ಅಥಣಿ :ಅಂತಾರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಯ ಪ್ರಯುಕ್ತ ಶಂಕರಟ್ಟಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.
ಈ ವೇಳೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶುವೈದ್ಯ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ ಬಸವರಾಜ ಖೇಮಲಾಪುರ ವಿಪತ್ತು ನಿರ್ವಾಹಕ ಘಟಕದ ಸಂಯೋಜಕರು ದರೂರ ಹಾಗೂ ವಲಯ ಮೇಲ್ವಿಚಾರಕರು , ಸೇವಾಪ್ರತಿನಿಧಿಗಳು ಮತ್ತು ವೈದ್ದ್ಯಾದಿಕಾರಿಗಳು ಮತ್ತು ನರ್ಸ್ ಸ್ವಯಂ ಸೇವಕರು ಜಕ್ಕಪ್ಪ ತೀರ್ಥ, ವಿಠ್ಠಲ್ ಕುಂಬಾರ್, ಸದಾಶಿವ ಚೌಗಲಾ, ರಾಜು ನಾರಗೊಂಡ, ಸಂಜು ಶಂಕ್ರಟ್ಟಿ. ಸೇರಿದಂತೆ ದರೂರ ವಲಯದ ಸಂಯೋಜಕರು ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.