Breaking News

Laxminews 24x7

ಹುಕ್ಕೇರಿ ತಾಲೂಕಿನ ಆನಂದಪೂರ–ಹತ್ತರಗಿ ಗ್ರಾಮದ ಶ್ರೀ ಬನಶಂಕರಿ ದೇವಾಲಯದಲ್ಲಿ ನಡೆದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

ಹುಕ್ಕೇರಿ ತಾಲೂಕಿನ ಆನಂದಪೂರ–ಹತ್ತರಗಿ ಗ್ರಾಮದ ಶ್ರೀ ಬನಶಂಕರಿ ದೇವಾಲಯದಲ್ಲಿ ನಡೆದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ.. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು (ಪೀಠಾಧ್ಯಕ್ಷರು, ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ, ಹೇಮಕೂಟ–ಹಂಪಿ), ಶ್ರೀಮ.ನಿ.ಪ್ರ.ಸ್ವ. ಶ್ರೀ ಗುರುರಾಜೇಶ್ವರ ಮಹಾಸ್ವಾಮಿಗಳು (ಪೀಠಾಧ್ಯಕ್ಷರು, ಶೂನ್ಯ ಸಂಪಾದನಾ ಮಠ, ಹುಣಸಿಕೊಳ್ಳಮಠ, ಯಮಕನಮರಡಿ), ಶ್ರೀಮ.ನಿ.ಪ್ರ.ಸ್ವ. ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು (ಕಾರೀಮಠ, ಹತ್ತರಗಿ), ಪ.ಪೂ. ಶ್ರೀ …

Read More »

ನವೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ವಿಧಾನ ಸೌಧದ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆಯನ್ನು ನಡೆಸಲಾಯಿತು.

ನವೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ವಿಧಾನ ಸೌಧದ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಗೃಹಲಕ್ಷ್ಮಿ ಸೊಸೈಟಿ ರಚನೆಯ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡುವ ಬಗ್ಗೆ ಸಲಹೆ ಸೂಚನೆ ನೀಡಲಾಯಿತು. ಇದೇ ವೇಳೆ ಅಕ್ಕಾಪಡೆ, ಸಖಿ‌ ಒನ್ ಸ್ಟಾಪ್ ಸೆಂಟರ್, ಸರ್ಕಾರಿ ಮಾಂಟೆಸ್ಸರಿ ಬಗ್ಗೆಯೂ ಚರ್ಚೆ ನಡೆಸಲಾಯಿತು. ಸಭೆಯಲ್ಲಿ …

Read More »

ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯಡಿ ರೂ. 57 ಲಕ್ಷ ವೆಚ್ಚದಲ್ಲಿ ಸೇವಾ ರಸ್ತೆ ಕಾಮಗಾರಿಗೆ ಚಾಲನೆ

ಸವದತ್ತಿ: ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯಡಿ ರೂ. 57 ಲಕ್ಷ ವೆಚ್ಚದಲ್ಲಿ ಸೇವಾ ರಸ್ತೆ ಕಾಮಗಾರಿಗೆ ಚಾಲನೆ ​ಸವದತ್ತಿ: ಕರ್ನಾಟಕ ನೀರಾವರಿ ನಿಗಮ ನಿಯಮಿತದ (KNNL) ವತಿಯಿಂದ ಸವದತ್ತಿ ತಾಲೂಕಿನ ಮಹತ್ವಕಾಂಕ್ಷಿ ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯಡಿಯಲ್ಲಿ ರೈತರಿಗೆ ಅನುಕೂಲವಾಗುವ ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ​ಸವದತ್ತಿ ಶಾಖಾ ಕಾಲುವೆಯ ಕಿಲೋಮೀಟರ್ (ಕಿ.ಮೀ) 3 ಮತ್ತು 4 ರ …

Read More »

ಅಪ್ಪನನ್ನೇ ಹೊಡೆದು ನದಿಗೆ ತಳ್ಳಿ ಕೊಂದ ಮಗ

ಬೆಂಗಳೂರು : ತಾಯಿಯನ್ನ ಅವಾಚ್ಯವಾಗಿ ನಿಂದಿಸುತ್ತಿದ್ದವನನ್ನ ಆಕೆಯ ಮಗ ಹತ್ಯೆ ಮಾಡಿರುವ ಘಟನೆ ಸೋಮವಾರ ಉಲ್ಲಾಳ ಉಪನಗರದಲ್ಲಿ ವರದಿಯಾಗಿದೆ. ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಅವಿನಾಶ್ (36) ಎಂಬಾತನನ್ನ ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿ‌ ಕಾರ್ತಿಕ್‌ (26)ನನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಡಿಸಿಪಿ ಪ್ರತಿಕ್ರಿಯೆ ಹೀಗಿದೆ: ಈ ಕುರಿತು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ಮಾತನಾಡಿ, ಕಾರ್ತಿಕ್‌ನ ಸಂಬಂಧಿಯಾಗಿದ್ದ …

Read More »

56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ‌ ಪಿ-ಕ್ಯಾಪ್ ವಿತರಣೆ: ಈ ಕ್ಯಾಪ್ ಆಯ್ಕೆ‌ ಮಾಡಿದ್ದು ನಾನೇ- ಸಿಎಂ

ಬೆಂಗಳೂರು: 56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ‌ ಹೊಸದಾಗಿ ನೀಡಲಾಗುತ್ತಿರುವ ಪಿ-ಕ್ಯಾಪ್‌ನಲ್ಲಿ ಬದಲಾವಣೆ ಅಷ್ಟೇ ಅಲ್ಲದೆ ದಕ್ಷತೆ‌ ಮೆರೆಯುವ ಮೂಲಕ ವೃತ್ತಿಯಲ್ಲಿ ಬದಲಾವಣೆಯಾಗಬೇಕು. ಈ ಮೂಲಕ ಸಮಾಜದಲ್ಲಿ‌ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಂದು ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್ ಪರಿಚಯ ಹಾಗೂ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಲವು ವರ್ಷಗಳಿಂದ …

Read More »

ರಾಷ್ಟ್ರೀಯ ಆಯುರ್ವೇದ ದಿನ: ಸಾರ್ವಜನಿಕರಿಗೆ ಆಯುರ್ವೇದ ಗಿಡಗಳ ವಿತರಣೆ

ಮೈಸೂರು: ನಗರದ ಚಾಮುಂಡಿಪುರಂನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಇಂದು ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನು ವಿತರಣೆ ಮಾಡುವ ಮೂಲಕ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮಾಡಲಾಯಿತು. ಆಯುರ್ವೇದ ಸಸ್ಯಗಳಾದ ಅಮೃತ ಬಳ್ಳಿ, ಕೃಷ್ಣ ತುಳಸಿ, ರಾಮ ತುಳಸಿ, ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ, ಅಗಸೆ ಗಿಡ, ನೇರಳೆ ಗಿಡ, ಬೇವಿನ ಗಿಡ, ಅರಿಶಿನ ಗಿಡ ಸೇರಿದಂತೆ ಇನ್ನಿತರ ಔಷಧೀಯ ಗಿಡಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಆಯುರ್ವೇದ ಹಿರಿಯ ವೈದ್ಯ ಡಾ.ಚಂದ್ರಶೇಖರ್ ಅವರು ಮಾತನಾಡಿ, “ಒತ್ತಡದ …

Read More »

ನವೆಂಬರ್ ಕ್ರಾಂತಿ ಮಾಡಲು ಹೈಕಮಾಂಡ್ ಬಿಡಲ್ಲ: ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ನವೆಂಬರ್ ಕ್ರಾಂತಿ ಎಲ್ಲ ಆಗಲ್ಲ. ಕ್ರಾಂತಿ ಆಗಲು ಹೈಕಮಾಂಡ್ ಬಿಡಬೇಕಲ್ವಾ?. ಹೈಕಮಾಂಡ್ ಹಾಗೆಲ್ಲ ಮಾಡೋಕೆ ಬಿಡಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.‌ ನಗರದಲ್ಲಿಂದು ಮಾತನಾಡಿದ ಅವರು, ಇನ್ನೊಂದು 20-30 ದಿನ ಇದೆ ಅಷ್ಟೇ. ಏನಾಗುತ್ತದೆ ನೋಡೋಣ ಎಂದರು. ಇದೇ ವೇಳೆ, ಏಕನಾಥ್ ಶಿಂಧೆ ಒಬ್ಬರೇ, ಪವಾರ್ ಕೂಡ ಒಬ್ಬರೇ. ಇನ್ನೊಬ್ಬ ಏಕನಾಥ್ ಶಿಂಧೆ, ಪವಾರ್ ಹುಟ್ಟಿಕೊಳ್ಳಲು ಆಗಲ್ಲ ಎಂದರು. ನಾವೇನು ಸಿಎಂ ಸ್ಥಾನ ಕೇಳಿಲ್ಲ: ಅಹಿಂದ ನಾಯಕತ್ವದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, …

Read More »

ಅಕ್ಟೋಬರ್ 28ರಿಂದ ಸೋಯಾ, ಸೂರ್ಯಕಾಂತಿ, ಹೆಸರು ಖರೀದಿ ಆರಂಭ: ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಬೆಂಬಲ ಬೆಲೆಯಲ್ಲಿ ಅಕ್ಟೋಬರ್ 28ರಿಂದ (ಮಂಗಳವಾರ) ಸೋಯಾಬಿನ್‌, ಸೂರ್ಯಕಾಂತಿ ಮತ್ತು ಹೆಸರುಕಾಳು ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ರೈತರಿಗೆ ಸಿಹಿ ಸುದ್ದಿಯನ್ನು ತಿಳಿಸಿದ್ದಾರೆ. ಎಲ್ಲೆಡೆ ಈಗಾಗಲೇ ಖರೀದಿ ಕೇಂದ್ರಗಳನ್ನು ತೆರೆದು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಸೋಯಾಬಿನ್‌ ಖರೀದಿಗೆ ಒಟ್ಟು 206 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 19,325 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ 116 ಖರೀದಿ …

Read More »

ಕ್ರೀಡಾಳುಗಳಿಗೆ ಒಲಿಂಪಿಕ್‌ ತರಬೇತಿಗೆ ಸರ್ಕಾರದಿಂದ 10ಲಕ್ಷ ರೂ‌ಪಾಯಿ ನೀಡುತ್ತೇವೆ: ಸಿಎಂ

ಮಂಗಳೂರು: ರಾಜ್ಯ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಹಿ ಸುದ್ದಿಯೊಂದನ್ನು ತಿಳಿಸಿದ್ದಾರೆ. ಜನಸಂಖ್ಯೆಯಲ್ಲಿ ನಂಬರ್ ಒನ್‌ ಆಗಿರುವ ಭಾರತ ಒಲಿಂಪಿಕ್ ಪದಕದಲ್ಲೂ ನಂಬರ್ ಒನ್ ಆಗಬೇಕು. ಅದಕ್ಕಾಗಿ ನಮ್ಮ ಸರ್ಕಾರ ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಉರ್ವದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ “ಚೀಫ್ ಮಿನಿಸ್ಟರ್ – ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಪಂದ್ಯಾವಳಿ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. …

Read More »

ಸಂಪುಟ ಪುನಾರಚನೆ ಆದರೆ, ಸಿದ್ದರಾಮಯ್ಯ ನಾಯಕತ್ವ ಅಬಾಧಿತ: ಕೆ.ಎನ್.ರಾಜಣ್ಣ

ಬೆಂಗಳೂರು: ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವ ಅಭಾದಿತ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ.‌ ಇದೀಗ ಎರಡೂವರೆ ವರ್ಷ ಆಗಿದೆ. ಎರಡೂವರೆ ವರ್ಷ ಆದ ಬಳಿಕ ಸಂಪುಟ ಪುನಾರಚನೆ ಮಾಡಲಿಕ್ಕೆ ಅನುಮತಿ ಸಿಕ್ಕರೂ ಸಿಎಂ ಬದಲಾವಣೆ ಇಲ್ಲ. ಒಂದು ವೇಳೆ ಅನುಮತಿ ಸಿಗದೇ ಇದ್ದರೆ ರಾಜಕೀಯದ ಚಟುವಟಿಕೆಗೆಳು ನಡೆಯುತ್ತದೆ. …

Read More »