ಅಥಣಿ : ದೇಶದಲ್ಲಿ ಬದುಕುತ್ತಿರುವ ವಿವಿಧ ಸಮುದಾಯದ ಜನರು ಸ ಹೃದಯ ಸಹಬಾಳ್ವೆಯಿಂದ ಬಾಳಬೇಕು . ಸಮಾಜದಲ್ಲಿ ಸಮಾನತೆ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಕೈಜೊಡಿಸಬೇಕೆಂದು ಅಥಣಿ ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕರಾದ ಜ್ಯೋತಿ ನರೋಟಿ ಹೇಳಿದರು .
ಜಿಲ್ಲಾ ಪಂಚಾಯತ ಬೆಳಗಾವಿ ತಾಲೂಕಾ ಆಡಳಿತ ಸಮಾಜ ಕಲ್ಯಾಣ ಇಲಾಖೆ ಅಥಣಿ ಹಾಗೂ ಗ್ರಾಮ ಪಂಚಾಯತ ನದಿ ಇಂಗಳಗಾಂವ ಇವರ ಸಹಯೋಗದಲ್ಲಿ ಅಸ್ಪೃಶ್ಯತಾ ನಿರ್ಮೂಲನೆ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳ ಜಾಗೃತಿ ಕಲಾಜಾಥಾ ತಮಟೆ ವಾದ್ಯ ನುಡಿಸಿ ಚಾಲನೆ ನೀಡಿ ಮಾತನಾಡಿದರು . ಪ.ಜಾ , ಪ.ಪಂಗಡ ಸಮುದಾಯಕ್ಕೆ ವಿಶೇಷ ಘಟಕ ಯೋಜನೆ ವಿವಿಧ ಅಭಿವೃದ್ಧಿ ನಿಗಮಗಳ ಮುಖಾಂತರ ಹಲವಾರು ಯೋಜನೆಗಳ ರೂಪಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೆಕು ಎಂದರು .ನಂತರ ರಂಗದರ್ಶನ ತಂಡ ಧುಳಗನವಾಡಿ ಬೀದಿ ನಾಟಕ ಜಾಗೃತಿ ಹಾಡುಗಳ ಮುಖಾಂತರ ಕಲಾ ಪ್ರದರ್ಶನ ನೀಡಿ ಅರಿವು ಮೂಡಿಸಿದರು ಈ ವೆಳೆ ಸಮಾಜ ಕಲ್ಯಾಣ ಇಲಾಖೆಯ ಚಂದ್ರು ಕಾಂಬಳೆ, ವಿನೋದ್ ಪರೋಲಿ ಫಕ್ಕೀರಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಗ್ರಾಮಸ್ಥರು ಉಪಸ್ಥಿತರಿದ್ದರು .