Breaking News

ಆಸ್ಟ್ರೇಲಿಯಾದಲ್ಲಿ ತಿಂಗಳ ಹಿಂದೆ ಆರಂಭವಾಗಿರುವ ಕಾಡ್ಗಿಚ್ಚು ಇನ್ನೂ ಹತೋಟಿಗೆ ಬಂದಿಲ್ಲ

Spread the love

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ತಿಂಗಳ ಹಿಂದೆ ಆರಂಭವಾಗಿರುವ ಕಾಡ್ಗಿಚ್ಚು ಇನ್ನೂ ಹತೋಟಿಗೆ ಬಂದಿಲ್ಲ. ದಿನದಿಂದ ದಿನಕ್ಕೆ ಕಾಡ್ಗಿಚ್ಚು ಹೆಚ್ಚಾಗುತ್ತಿದ್ದು, ಸಂತ್ರಸ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಈ ನಡುವೆ ಭಾರತೀಯ ಮೂಲದ ದಂಪತಿಯೊಂದು ಕಾಡ್ಗಿಚ್ಚು ಸಂತ್ರಸ್ತರಿಗೆ ಉಚಿತ ಉಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಮಲಜೀತ್ ಕೌರ್ ಮತ್ತು ಆಕೆಯ ಪತಿ ಕನ್ವಲ್ ಜೀತ್ ಕಳೆದ ಕೆಲವು ದಿನಗಳಿಂದ ಉಚಿತ ಊಟ ನೀಡುತ್ತಿದ್ದಾರೆ. ವಿಕ್ಟೊರಿಯಾದಲ್ಲಿ ದೆಸಿ ಗ್ರಿಲ್ ರೆಸ್ಟೋರೆಂಟ್ ನಡೆಸುತ್ತಿರುವ ದಂಪತಿ ತಮ್ಮ ಹೋಟೆಲ್ ನಲ್ಲಿಯೇ ಅನ್ನ ಮತ್ತು ಸಾರು ತಯಾರಿಸಿ ಅದನ್ನು ಪರಿಹಾರ ಕೇಂದ್ರಗಳಿಗೆ ನೀಡುತ್ತಿದ್ದಾರೆ.

ಕಾಂಗರೂ ನೆಲದಲ್ಲಿ ಹಬ್ಬಿರುವ ಕಾಡ್ಗಿಚ್ಚಿನಿಂದಾಗಿ ವಿಕ್ಟೋರಿಯಾದಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಉಳಿದಂತೆ ನ್ಯೂ ಸೌತ್ ವೇಲ್ಸ್ ಮತ್ತು ಸೌತ್ ಆಸ್ಟ್ರೇಲಿಯಾದಲ್ಲಿ ಕೂಡಾ ಕಾಡ್ಗಿಚ್ಚು ಭಾರಿ ಹಾನಿ ಉಂಟುಮಾಡಿದೆ.

ಆಸ್ಟ್ರೇಲಿಯಾದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗಡುತ್ತಿದ್ದು, ಸುಮಾರು ಫ್ಲಿಂಡರ್ಸ್ ಚೇಸ್ ರಾಷ್ಟ್ರೀಯ ಉದ್ಯಾನದ ಸುಮಾರು 14,000 ಹೆಕ್ಟೇರ್ಸ್ ಜಾಗ ಹೊತ್ತಿ ಉರಿದಿದೆ


Spread the love

About Laxminews 24x7

Check Also

ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಆಯ್ಕೆ

Spread the loveಟೆಹ್ರಾನ್: ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ರಾಂತಿ ಮತ್ತು ಬದಲಾವಣೆಯ ಗಾಳಿ ಬೀಸುತ್ತಿದೆ. ಅಮೇರಿಕಾ-ಇಸ್ರೇಲ್ ಜಂಟಿ ವೈಮಾನಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ