Breaking News
Home / Laxminews 24x7 (page 3800)

Laxminews 24x7

): ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವಗಳು ಅನಾಥವೆಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು

ವಿಜಯಪುರ(ಫೆ.28): ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವಗಳು ಅನಾಥವೆಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು. ಆದರೆ, ಆತ್ಮಹತ್ಯೆ ಮಾಡಿಕೊಂಡವರ ಸಂಬಂಧಿಗಳು ಈಗ ಬಂದು ಅವರ ಬಟ್ಟೆಗಳ ಮೂಲಕ ಪತ್ತೆ ಮಾಡಿದ್ದಾರೆ. ಇಂತಹ ಹೃದಯವಿದ್ರಾವಕ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯ ಕೊಲ್ಹಾರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಿಂದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವಗಳು ದೊರೆತ ನಂತರ ಪೊಲೀಸರೇ ಅನಾಥ ಶವಗಳೆಂದು …

Read More »

‘ಸರಕಾರಿ ಶಾಲೆ ಮುಂದೆ ಪಾಲಕರು ಕ್ಯೂ ನಿಲ್ಲುವಂತಾಗಬೇಕು, ಅದೇ ನನ್ನ ಆಸೆ’ ಎಂದ ಸುರೇಶ್‌ ಕುಮಾರ್‌

‘ಸರಕಾರಿ ಶಾಲೆ ಮುಂದೆ ಪಾಲಕರು ಕ್ಯೂ ನಿಲ್ಲುವಂತಾಗಬೇಕು, ಅದೇ ನನ್ನ ಆಸೆ’ ಎಂದ ಸುರೇಶ್‌ ಕುಮಾರ್‌ ಶಿವಮೊಗ್ಗ: ನನಗೆ ಒಂದು ಆಸೆಯಿದೆ. ಆ ಆಸೆಯನ್ನು ನಾನು ಗುರಿ ಎಂದು ಕರೆಯುವುದಿಲ್ಲ. ಇನ್ನು ಮೂರು ವರ್ಷದಲ್ಲಿ ಪಾಲಕರು ಸರಕಾರಿ ಶಾಲೆಯ ಎದುರು ಸರದಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ಹೇಳಿದರು. ಶಿವಮೊಗ್ಗ ಜಿಲ್ಲೆ ಸಾಗರ …

Read More »

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ : ಆರ್.ಎಮ್.ದೇಶಪಾಂಡೆ

ಗೋಕಾಕ:ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ : ಆರ್.ಎಮ್.ದೇಶಪಾಂಡೆ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ : ಆರ್.ಎಮ್.ದೇಶಪಾಂಡೆ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧಕರಾಗಿ ಜಾಗತಿಕಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವಂತೆ ಇಲ್ಲಿಯ ಎಸ್‍ಎಲ್‍ಜೆ ಪ್ರೌಢಶಾಲೆಯ ಶಿಕ್ಷಕ ಆರ್.ಎಮ್.ದೇಶಪಾಂಡೆ ಹೇಳಿದರು. ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮಾನವನ ಬದುಕಿನಲ್ಲಿ ವಿಜ್ಞಾನ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಸಂಶೋಧಕರಾಗಿ …

Read More »

ಸ್ಥಳೀಯ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮೂಡಲಗಿ ಸ್ಥಳೀಯ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಶುಕ್ರವಾರ ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಶ್ರೀ ಬೀಮಶಿ ಮಗದುಮ್ಮ, ರಮೇಶ ಸಣ್ಣಕ್ಕಿ, ಬಗರ್ ಹುಕ್ಕುಂ ಸಾ ಸ ಸ ಮೂಡಲಗಿ ಪಶುಸಾಕಾಣಿಕೆಯಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಪಶುಪಾಲಕ ಪ್ರಶಸ್ತಿ ವಿಜೇತ ಮಾರುತಿ ಮರಡಿ ಇವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ …

Read More »

ದೆಹಲಿಯಲ್ಲಿ ಗಲಾಟೆ ನಡೆದಿದ್ದು, ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ವೈಫಲ್ಯವಾಗಿದೆ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

ಬೆಂಗಳೂರು, ಫೆ.28- ಅಮೆರಿಕ ಅಧ್ಯಕ್ಷರ ಭಾರತ ಭೇಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಗಲಾಟೆ ನಡೆದಿದ್ದು, ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ವೈಫಲ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿದೆ. ಟ್ರಂಪ್ ಕಡೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಿತು. ಗಲಾಟೆ ವಿಚಾರದಲ್ಲಿ ಇಂಟೆಲಿಜೆನ್ಸಿ ವಿಫಲವಾಗಿದೆ ಎನಿಸುತ್ತದೆ ಎಂದು ಹೇಳಿದರು ಮಹದಾಯಿ …

Read More »

ದಿನಾಂಕ 29 ಮಾರ್ಚ 2020 ರಿಂದ ಹುಬ್ಬಳ್ಳಿ – ಮಂಗಳೂರು, ಮಂಗಳೂರು – ಹುಬ್ಬಳ್ಳಿ ಇಂಡಿಗೋ ನೇರ ವಿಮಾನ ಸೇವೆ ಪ್ರಾರಂಭವಾಗಲಿದೆ.

ದಿನಾಂಕ 29 ಮಾರ್ಚ 2020 ರಿಂದ ಹುಬ್ಬಳ್ಳಿ – ಮಂಗಳೂರು, ಮಂಗಳೂರು – ಹುಬ್ಬಳ್ಳಿ ಇಂಡಿಗೋ ನೇರ ವಿಮಾನ ಸೇವೆ ಪ್ರಾರಂಭವಾಗಲಿದೆ. ಸಮಯ : ಸಾಯಂಕಾಲ 5.15ಕ್ಕೆ ಹುಬ್ಬಳ್ಳಿಯಿಂದ ಹೊರಟು 6.25 ಕ್ಕೆ ಮಂಗಳೂರು ತಲುಪುವುದು ಮತ್ತು ಮರಳಿ ಮಂಗಳೂರಿನಿಂದ ಸಾಯಂಕಾಲ 6.45ಕ್ಕೆ ಹೊರಟು 7.55ಕ್ಕೆ ಹುಬ್ಬಳ್ಳಿ ತಲುಪುವುದು. ಬಹುದಿನಗಳಿಂದ ನಾವು ಬಂದರು ನಗರಿ ಮಂಗಳೂರಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ನಡೆಸಿದ ಪ್ರಯತ್ನ ಈಗ ಫಲಪ್ರದವಾಗಿದೆ. ಇದೇ ಮಾರ್ಚ್ …

Read More »

ಅರಭಾವಿ ಕ್ಷೇತ್ರ ನಂದನವನವಾಗಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳೇ ಕಾರಣ : ಕೊಪ್ಪದ

ಮೂಡಲಗಿ:ಅರಭಾವಿ ಕ್ಷೇತ್ರ ನಂದನವನವಾಗಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳೇ ಕಾರಣ : ಕೊಪ್ಪದ ಅರಭಾವಿ ಕ್ಷೇತ್ರ ನಂದನವನವಾಗಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳೇ ಕಾರಣ : ಕೊಪ್ಪದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನಾಯಕತ್ವದಲ್ಲಿ ಅರಭಾವಿ ಮತಕ್ಷೇತ್ರ ನಂದನವನವಾಗುವ ಕಾಲ ಸನ್ನಿಹಿತವಾಗಿದೆ. ಪ್ರತಿ ಕ್ಷೇತ್ರಗಳಿಗೂ ವಿಶೇಷ ಆಧ್ಯತೆ ನೀಡುವ ಮೂಲಕ ಕ್ಷೇತ್ರದ ಸರ್ವತೋಮುಖ ಏಳ್ಗೆಗೆ ಸಾವಿರಾರು ಕೋಟಿ ರೂ.ಗಳ …

Read More »

ಕಾಫೀ ಡೇ ಮಾದರಿಯಲ್ಲಿ ನಂದಿನಿ ಕೆಫೆ ಮೂ ಹೈಟೆಕ್ ಪಾರ್ಲರ್: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ…

ಬೆಂಗಳೂರು : ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನಂದಿನಿಯಿಂದ ಯುವ ಪೀಳಿಗೆಯ ಗ್ರಾಹಕರನ್ನು ಸೆಳೆಯಲು ನಂದಿನಿ ಕೆಫೆ ಮೂ ಹೆಸರಿನ ಹವಾನಿಯಂತ್ರಿತ ಹೈಟೆಕ್ ನಂದಿನಿ ಐಸ್‍ಕ್ರೀಮ್ ಸ್ಕೂಪಿಂಗ್ ಕಮ್ ಪಾರ್ಲರ್‍ನ್ನು ತೆರೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರದಂದು ಮಹಾನಗರದ ಜಯನಗರ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ನಂದಿನಿ ಕೆಫೆ ಮೂ ಹೈಟೆಕ್ ಪಾರ್ಲರ್‍ನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ತಕ್ಕಂತೆ ನಮ್ಮ …

Read More »

ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ: ಶಾಸಕ ಸತೀಶ ಜಾರಕಿಹೊಳಿ

ಯಮಕನಮರಡಿ: ಪ್ರತಿಯೊಂದು ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮೊದಲ ಆದ್ಯತೆ ನೀಡುತ್ತಿದೆ.‌ ಇದರ ಸದುಪಯೋಗ ಪಡೆಸಿಕೊಂಡು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು‌. ಸುತಗಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದೆ ಶಿಕ್ಷಣ ಕೆಲವರ ಸ್ವತ್ತಾಗಿತ್ತು‌. ಆದ್ರೆ ಈಗ ಹಾಗಿಲ್ಲ‌. ಪ್ರತಿಯೊಂದು ಸರ್ಕಾರಗಳು ಮನೆ ಬಾಗಿಲಿಗೆ ಬಂದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದರ …

Read More »

ಬಾಡೂಟಕ್ಕೆ ಕರೆದಿಲ್ಲ ಎಂದು ಮನೆಯನ್ನೇ ದೋಚಿದರು

ಬೆಳಗಾವಿ – ಉದ್ಯಮಬಾಗ ಪೊಲೀಸರು ಇಬ್ಬರು ಮನೆಗಳ್ಳರನ್ನು ಬಂಧಿಸಿ, ಸುಮಾರು ರೂ.೧.೫ ಲಕ್ಷದ ಆಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣಾ ಹದ್ದಿಯ ಹನುಮಾನವಾಡಿಯಲ್ಲಿ ರಾಜಾರಾಮ ಕೃಷ್ಣ ಸುತಾರ ಇವರ ಮನೆಯ ಮುಂದಿನ ಬಾಗಿಲನ್ನು ಮುರಿದು ಹಾಡಹಗಲೇ ಕಳ್ಳತನ ಮಾಡಲಾಗಿತ್ತು. ಆರೋಪಿಗಳಿಗೆ ಬಲೆ ಬೀಸಿದ ಉದ್ಯಮಬಾಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಶ್ವರ ಶಿವರಾಯಪ್ಪ ಉದಗಟ್ಟಿ (೨೮) ಸಾ: ರಾಜಾರಾಮನಗರ, ಉದ್ಯಮಬಾಗ ಹಾಗೂ ಸಂತೋಷ @ ಬಲ್ಯಾ …

Read More »