ಅಥಣಿ: ‘ಇಲ್ಲಿ ಶರಣ ಸಂಸ್ಕೃತಿ ಹಾಸುಹೊಕ್ಕಾಗಿದೆ. ಹೊರಗಿನಿಂದ ಬಂದವರೆಲ್ಲರನ್ನೂ ತಮ್ಮವರೆಂದು ಪ್ರೀತಿ, ವಿಶ್ವಾಸ ಕೊಟ್ಟು ಜಾತಿ, ಮತವೆನ್ನದೆ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣ ಈ ಮಣ್ಣಿನದಾಗಿದೆ’ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಅವರ 128ನೇ ಪುಣ್ಯಾರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಭಾರತೀಯ ಆಹಾರ ಪದ್ಧತಿಯಲ್ಲಿ ದಿವ್ಯ ಔಷಧಿಗಳಿವೆ. ಆದಾಗ್ಯೂ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಸೋಂಕಿನಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.
ಶೆಟ್ಟರ ಮಠದ ಸ್ವಾಮೀಜಿ ಮಾತನಾಡಿದರು. ಬಾಬುರಾವ ಮಹಾರಾಜರು ಹಾಗೂ ಕೊರೊನಾ ಯೋಧರಾದ ಡಿವೈಎಸ್‌ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸನಗೌಡ, ಪಿಎಸ್‌ಐ ಕುಮಾರ ಹಾಡ್ಕರ, ಡಾ.ಮಲ್ಲಿಕಾರ್ಜುನ ಹಂಜಿ, ಅನ್ನದಾಸೋಹಿ ರಾಮನಗೌಡ ಪಾಟೀಲ (ಶಿವನೂರು), ಗ್ರೇಡ್-2 ತಹಶೀಲ್ದಾರ್ ರಾಜೇಶ ಬುರ್ಲಿ, ಡಾ.ಪ್ರಕಾಶ ಸಾವಡಕರ, ಪ್ರಕಾಶ ಮಹಾಜನ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಆಶಾ ಕಾರ್ಯಕರ್ತೆಯರನ್ನು ಸತ್ಕರಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಮಹಾಂತೇಶ ಉಕಲಿ, ಮುಖಂಡರಾದ ಶಿವಾನಂದ ದಿವಾನಮಳ, ಶ್ರೀಶೈಲ ಹಳ್ಳದಮಳ, ಆನಂದ ಲಗಳಿ, ವಿವೇಕ ಮೇಣಶಿ, ನಿತ್ಯಾನಂದ ಚರಂತಿಮಠ ಹಾಗೂ ಮುಕ್ತಾಯಕ್ಕನ ಬಳಗದವರು ಇದ್ದರು.