Breaking News

Laxminews 24x7

ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್‌ಐ ಆತ್ಮಹತ್ಯೆ; ತನಿಖೆಗೆ ಮಾಜಿ ಪ್ರಧಾನಿ ಒತ್ತಾಯ

ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ -ಪಿಎಸ್ ಐ ಕಿರಣ್ ಕುಮಾರ್ ಅವರು ಇಂದು ಬೆಳಗ್ಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆ ಪ್ರಕರಣವೊಂದನ್ನು ನಿನ್ನೆ ಮಧ್ಯ ರಾತ್ರಿಯಷ್ಟೇ ಭೇದಿಸಿದ್ದ ಅವರು, ಆರೋಪಿ‌ ಬಂಧನ ಸಂಬಂಧ ಕಾರ್ಯಪ್ರವೃತ್ತರಾಗಿದ್ದರು. ಕೊಲೆ‌ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರಣ್ ಕುಮಾರ್ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ …

Read More »

ಬಸ್‌ನಲ್ಲಿ ಕಲ್ಲು ತುಂಬಿ ಸಾಗಿಸಿದರು!

ಹುಬ್ಬಳ್ಳಿ: ಕುಂದಗೋಳ-ಹುಬ್ಬಳ್ಳಿ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ, ಸಿಬ್ಬಂದಿ ಗುರುವಾರ ಕಲ್ಲು ಸಾಗಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸೂರು ರಸ್ತೆ ಬಳಿ ರಸ್ತೆ ವಿಭಜಕ ಕಾಮಗಾರಿ ನಡೆಯುತ್ತಿದ್ದು, ಮೊದಲು ರಸ್ತೆಗೆ ಹಾಕಲಾಗಿದ್ದ ಕಲ್ಲುಗಳನ್ನು ತೆಗೆಯಲಾಗಿದೆ. ಗೋಕುಲ ರಸ್ತೆಯ ಬಸ್‌ ಡಿಪೊದಲ್ಲಿ ಉದ್ಯಾನ ಕಾಮಗಾರಿ ನಡೆಯುತ್ತಿರುವುದರಿಂದ, ಅಲ್ಲಿಗೆ ಈ ಕಲ್ಲುಗಳನ್ನು ಸಾಗಿಸಲು ಸಿಬ್ಬಂದಿ ಬಸ್‌ ಬಳಕೆ ಮಾಡಿಕೊಂಡಿದ್ದಾರೆ. ರಸ್ತೆ ಮೇಲಿದ್ದ ಕಲ್ಲುಗಳನ್ನು ಐದಾರು ಸಿಬ್ಬಂದಿ ಸೇರಿ ಬಸ್‌ಗೆ ತುಂಬಿದ್ದಾರೆ. 50ಕ್ಕಿಂತಲೂ …

Read More »

ಸಿಇಟಿ: 1,998 ವಿದ್ಯಾರ್ಥಿಗಳು ಗೈರು

ಬೆಳಗಾವಿ: ಜಿಲ್ಲೆಯ ವಿವಿಧ 29 ಕೇಂದ್ರಗಳಲ್ಲಿ ಶುಕ್ರವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ 1,998 ವಿದ್ಯಾರ್ಥಿಗಳು ಗೈರು ಹಾಜರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ ಒಳಪಡುವ ನಗರದ 11, ರಾಮದುರ್ಗದ ಸ್ಟೇಟ್ ಪಿಯು ಕಾಲೇಜು, ಸವದತ್ತಿಯ ಎಸ್‌.ಕೆ. ಪಿಯು ಕಾಲೇಜು ಹಾಗೂ ಬೈಲಹೊಂಗಲದ ಜಿಜಿಡಿ ಪಿಯು ಕಾಲೇಜಿನ ಕೇಂದ್ರಗಳಲ್ಲಿ ಬೆಳಿಗ್ಗೆ ಭೌತವಿಜ್ಞಾನ ಮತ್ತು ಮಧ್ಯಾಹ್ನ ರಸಾಯನವಿಜ್ಞಾನ ವಿಷಯದ ಪರೀಕ್ಷೆಗಳು ನಡೆದವು. ಭೌತವಿಜ್ಞಾನಕ್ಕೆ 5,316 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ …

Read More »

ಕೋವಿಡ್‌ ನಿಯಂತ್ರಣಕ್ಕೆ ಬಿಡುಗಡೆಯಾಗಿದ್ದು ಕೇವಲ ₹ 230 ಕೋಟಿ!

ಬೆಳಗಾವಿ: ಕೋವಿಡ್‌ ರೋಗವನ್ನು ನಿಯಂತ್ರಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಇದುವರೆಗೆ ಒಟ್ಟು ₹ 230.73 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗೆ ₹ 13.97 ಕೋಟಿ ದೊರೆತಿದೆ. ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ) ಸುರೇಂದ್ರ ಉಗಾರೆ ಅವರು ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿಯಿಂದ ಇದು ಬೆಳಕಿಗೆ ಬಂದಿದೆ. ‘ರಾಜ್ಯ ಸರ್ಕಾರ ಹೇಳುವಂತೆ ₹ 2,000 ಕೋಟಿ ಬಿಡುಗಡೆಯಾಗಿಲ್ಲ. ಇದಲ್ಲದೇ, ವಿರೋಧ ಪಕ್ಷದವರು ಹೇಳುವಂತೆ ಸಾವಿರಾರು ಕೋಟಿ ರೂಪಾಯಿಯ …

Read More »

ಸತ್ಯಂಪೇಟ ಮೇಲಿನ ಪ್ರಕರಣ ರದ್ದುಪಡಿಸಲು ಆಗ್ರಹ

ಬೆಳಗಾವಿ: ‘ಕಲಬುರ್ಗಿ ಜಿಲ್ಲೆಯ ಶಹಾಪುರದ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಅವರ ಮೇಲೆ ದಾಖಲಿಸಲಾದ ಪ್ರಕರಣವನ್ನು ತಕ್ಷಣ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ಸೇನೆ ಹಾಗೂ ಬಸವಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ‘ಅನುಭವಿ ಪತ್ರಕರ್ತ, ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತಿ ವಿಶ್ವರಾಧ್ಯ ಅವರ ಮೇಲೆ ದುರುದ್ದೇಶದಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್‌ …

Read More »

ಪಿಎಸ್ ಐ ಮಲ್ಲಿಕಾರ್ಜುನ : ಸೈಕಲ್ ನಲ್ಲಿ ಠಾಣೆಗೆ

ಮೂಡಲಗಿ : ಜನರ ಕಷ್ಟಗಳಿಗೆ ಸ್ಪಂಧಿಸಿ , ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ ಐಯೊಬ್ಬ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಹೌದು. ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ ಐ ಮಲ್ಲಿಕಾರ್ಜುನ ಸಿಂಧೂರ ಅವರ ಠಾಣೆಯ ವ್ಯಾಪ್ತಿಯಲ್ಲಿನ ಜನರ ಕಷ್ಠಗಳಿಗೆ ಸ್ಪಂಧಿಸುತ್ತಾ ಕಾರ್ಯ ನಿರ್ವಹಿಸುತ್ತಿರುವುದು ಜನರ ಮೆಚ್ಚುಗೆ ಕಾರಣ. ಶಕ್ತಿಯಿಂದಾಗದ ಕೆಲಸವನ್ನು ಯುಕ್ತಿಯಿಂದ ಮಾಡಬೇಕು ಎಂಬ ಗಾದೆಯಂತೆ ಪೊಲೀಸ್ ಠಾಣೆಗೆ ಬರುವ …

Read More »

ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೊರೋನಾ ಸೋಂಕಿತನ ಮೃತ ದೇಹವನ್ನು ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆ   ನಿರ್ಲಕ್ಷ

ಗೋಕಾಕ: ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೊರೋನಾ ಸೋಂಕಿತನ ಮೃತ ದೇಹವನ್ನು ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆ   ನಿರ್ಲಕ್ಷ ತೋರಿದ್ದಾರೆ. ಗೋಕಾಕದಲ್ಲಿ ಇದು  ಮತ್ತೊಂದು ಹೃದಯ ಕಳುಕುವ ಘಟನೆಯಾಗಿದ್ದು,  ಎರಡು ದಿನಗಳ ಹಿಂದೆ ಗೋಕಾಕ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಮೂಡಲಗಿ ಪುರಸಭೆಯ ಸಿಬ್ಬಂದಿಯಾಗಿದ್ದು ಮೃತ ದೇಹವನ್ನು  ಹೊರಗಡೆ ಇಟ್ಟಿದ್ದಾರೆ. ಮೃತ ದೇಹವನ್ನು ಬೇಗನೆ ಅಂತ್ಯ ಸಂಸ್ಕಾರ ಮಾಡದೆ ಬೇಕಾಬಿಟ್ಟಿಯಾಗಿ ಮುಂಜಾನೆ …

Read More »

ಶಿಕ್ಷಕರ ವರ್ಗಾವಣೆಗೆ ಮುಹೂರ್ತ ಫಿಕ್ಸ್ :ಸಚಿವ ಸುರೇಶ್ ಕುಮಾರ್

ಬೆಂಗಳೂರು :  ಶಿಕ್ಷಕರ ವರ್ಗಾವಣೆ ಸಂಬಂಧ ಇತ್ತೀಚೆಗೆ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಕೂಡ ಹೊರಡಿಸಿತ್ತು. ಈಗ ಅಧಿಕಾರಿಗಳ ಸಭೆಯಲ್ಲಿ ಆಗಸ್ಟ್ ನಲ್ಲಿ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಸಿದ್ಧಗೊಳಿಸಿ, ಪ್ರಕಟಿಸುವಂತೆ ಅಧಿಕಾರಿಗಳಿಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಶಿಕ್ಷಕರ ವರ್ಗಾವಣೆಯ ಸಂಬಂಧ ನಿಯಮಗಳನ್ನು ಶಿಕ್ಷಣ ಇಲಾಖೆ ಅಂತಿಮಗೊಳಿಸಿ. ಈ ಕಾಯ್ದೆಗೆ ಈಗಾಗಲೇ ಅಧಿವೇಶನದಲ್ಲೂ ಅನುಮೋದನೆ ದೊರೆತಿದೆ. ಹೀಗಾಗಿ ಕೂಡಲೇ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂಬುದಾಗಿ ಇಂದು …

Read More »

ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಆರ್ಥಿಕವಾಗಿ ಪೋಷಣೆ ಮಾಡಲು ಮುಂದಾಗಿದ್ದಾರೆಗೌತಮ್ ಗಂಭೀರ್.

ನವದೆಹಲಿ: ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಆರ್ಥಿಕವಾಗಿ ಪೋಷಣೆ ಮಾಡಲು ಮುಂದಾಗಿದ್ದಾರೆ. ಹೌದು..ರಾಷ್ಟ್ರ ರಾಜಧಾನಿಯ ಜಿಬಿ ರಸ್ತೆ ಪ್ರದೇಶಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಪೋಷಣೆಗೆ ಗೌತಮ್ ಗಂಭೀರ್ ಮುಂದಾಗಿದ್ದಾರೆ. ಅಂದರೆ 25 ಮಕ್ಕಳ ಶಾಲೆಯ ಶುಲ್ಕ, ಆರೋಗ್ಯ, ಆಹಾರ, ಔಷಧಿ ಮತ್ತು ಇತರ ವಿವಿಧ ವೆಚ್ಚಗಳನ್ನು ಭರಿಸುತ್ತಾರೆ. ಗೌತಮ್ ಗಂಭೀರ್ ತಮ್ಮ ಈ ಕಾರ್ಯಕ್ಕೆ “PANKH” (ರೆಕ್ಕೆಗಳು) ಎಂದು ಕರೆದಿದ್ದಾರೆ. ಸಂಸದರು …

Read More »

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಿಸಿದೆ.ಮನೆಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಬಹುದು.

ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಿಸಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಸಾರ್ವಜನಿಕ ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರ ವಿರುದ್ಧವೂ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ದಾರೆ. ಸಾರ್ವಜನಿಕರು ಮನೆಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಬಹುದು. ಪರಿಸರ ಸ್ನೇಹಿ ಗಣಪನಿಗೆ ಮಾತ್ರ ಅವಕಾಶ. ಬಿಬಿಎಂಪಿ ಕೆರೆಗಳು, ಕಲ್ಯಾಣಿಗಳಲ್ಲಿ ಗಣೇಶ …

Read More »