ಬಾಗಲಕೋಟೆ : ಕೋವಿಡ್-19 ರ 2ನೇ ಅಲೆಯಿಂದ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇದರಿಂದ ಬಾದಿತವಾದ ವಿದ್ಯುತ್ ಮಗ್ಗ ಘಟಕಗಳಲ್ಲಿನ ನೇಕಾರರು ಹಾಗೂ ಮಗ್ಗಪೂರ್ವ ಚಟುವಟಿಕೆಗಳಾದ ಟ್ವಿಸ್ಟಿಂಗ್, ವೈಂಡಿಂಗ್, ಯಾರ್ನಡೈಯಿಂಗ್, ವಾರ್ಪಿಂಗ್, ಝರಿ ವೈಂಡಿಂಗ್ & ವಾರ್ಪಿಂಗ್, ವಾರ್ಪ ನಾಟಿಂಗ್ ಹಾಗೂ ಸೈಜಿಂಗ್ ಕೆಲಸಗಾರರಿಗೆ ತಲಾ 3 ಸಾವಿರ ರೂ.ಗಳಂತೆ ಪರಿಹಾರಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
‘SSLC ವಿದ್ಯಾರ್ಥಿ’ಗಳೇ ಗಮನಿಸಿ : ಶಿಕ್ಷಣ ಇಲಾಖೆಯ ‘ಈ ಆಪ್’ ಹಾಕೊಳ್ಳಿ, ನಿಮ್ಮ ‘ಪರೀಕ್ಷಾ ಸಿದ್ಧತೆ’ಗೆ ಉಪಯುಕ್ತ
ಈಗಾಗಲೇ ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಪರಿಹಾರಧನ ಪಡೆದ ಫಲಾನುಭವಿಗಳಿಗೆ ನೇರ ನಗದು ನಿರ್ವಹಣೆ (ಡಿ.ಬಿ.ಟಿ) ಮೂಲಕ ಪರಿಹಾರಧನವನ್ನು ಜಮಾ ಮಾಡಲಾಗುವುದು.
ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸಿಯು ಪರಿಹಾರಧನ ಜಮಾ ಆಗದೇ ಇರುವ ಫಲಾನುಭವಿಗಳು ನೇರ ನಗದು ನಿರ್ವಹಣೆ (ಡಿ.ಬಿ.ಟಿ) ಮೂಲಕ ಪರಿಹಾರಧನ ಜಮಾ ಮಾಡಲು ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆ, ಜೋಡಣೆ, ಇ-ಕೆವಾಯ್‍ಸಿ ಮಾಡಿಸಿಕೊಳ್ಳತಕ್ಕದ್ದು.
ರೈತರಿಗೆ ಗುಡ್ ನ್ಯೂಸ್ : ಇಂದಿನಿಂದಲೇ ಕಬಿನಿ ಜಲಾಶಯದಿಂದ ನೀರು ಬಿಡಲು ನಿರ್ಧಾರ – ಸಚಿವ ಎಸ್.ಟಿ.ಸೋಮಶೇಖರ್
ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸದೇ ಇರುವ ವಿದ್ಯುತ್ ಮಗ್ಗ ಘಟಕ ಹಾಗೂ ಮೇಲೆ ವಿವರಿಸಿದ ಮಗ್ಗಪೂರ್ವ ಚಟುವಟಿಕೆ ಮಾಡುವ ಘಟಕದವರು ಕಳೆದ ಸಾಲಿನ ಅರ್ಜಿ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಅರ್ಜಿಯೊಂದಿಗೆ ಘಟಕದ ಕಾರ್ಮಿಕರೊಂದಿಗೆ ಗುಂಪು ಫೋಟೊ, ಆಧಾರ್ ಕಾರ್ಡ, ಮಗ್ಗಗಳ ವಿದ್ಯುತ್ ಬಿಲ್ಲು, ರೇಷನ್ ಕಾರ್ಡ, ಆಧಾರ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ನಕಲು ಪ್ರತಿ ಲಗತ್ತಿಸಿ ಜುಲೈ 19 ರೊಳಗಾಗಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ, ಬಾಗಲಕೋಟೆ (08354-235463) ಹಾಗೂ ಕರ್ನಾಟಕ ಮುಂದುವರೆದ ಕೈಮಗ್ಗ ತರಬೇತಿ ಕೇಂದ್ರ, ಜಮಖಂಡಿ ಕಛೇರಿಗಳಿಗೆ ಸಲ್ಲಿಸುವಂತೆ ತಿಳಿಸಿದೆ.
ದ್ವಿತೀಯ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೇ. 35 ರಷ್ಟು ಅಂಕಗಳೊಂದಿಗೆ ಪಾಸ್!