನಗರದಲ್ಲಿ ನಡೆಸಿದ ‘ಜನತಾ ದರ್ಬಾರ್’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ