ಬೆಂಗಳೂರು: ಎಮರ್ಜೆನ್ಸಿ ಸಮಯದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹಾಕಿದ್ದಾಗ, ಇದೇ ಸಿದ್ದರಾಮಯ್ಯ ಅಂದಿನ ಕಾಂಗ್ರೆಸ್ ಸರ್ಕಾರವನ್ನ ವಿರೋಧ ಮಾಡಿದ್ದರು. ಈಗ ಅವ್ರೇ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿರೋದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ) ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ (Media Restriction) ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದರು. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಕೂಗಿದ್ರೆ ಕೇಸ್ ಹಾಕಲ್ಲ. ಮಹದೇವಪ್ಪ ನಾಯಿ ಅಂತ ಮಾತಾಡಿದ್ದಾರೆ. ನಾಯಿಗಳಿಗೆ ಅವಕಾಶ ಇದೆ. ಮಾಧ್ಯಮಗಳಿಗೆ ಇಲ್ಲವಾ? ಮಾಧ್ಯಮದವರು ಭಯೋತ್ಪಾದಕರಾ? ಮಾಧ್ಯಮ ಸ್ನೇಹಿತರು ವಿಧಾನಸೌಧಲ್ಲಿ ಓಡಾಡೋಕೆ ನಿರ್ಬಂಧ ಹಾಕೋದು ಸರಿಯಲ್ಲ. ಸಿಎಂ ಅವರು ದುರಹಂಕಾರವಾಗಿ ಮಾತಾಡಿದ್ದಾರೆ. ಈ ಸರ್ಕಾರ ಜಾಸ್ತಿ ದಿನ ಇರಲ್ಲ ಎಂದು ಭವಿಷ್ಯ ನುಡಿದರು.
300 ಗ್ರಾಂ ಚಿನ್ನ, ಮಂತ್ರಿ ಕಚೇರಿಗೆ ಕ್ಯಾಶ್ ತರೋರು ಓಡಾಡಬಹುದು. ಸಿದ್ದರಾಮಯ್ಯ ಬದಲಾಗಿದ್ದಾರೆ. ಎಮರ್ಜೆನ್ಸಿಯಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹಾಕಿದ್ದಾಗ, ಸಿದ್ದರಾಮಯ್ಯ ಅವರು ಇದೇ ಕಾಂಗ್ರೆಸ್ ಸರ್ಕಾರವನ್ನ ವಿರೋಧ ಮಾಡಿದ್ದರು. ಇವತ್ತು ಕಾಂಗ್ರೆಸ್ ಗೆ ಬಂದು ನಿರ್ಬಂಧ ಹಾಕಿದ್ದಾರೆ. ಕೂಡಲೇ ನಿರ್ಬಂಧ ವಾಪಸ್ ಪಡೆಯಬೇಕು ಅಂತ ಆಗ್ರಹ ಮಾಡಿದ್ರು.
ಸಿಎಂಗೆ ಕೈ ಮುಗಿದು ಸರ್ಕಾರದ ನಿರ್ಧಾರ ವ್ಯಂಗ್ಯ ಮಾಡಿದ ಅಶೋಕ್, ಕ್ಷಮಿಸಿ ಬಿಡಿ ಬೀದಿಯಲ್ಲಿ ಸುದ್ದಿಗೋಷ್ಟಿ ಮಾಡಿದ್ದಕ್ಕೆ. ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ಯಾವಾಗಲು ಬಂದಿರಲಿಲ್ಲ. ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಸಿದ್ದರಾಮಯ್ಯರಿಂದ ಬಂದಿದೆ. ಅನಿವಾರ್ಯ ಇಲ್ಲಿ ಸುದ್ದಿಗೋಷ್ಠಿ ಮಾಡಿದ್ದೇನೆ. ಬೀದಿಯಲ್ಲಿ ಸುದ್ದಿಗೋಷ್ಠಿ ಮಾಡಲು ಕಾರಣ ಸಿದ್ದರಾಮಯ್ಯ. ಅವರಿಗೆ ಇದರ ಶಾಪ ತಟ್ಟಲಿ ಅಂತ ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ಫ್ರೀ ಗ್ಯಾರಂಟಿ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿ ಆಗ್ತಿದೆ. ಸುಪ್ರೀಂ ಕೋರ್ಟ್ ಹೇಳಿಕೆಯನ್ನ ನಾನು ಸ್ವಾಗತ ಮಾಡ್ತೀನಿ. ಈಗಾಗಲೇ ಹಿಮಾಚಲ ಪ್ರದೇಶ ಪಾಪರ್ ಆಗಿ ಭಿಕ್ಷಾ ಪಾತ್ರೆ ಹಿಡಿಯುತ್ತಿದೆ. ತೆಲಂಗಾಣ ಹೀಗೆ ಆಗಿದೆ. ಕರ್ನಾಟಕದಲ್ಲಿ ಆಸ್ಪತ್ರೆಗಳಲ್ಲಿ ಸ್ಕ್ಯಾನ್ ಮಾಡೋಕೆ ಆಗ್ತಿಲ್ಲ. ಸಾರಿಗೆ ಇಲಾಖೆ ಮುಷ್ಕರ ಆಯ್ತು. ಅವರಿಗೆ ದುಡ್ಡು ಕೊಡೋಕೆ ಆಗ್ತಿಲ್ಲ. ಗೃಹಲಕ್ಷ್ಮಿ ಹಣ ನುಂಗಿ ನೀರು ಕುಡಿದಿದ್ದೀರಾ. ಅನ್ನಭಾಗ್ಯ ಹಣ ನುಂಗಿ ನೀರು ಕುಡಿದಿದ್ದೀರಾ. ಇದು ಕಾಂಗ್ರೆಸ್ ದಿವಾಳಿ ಆಗಿರೋದಕ್ಕೆ ಸಾಕ್ಷಿ ಆಗಿದೆ. ಈ ಸರ್ಕಾರದ ಮೇಲೆ ಜನ ಭರವಸೆ ಕಳೆದುಕೊಂಡಿದ್ದಾರೆ. ಇದು ಸತ್ತು ಹೋಗಿರೋ ಸರ್ಕಾರ. ಮುಸ್ಲಿಂಮರ ಪರ ಸರ್ಕಾರ ಇದು ಅಂತ ಕಿಡಿಕಾರಿದರು.ಇನ್ನೂ ರಾಜ್ಯ ಸರ್ಕಾರ ಪ್ರೊ.ಗೋವಿಂದ್ ರಾವ್ ವರದಿ ಸ್ವೀಕರಿದ್ದರ ಕುರಿತು ಮಾತನಾಡಿ, ಪ್ರಾದೇಶಿಕ ಅಸಮತೋಲನದ ಬಗ್ಗೆ ಪ್ರೊ. ಗೋವಿಂದ್ ರಾವ್ ನೀಡಿರುವ ವರದಿ ಸರ್ಕಾರ ಜಾರಿ ಮಾಡಬೇಕು ಅಂತ ಆರ್. ಅಶೋಕ್ ಸಿಎಂ ಸಿದ್ದರಾಮಯ್ಯರನ್ನ ಒತ್ತಾಯಿಸಿದರು.
ಪ್ರೊ.ಗೋವಿಂದ್ ರಾವ್ ವರದಿಯಲ್ಲಿ ಹಿಂದುಳಿದ ವರ್ಗಗಳ ತಾಲೂಕುಗಳು ಜಾಸ್ತಿ ಆಗಿದೆ. ಅಸಮತೋಲನ ಸರಿ ಆಗಬೇಕಾದ್ರೆ ಅನುದಾನ ಜಾಸ್ತಿ ಕೊಡಬೇಕು. ಈ ಬಜೆಟ್ ನಲ್ಲಿ 15 ಸಾವಿರ ಕೋಟಿ ಕೊಡಬೇಕು ಅಂತ ವರದಿ ಹೇಳಿದೆ. ಸಿದ್ದರಾಮಯ್ಯ ಅವರೇ ಮೊಸಳೆ ಕಣ್ಣೀರು ಹಾಕಬೇಡಿ. 3 ವರ್ಷಗಳಲ್ಲಿ 45 ಸಾವಿರ ಕೋಟಿ ಹಣ ಕೊಡಬೇಕು. ಇಲ್ಲದೆ ಹೋದ್ರೆ ನೀವು ಉತ್ತರ ಕರ್ನಾಟಕದ ವಿರೋಧಿ ಆಗ್ತೀರಾ ಅಂತ ಎಚ್ಚರಿಕೆ ಕೊಟ್ರು.
Laxmi News 24×7