ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ವೇಳೆ 3,000 ವರ್ಷದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆ ಪತ್ತೆಯಾಗಿದೆ.
ಸುಮಾರು 3,000 ವರ್ಷದಿಂದ 5,000 ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಇದಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್ ಸುಗಂಧಿ ಅವರಿಂದ ಉತ್ಖನನ ಕಾರ್ಯ ನಡೆಯುತ್ತಿದೆ. ವಾರದ ಹಿಂದೆ ಉತ್ಪನನದ ವೇಳೆ ಮಾನವನ ಮೂಳೆಯೊಂದು ಸಿಕ್ಕಿತ್ತು. ಮಣ್ಣನ್ನು ಮತ್ತಷ್ಟು ಅಗೆದಾಗ 5.5 ಅಡಿ ಉದ್ದದ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ.
ಈ ಜಾಗದಲ್ಲಿ ಮಾನವನ ದೇಹದ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಲಾಗಿದೆ. ಸುಮಾರು 3,000 ವರ್ಷದಿಂದ 5,000 ವರ್ಷಗಳ ಹಿಂದಿನ ಪಳೆಯುಳಿಕೆ ಇರಬಹುದು ಎಂದು ನಮಿತಾ ಎಸ್ ಸುಗಂಧಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಪಳೆಯುಳಿಕೆ ಅಕ್ಕಪಕ್ಕದಲ್ಲಿ ಮಡಿಕೆ ಚೂರುಗಳು ಪತ್ತೆಯಾಗಿದೆ. ಐತಿಹಾಸಿಕ ಪ್ರದೇಶ ತೆಕ್ಕಲಕೋಟೆಯಲ್ಲಿ ಆಗಾಗ ಸಂಶೋಧನಾರ್ಥಿಗಳಿಂದ ಉತ್ಖನನ ನಡೆಯುತ್ತಲೇ ಇರುತ್ತದೆ.
Laxmi News 24×7