Breaking News

ಮಹಿಳಾ ಅಧಿಕಾರಿಗೆ ಬೆದರಿಕೆ ಪ್ರಕರಣ ಬಂಧಿತರು ಪುನಃ ಪೊಲೀಸ್ ವಶಕ್ಕೆ

Spread the love

ಬೆಳಗಾವಿ: ಮಹಿಳಾ ಅಧಿಕಾರಿ ಮನೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಖಾಸಗಿ ದೃಶ್ಯ ಸೆರೆಹಿಡಿದು, ವೈರಲ್ ಮಾಡುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿದ್ದ ಮೂವರು ಯುಟ್ಯೂಬರ್‌ಗಳನ್ನು ಪುನಃ ವಶಕ್ಕೆ ಪಡೆದಿರುವ ಮಾಳಮಾರುತಿ ಠಾಣೆ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ದುಲ್ ರಶೀದ್ ಮಕಾನದಾರ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಇವರಿಂದ ಮಾಹಿತಿ ಪಡೆದು ಕಳೆದ ವಾರ ವಿನೋದನನ್ನು ಬಂಧಿಸಿದ್ದರು.
ವಿಚಾರಣೆಯಲ್ಲಿ ವಿನೋದ ಕೆಲ ವಿಷಯಗಳನ್ನು ಹೇಳಿರುವ ಹಿನ್ನೆಲೆ ಈ ಮೊದಲು ಬಂಧಿಸಿದ್ದ ಮೂವರನ್ನು ನ್ಯಾಯಾಲಯದಿಂದ ತಮ್ಮ ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಈ ಮೂವರ ಮೊಬೈಲ್ ಡೇಟಾ ಸಹ ಲಭ್ಯವಾಗಿದೆ ಎನ್ನಲಾಗಿದ್ದು, ಕೆಲ ಮಾಹಿತಿಗಳು ಸಿಕ್ಕಿವೆ. ಪುನಃ ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Spread the love

About Laxminews 24x7

Check Also

43 ವರ್ಷಗಳ ಬಳಿಕ ಕಂಗ್ರಾಳಿ ಬಿಕೆ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ದೇವಿಯ ಮಂಟಪ ಸ್ಥಳದಲ್ಲಿ ಚನ್ನರಾಜ ಹಟ್ಟಿಹೊಳಿ ಪೂಜೆ

Spread the loveಬೆಳಗಾವಿ: ಸುಮಾರು 43 ವರ್ಷಗಳ ದೀರ್ಘ ವಿರಾಮದ ಬಳಿಕ ಕಂಗ್ರಾಳಿ ಬಿಕೆ ಗ್ರಾಮದಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ