Breaking News

Laxminews 24x7

ಎಪಿಎಂಸಿಗೆ ಭೂಮಿ ಕೊಟ್ಟ ರೈತನಿಗಿಲ್ಲ ಪರಿಹಾರ- ಕೋರ್ಟ್ ಆದೇಶ ಮೇರೆಗೆ ಎಪಿಎಂಸಿ ಕಚೇರಿ ಜಪ್ತಿ

ಗದಗ: ಅಡಿಕೆಗೆ ಹೋದ ಮಾನ ಆನೆ ಕೋಟ್ರು ಬಾರದು ಅಂತಾರೆ. ಅದರಂತಾಗಿದೆ ಗದಗ ಎಪಿಎಂಸಿ ಕಚೇರಿ ಕಥೆ. ಗದಗ ನಗರದ ಎಪಿಎಂಸಿ ಕಚೇರಿಯನ್ನ ಇಂದು ಜಪ್ತಿ ಮಾಡಲಾಗಿದೆ. ಕಾರಣ ಆರ್.ಆರ್.ಹೇಮಂತನವರ ಎಂಬವರು 4 ಎಕರೆ 35 ಗುಂಟೆ ಜಾಗೆಯನ್ನು 40 ವರ್ಷಗಳ ಹಿಂದೆ ಎಪಿಎಂಸಿಗಾಗಿ ಸ್ವಾದೀನಪಡಿಸಿಕೊಂಡಿತ್ತು. ಆಗ ಸುಮಾರು 76 ಲಕ್ಷ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿದ ಎಪಿಎಂಸಿ, ಇನ್ನುಳಿದ 16.50 ಲಕ್ಷ ರೂಪಾಯಿ ಪಾವತಿಸಲು ವಿಳಂಬ ಮಾಡಿದೆ. …

Read More »

BMTC, KSRTC ಸಿಬ್ಬಂದಿ ಮುಷ್ಕರ – ಇಂದು ರಾತ್ರಿಯಿಂದಲೇ ಬಸ್ ಸಿಗೋದು ಡೌಟ್

ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಮತ್ತೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಓಡಾಟ ಅನಿರ್ದಿಷ್ಟಾವಧಿಗೆ ಸ್ತಬ್ಧವಾಗಿರಲಿದೆ. ಇಂದು ರಾತ್ರಿಯಿಂದಲೇ ಮುಷ್ಕರ ಆರಂಭ ಆಗುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ತಬ್ಧ ಆಗುವ ಸಾಧ್ಯತೆಯೇ ಹೆಚ್ಚು. ಡಿಸೆಂಬರ್‍ನಲ್ಲಿ ಮುಷ್ಕರ ಕೈಗೊಂಡಿದ್ದ ವೇಳೆ ನೀಡಿದ್ದ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ತಿರುಗಿಬಿದ್ದಿದ್ದು, ನಾಳೆಯಿಂದ ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಬಸ್ ಸಿಗದೇ ಜನಸಾಮಾನ್ಯರು ಪರದಾಡಬೇಕಾಗುವುದು ನಿಶ್ಚಿತ. ಕೆಲವು ಬೇಡಿಕೆಗಳ …

Read More »

ಎಂಈಎಸ್ ಅಭ್ಯರ್ಥಿ ಶುಭಂ ಶಿಳಕೆ ಲಕ್ಷಾಂತರ ರೂ ದೇಣಿಗೆ ಸಂಗ್ರಹ

ಬೆಳಗಾವಿ-ಭಾಷೆಯ ಹೆಸರಿನಲ್ಲಿ ಬೆಳಗಾವಿಯ ಶಾಂತಿ ಕದಡುತ್ತ ಬಂದಿರುವ ನಾಡವಿರೋಧಿ ಎಂಈಎಸ್ ಈಗ ಚುನಾವಣೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುತ್ತಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಎಂಈಎಸ್ ಮತ್ತು ಶಿವಸೇನೆಯ ಮೈತ್ರಿ ಅಭ್ಯರ್ಥಿಯಾಗಿರುವ ಶುಭಂ ಶಿಳಕೆ ಈಗ ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ,ಚುನಾವಣೆಯ ಹೆಸರಿನಲ್ಲಿ ವೋಟು ಕೇಳಿ ನೋಟು ತೆಗೆದುಕೊಳ್ಳುವ ಕಾನೂನು ಬಾಹಿರ ದಂಧೆ ಶುರು ಮಾಡಿದ್ದಾರೆ. ಶುಭಂ ಶುಳಕೆ ಮರಾಠಿ ಭಾಷಿಕರು ಹೆಚ್ವಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ …

Read More »

ಸಿಡಿ ಕೇಸ್ – ಸರ್ಕಾರ, ಎಸ್‍ಐಟಿಗೆ ಹೈಕೋರ್ಟ್ ನೋಟಿಸ್ ಜಾರಿ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‍ಐಟಿ) ಮತ್ತು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಕೋರಿ ವಕೀಲ ಉಮೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ವಿಭಾಗೀಯ ಪೀಠದಲ್ಲಿ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್, ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಎಸ್‍ಐಟಿಗೆ  ಸೂಚನೆ ನೀಡಿದೆ. ಈ ಅರ್ಜಿಯ ವಿಚಾರಣೆಯನ್ನು ಏ.17ಕ್ಕೆ ಹೈಕೋರ್ಟ್ …

Read More »

ಜಿಲ್ಲಾ ಆರೋಗ್ಯ ಇಲಾಖೆ ಉಗ್ರಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಖಾಲಿಯಾಗಿದೆ ಎಂಬ ಮಾಹಿತಿ ಲಭ್ಯ

ಧಾರವಾಡ: ಜಿಲ್ಲಾ ಆರೋಗ್ಯ ಇಲಾಖೆ ಉಗ್ರಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಖಾಲಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಇಲಾಖೆಯ ಉಗ್ರಾಣದಲ್ಲಿ 8,800 ಡೋಸ್ ವ್ಯಾಕ್ಸಿನ್ ಮಾತ್ರ ಇತ್ತು. ಇಂದು ಅವುಗಳನ್ನು ಜಿಲ್ಲೆಯ 74 ಆರೋಗ್ಯ ಇಲಾಖೆಯ ವ್ಯಾಕ್ಸಿನ್ ಕೇಂದ್ರಗಳಿಗೆ ಸಪ್ಲೈ ಮಾಡಲಾಗಿದೆ. ಬೆಳಗಾವಿಯ ರಿಜನಲ್ ಸೆಂಟರ್ ನಿಂದ ಧಾರವಾಡಕ್ಕೆ ವ್ಯಾಕ್ಸಿನ್ ಬಂದರೆ ಮಾತ್ರ ನಾಳೆ ಸಾರ್ವಜನಿಕರಿಗೆ ವ್ಯಾಕ್ಸಿನ್ ಲಭ್ಯವಾಗಲಿದೆ. ಸದ್ಯ ಧಾರವಾಡ ಜಿಲ್ಲೆಗೆ 1,37,380 ಕೋವಿಶೀಲ್ಡ್ ವ್ಯಾಕ್ಸಿನ್, 11,200 ಡೋಸ್ ಕೋವ್ಯಾಕ್ಸಿನ್ …

Read More »

ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್

ಬೆಂಗಳೂರು: ಕೆಐಎಡಿಬಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕೆಐಎಡಿಬಿ 20 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಎಂಬುವವರು ಸಿಎಂ ಯಡಿಯೂರಪ್ಪ ಹಾಗೂ ಸಚಿವ ನಿರಾಣಿ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ದೂರು …

Read More »

ಸಿಡಿ ಕೇಸ್: ರಕ್ಷಣೆ ನೀಡುವಂತೆ ಕೋರಿ ಪೊಲೀಸ್ ಆಯುಕ್ತರ ಮೊರೆ ಹೋದ ಋಷಿಕುಮಾರ ಸ್ವಾಮೀಜಿ

ಬೆಂಗಳೂರು; ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಋಷಿಕುಮಾರ ಸ್ವಾಮೀಜಿ ಇದೀಗ ರಕ್ಷಣೆ ನೀಡುವಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಮನವಿ ಮಾಡಿರುವ ಘಟನೆ ನಡೆದಿದೆ ರಮೇಶ್ ಜಾರಕಿಹೊಳಿ ಪರ ಮಾತನಾಡಿದ್ದಕ್ಕೆ ಬರುವ ಅಮವಾಸ್ಯೆಗೆ ನಿನ್ನನ್ನು ಮುಗಿಸುತ್ತೇವೆ ಎಂದು ಅಪರಿಚಿತ ವ್ಯಕ್ತಿಗಳು ತನಗೆ ಬೆದರಿಕೆಯೊಡ್ಡುತ್ತಿದ್ದು, ಸೂಕ್ತ ಭದ್ರತೆ ನೀಡುವಂತೆ ಋಷಿಕುಮಾರ ಸ್ವಾಮೀಜಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ …

Read More »

ಊಹಾಪೋಹ ಕ್ಕೆ ವಿಡಿಯೋ ಕಾಲ ಮೂಲಕ ಸ್ಪಷ್ಟನೆ ಕೊಟ್ಟ ಗೋಕಾಕ ವೈದ್ಯಾಧಿಕಾರಿ

ಬೆಂಗಳೂರು: ಮಾಜಿ ಸಚಿವ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಇಂದು ಕೊರೊನಾ ಸೋಂಕಿನವರೆಗೂ ಬಂದು ನಿಂತಿದೆ. ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಗೋಕಾಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ಇಂದು ಬೆಳಗ್ಗೆ ಮಾಹಿತಿ ನೀಡಿದ್ದರು. ಏಪ್ರಿಲ್​ 1ರಂದು ಗೋಕಾಕ ಆಸ್ಪತ್ರೆಗೆ ಬಂದು ಕೊವಿಡ್​ ಟೆಸ್ಟ್​ ಮಾಡಿಸಿದ್ದ ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದರು. ಇದೀಗ …

Read More »

ಬೆಳಗಾವಿ:ಕಾಂಗ್ರೆಸ್‌ ನಾಯಕ, ಸತೀಶ್‌ ಜಾರಕಿಹೊಳಿ ಸಹೋದರ ಲಖನ್‌ ಬಿಜೆಪಿ ಪರ ಪ್ರಚಾರ

ಬೆಳಗಾವಿ: ಕಾಂಗ್ರೆಸ್‌ ಮುಖಂಡ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿಯಾಗಿರುವ ಸತೀಶ ಜಾರಕಿಹೊಳಿ ಸಹೋದರ ಲಖನ್‌ ಜಾರಕಿಹೊಳಿ ಅವರನ್ನು ಸಚಿವರಾದ ಜಗದೀಶ ಶೆಟ್ಟರ್‌, ಉಮೇಶ ಕತ್ತಿ ಹಾಗೂ ಭೈರತಿ ಬಸವರಾಜ್‌ ಸೋಮವಾರ ಭೇಟಿಯಾಗಿ ಚರ್ಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಜಿಲ್ಲೆಯ ಗೋಕಾಕದ ನಿವಾಸದಲ್ಲಿ ಅವರನ್ನು ಭೇಟಿಯಾದ ಸಚಿವತ್ರಯರೊಂದಿಗೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಕೂಡ ಇದ್ದರು. ಮನೆಗೆ ಬಂದ ಅವರನ್ನು …

Read More »

ಲೋಕಸಭಾ ಚುನಾವಣೆ ಪ್ರಚಾರ ಮಂಗಳವಾರ ಬೆಳಗಾವಿಗೆ B.S.Y.

ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಮಂಗಳವಾರ ಬೆಳಗಾವಿಗೆ ಆಗಮಿಸಲಿದ್ದು, ಬುಧವಾರ ವಿವಿಧೆಡೆ ಲೋಕಸಭಾ ಉಪಚುನಾವಣೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳವಾರ ಸಂಜೆ 5.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಯಡಿಯೂರಪ್ಪ ಅಲ್ಲಿಂದ ರಸ್ತೆ ಮಾರ್ಗದಲ್ಲಿ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗ ರಾಮದುರ್ಗ ತಾಲೂಕು ಸಾಲಹಳ್ಳಿ ಹಾಗೂ 1 ಗಂಟೆಗೆ ಯರಗಟ್ಟಿ, 4.30ಕ್ಕೆ ಇಂಚಲದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ನಂತರ ಸಾಂಬ್ರಾ ವಿಮಾನ ನಿಲ್ದಾಣದ …

Read More »