Breaking News

ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಆಯ್ಕೆ

Spread the love

ಟೆಹ್ರಾನ್: ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ರಾಂತಿ ಮತ್ತು ಬದಲಾವಣೆಯ ಗಾಳಿ ಬೀಸುತ್ತಿದೆ. ಅಮೇರಿಕಾ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಇರಾನ್ ತನ್ನ ತಾತ್ಕಾಲಿಕ ಸರ್ವೋಚ್ಚ ನಾಯಕನನ್ನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ  ಅವರನ್ನು ಘೋಷಿಸಿದೆ ಎಂದು ಇರಾನ್‌ನ ಇಸ್ನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್‌ನ ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ಅರಾಫಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು. ಇವರು ಗಾರ್ಡಿಯನ್ ಕೌನ್ಸಿಲ್‌ನ ಹಿರಿಯ ಸದಸ್ಯರಾಗಿದ್ದು, ಈಗ ರಚನೆಯಾಗಿರುವ ತಾತ್ಕಾಲಿಕ ನಾಯಕತ್ವ ಮಂಡಳಿಯ ಪ್ರಮುಖ ನ್ಯಾಯಶಾಸ್ತ್ರಜ್ಞ  ಆಗಿ ಆಯ್ಕೆಯಾಗಿದ್ದಾರೆ.
ಸಂವಿಧಾನದ ಪ್ರಕಾರ, ಹೊಸ ನಾಯಕನ ಆಯ್ಕೆಯಾಗುವವರೆಗೆ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಮೊಹ್ಸೆನಿ-ಎಜೆಇ ಅವರೊಂದಿಗೆ ಸೇರಿ ಅರಾಫಿ ದೇಶವನ್ನು ಮುನ್ನಡೆಸಲಿದ್ದಾರೆ.
ಅರಾಫಿ ಅವರು ಖಮೇನಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಠಿಣ ನಿಲುವಿನ ಧರ್ಮಗುರು ಎಂದು ಹೆಸರುವಾಸಿಯಾಗಿದ್ದಾರೆ.
ಮಿಲಿಟರಿ ರಂಗದಲ್ಲೂ ಇರಾನ್ ದೊಡ್ಡ ಬದಲಾವಣೆ ಮಾಡಿದೆ. ಶನಿವಾರದ ದಾಳಿಯಲ್ಲಿ ಐಆರ್‌ಜಿಸಿ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಾಕ್‌ಪೋರ್ ಹತ್ಯೆಯಾದ ಕಾರಣ, ಅವರ ಸ್ಥಾನಕ್ಕೆ ಅಹ್ಮದ್ ವಾಹಿದಿ ಅವರನ್ನು ನೇಮಿಸಲಾಗಿದೆ. ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಘಟಕವಾದ ರೆವಲ್ಯೂಷನರಿ ಗಾರ್ಡ್ಸ್ ಅನ್ನು ಮುನ್ನಡೆಸುವ ಜವಾಬ್ದಾರಿ ಈಗ ವಾಹಿದಿ ಹೆಗಲ ಮೇಲಿದೆ.
ಆರಂಭದಲ್ಲಿ ಖಮೇನಿ ಸಾವಿನ ಸುದ್ದಿಯನ್ನು ನಿರಾಕರಿಸಿದ್ದ ಇರಾನ್ ಸರ್ಕಾರ, ಭಾನುವಾರ ಬೆಳಿಗ್ಗೆ ಅಧಿಕೃತವಾಗಿ ಘೋಷಿಸಿದೆ. ದೇಶಾದ್ಯಂತ 40 ದಿನಗಳ ಕಾಲ ಶೋಕಾಚರಣೆ ಇರಲಿದ್ದು, ಇರಾನ್ ತನ್ನ ಶತ್ರುಗಳ ಮೇಲೆ ನರಕದ ಬಾಗಿಲು ತೆರೆಯುವುದಾಗಿ ಪ್ರತಿಜ್ಞೆ ಮಾಡಿದೆ.

Spread the love

About Laxminews 24x7

Check Also

ಭಾರತದ ವಿರುದ್ಧ ಪಾಕ್‌ ಪಂದ್ಯವಾಡಲ್ಲ: ಶೆಹಾಬಾಜ್ ಷರೀಫ್

Spread the love ಇಸ್ಲಾಮಾಬಾದ್‌: ಭಾರತದ  ವಿರುದ್ಧ ಟಿ20 ವಿಶ್ವಕಪ್‌ ಕ್ರಿಕೆಟ್‌  ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಾಬಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ