Breaking News

Laxminews 24x7

ಕಿಕ್ಕೇರಿ: ದೇಗುಲ ಶುಚಿಗೊಳಿಸಿದ ವಿದ್ಯಾರ್ಥಿಗಳು

ಕಿಕ್ಕೇರಿ: ದೇಗುಲ ಶುಚಿಗೊಳಿಸಿದ ವಿದ್ಯಾರ್ಥಿಗಳು ಕಿಕ್ಕೇರಿ: ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲದ ಹೊರಾಂಗಣ, ಗೋಪುರದಲ್ಲಿ ಬೇರು ಬಿಟ್ಟಿದ್ದ ಗಿಡಗಂಟಿಗಳನ್ನು ಬುಧವಾರ ತೆರವು ಮಾಡುವ ಮೂಲಕ ಕಿಕ್ಕೇರಿಯ ಸರ್ಕಾರಿ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮಾದರಿಯಾದರು. ಮುಳ್ಳುಗಿಡ, ಕುರುಚಲು ಗಿಡ, ಆಲದಮರ ಟಿಸಿಲೊಡೆದು ದೇಗುಲಕ್ಕೆ ಅಪಾಯವೊಡ್ಡುವಂತಿತ್ತು. ದೇಗುಲದ ಸ್ಥಿತಿ ಕುರಿತು ಅರ್ಚಕ ಆದಿತ್ಯ ಅವರ ಮನವಿಗೆ ಸ್ಪಂದಿಸಿ 40 ಕ್ಕೂ ಹೆಚ್ಚು ಉಪನ್ಯಾಸಕರು , ವಿದ್ಯಾರ್ಥಿಗಳು ಶುಚಿತ್ವಕ್ಕೆ ಕೈಜೋಡಿಸಿದರು. ಕುಡುಗೋಲು, ಹಾರೆ, ಪಿಕಾಸಿ, …

Read More »

ಮಳೆ: ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ರಾಯಚೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ದಿನವಿಡೀ ಸುರಿದ ಜಿಟಿಜಿಟಿ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಠಿಯಾಯಿತು. ತಾಲ್ಲೂಕಿನ ಪತ್ತೆಪುರ ಗ್ರಾಮದ ಹಳ್ಳ ದಾಟುತ್ತಿದ್ದ ಜಾಗೀರ ವೆಂಕಟಾಪುರ ಗ್ರಾಮದ ಯುವಕ ಬಸವರಾಜ (33) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮಂಗಳವಾರ ರಾತ್ರಿ ಮಳೆ ಸುರಿದಿದೆ. ಹಳ್ಳದಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ಬಸವರಾಜ ಸೇರಿ ಸುಮಾರು 8 ಜನ ಪರಸ್ಪರ ಕೈ ಹಿಡಿದುಕೊಂಡು ಹಳ್ಳ ದಾಟುತ್ತಿದ್ದರು. ಬಸವರಾಜ ಅವರು ಕೈಯಲ್ಲಿ …

Read More »

ಇಬ್ಬರ ಬಂಧನ, 30 ಜಾನುವಾರು ರಕ್ಷಣೆ

ಮದ್ದೂರು: ಹಿಂದೂಪರ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ತಂಡ ಪಟ್ಟಣದಲ್ಲಿ ಬುಧವಾರ ಸರಕು ವಾಹನೊಂದನ್ನು ತಡೆದು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿ ವಾಹನ ಸಹಿತ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಸುಕಿನ 5.45 ರ ಸಂದರ್ಭದಲ್ಲಿ ಐಷರ್ ಸರಕು ಸಾಗಣೆ ವಾಹನದಲ್ಲಿ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಪುನೀತ್ ಕೆರೆಹಳ್ಳಿ ಹಾಗೂ ಅವರ ತಂಡದವರು ವಾಹನವನ್ನು ಪಟ್ಟಣದ ಪ್ರವಾಸಿ ಮಂದಿರದ …

Read More »

ಗಣೇಶನ ವಿಗ್ರಹಕ್ಕೆ ಪಂಜುರ್ಲಿ ದೈವದ ಲುಕ್.! ಕರಾವಳಿಯಲ್ಲಿ ಆಕ್ರೋಶ

ಮುಂಬಯಿ: ರಿಷಬ್‌ ಶೆಟ್ಟಿ (Rishab Shetty) ಅವರ ʼಕಾಂತಾರʼ (Kantara) ಸಿನಿಮಾ ಬಂದ ಬಳಿಕ ತುಳುನಾಡಿನ ದೈವಗಳ ಮೇಲಿನ ನಂಬಿಕೆ ಎಲ್ಲೆಡೆ ಹಬ್ಬಿದೆ. ಆದರೆ ʼಕಾಂತಾರʼ ರಿಲೀಸ್ ಬಳಿಕ ದೈವಗಳ ವೇಷ -ಭೂಷಣ ತೊಟ್ಟು ದೈವಗಳ ಆರಾಧಕರ ಮನಸ್ಸಿಗೆ ಧಕ್ಕೆ ಆಗುವ ವಿಚಾರಗಳು ಕೂಡ ನಡೆದಿದೆ. ಕರಾವಳಿಯಲ್ಲಿ ದೈವಗಳ ಆರಾಧನೆ ಇತ್ತೀಚೆಗಿನ ವರ್ಷಗಳಲ್ಲಿ ಆಚರಿಸಿಕೊಂಡು ಬಂದಿರುವಂಥದ್ದಲ್ಲ, ಸಾವಿರಾರು ವರ್ಷಗಳಿಂದಲೂ ದೈವ -ದೇವರುಗಳ ಚಾಕರಿಯನ್ನು ಮಾಡುತ್ತಾ ಬಂದಿರುವ ಅನೇಕ ಕುಟುಂಬಗಳು ನಮ್ಮಲಿದೆ. ದೈವಗಳ …

Read More »

ಶಿಕ್ಷಕರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಕೆಸರಾಟ. ಪಟ್ಟಿಯಲ್ಲಿ ಬದಲಾವಣೆ

ಕಲಬುರಗಿ: ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಉತ್ತಮ ಶಿಕ್ಷಕರ ಆಯ್ಕೆಯನ್ನು ಅಂತೀಮಗೊಳಿಸುವಲ್ಲಿ ರಾಜಕೀಯ ಪ್ರಹಸನ ನಡೆದಿರುವುದು ಇಡೀ ಶಿಕ್ಷಣ ಇಲಾಖೆ ತಲೆ ತಗ್ಗಿಸುವಂತಾಗಿದೆ. ಡಿಡಿಪಿಐ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ತಾಲೂಕಿಗೆ ಇಬ್ಬರು ಶಿಕ್ಷಕರಂತೆ ಒಟ್ಟು 16 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕಿಗೆ ಒಬ್ಬರಂತೆ 8 ಉತ್ತಮ ಶಿಕ್ಷಕರೆಂದು ಪಟ್ಟಿ ಅಂತೀಮಗೊಳಿಸಿ ಸಿಇಓ ಅವರಿಗೆ ಸಲ್ಲಿಸಿ ಅನುಮತಿ ಪಡೆದು ಸಾರ್ವಜನಿಕ ಪ್ರಕಟಣೆಗಾಗಿ ವಾರ್ತಾ ಇಲಾಖೆ ಗೆ ಸಲ್ಲಿಸಲಾಗಿದೆ. ಆದರೆ …

Read More »

ನಾನು ಯಾವ ರೇಸ್‌ನಲ್ಲೂ ಇಲ್ಲ: ಆರ್.ವಿ.ದೇಶಪಾಂಡೆ

ಧಾರವಾಡ: ‘ನಾನು ಯಾವ ರೇಸ್‌ನಲ್ಲೂಇಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ’ ಎಂದು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಪ್ರತಿಕ್ರಿಯಿಸಿದರು. ಬುಧವಾರ ಸುದ್ದಿಗಾರರೊಂದಿಗೆ ‌ಅವರು ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ.

Read More »

ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ.: ಬೊಮ್ಮಾಯಿ

ಹಾವೇರಿ (ಶಿಗ್ಗಾವಿ): ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಆ ರೀತಿಯ ರಾಜಕೀಯ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ ಸದಸ್ಯತಾ ಅಭಿಯಾನದಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ಕೊಟ್ಟು ಮಾತನಾಡಿದರು. ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ನಾವಿದ್ದಾಗ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ …

Read More »

ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

ಕಿತ್ತೂರು: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಅಪಹರಣಕ್ಕೆ ಒಳಗಾದ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರು ಕೊನೆಗೂ ಪತ್ತೆಯಾಗಿದ್ದಾರೆ. ನಾಗರಾಜ ಅಸುಂಡಿ ಅವರನ್ನು ಬೈಲಹೊಂಗಲ ಕೋರ್ಟ್ ಗೆ ಹಾಜರುಪಡಿಸಲು ಪೊಲೀಸರು ಕರೆತಂದಿದ್ದಾರೆ.   ಸೆಪ್ಟೆಂಬರ್ 3 ರಂದು ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಸಂಖ್ಯಾಬಲ ಹೆಚ್ಚಿಸಿಕೊಂಡು ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ …

Read More »

ಅಸುರಕ್ಷಿತ ಸ್ಥಳಗಳಲ್ಲಿ ಪಟಾಕಿ ಮಳಿಗೆ!

ಹುಬ್ಬಳ್ಳಿ: ಗಣೇಶ ಹಬ್ಬದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಜಿಲ್ಲೆಯ ವಿವಿಧೆಡೆ ಇರುವ ಪಟಾಕಿ ಸಂಗ್ರಹ ಗೋದಾಮು ಹಾಗೂ ಮಾರಾಟ ಮಳಿಗೆಗಳ ಪರಿಶೀಲನೆಗೆ ಮುಂದಾಗಿದೆ. ನಿಯಮ ಉಲ್ಲಂಘಿಸಿದ ಮಳಿಗೆಗಳ ಮಾಲೀಕರಿಗೆ ನೋಟಿಸ್‌ ನೀಡಿ, ಬೀಗ ಹಾಕಲು ನಿರ್ಧರಿಸಿದೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಹಾನಗರ‌ ಪಾಲಿಕೆ ಅಧಿಕಾರಿಗಳ ವಿಶೇಷ ತಂಡ, ಪಟಾಕಿ ಅಂಗಡಿಗಳ ಪರಿಶೀಲನೆ ನಡೆಸಲು ಸಿದ್ಧತೆ ನಡೆಸಿವೆ. …

Read More »

ಈದ್ಗಾದಲ್ಲಿ ಗಣೇಶೋತ್ಸವ: ಪಾಲಿಕೆಯಿಂದ ಅನುಮತಿ

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಸ್ತುತ ವರ್ಷವೂ ಮೂರು ದಿನಗಳ ಅನುಮತಿ ನೀಡಿದೆ. ಮಂಡಳಿಯ ಪದಾಧಿಕಾರಿಗಳಿಗೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ವಿತರಿಸಿದರು.   ‘ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸೆಪ್ಟೆಂಬರ್ 7 ರಿಂದ 9ರವರೆಗೆ ಉತ್ಸವ ಆಚರಿಸಬಹುದು. ಸೂಚಿಸಿದ ಜಾಗದಲ್ಲೇ ಪೆಂಡಾಲ್‌ ಹಾಕಬೇಕು. ಬೇರೆ ಯಾವುದೇ ರೀತಿ ಬಾವುಟ, ಪ್ರಚೋದನಕಾರಿ ಭಾವಚಿತ್ರ, …

Read More »