Breaking News

ಅಥಣಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಗ್ರಾಪಂ. ಸದಸ್ಯ ಸಾವು

Spread the love

ಅಥಣಿ : ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿದ ಪರಿಣಾಮ ಗ್ರಾಪಂ. ಸದಸ್ಯ ಸಾವನ್ನಪ್ಪಿದ ಘಟನೆ ನಡೆದಿದೆ.

ಶಿರಗುಪ್ಪಿ ಗ್ರಾಮದ ಸೋಮೇಶ್ ಶಿವಾನಂದ ಪಾಟೀಲ ( 32 ) ಮೃತ ಗ್ರಾಪಂ ಸದಸ್ಯ .

ಹಳೆ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಮನೆಯಲ್ಲಿ ಇದ್ದರು . ಇವರು ಮಾತ್ರ ಮನೆಯ ಚಾವಣಿಯ ಮೇಲೆ ಮಲಗಿದ್ದರು . ಏಕಾಏಕಿ ತಡರಾತ್ರಿ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಅತಿಯಾದ ಬೆಂಕಿ ಹತ್ತಿದ್ದರಿಂದ ಸೋಮೇಶನನ್ನು ಕಾಪಾಡಲು ಸಾಧ್ಯವಾಗಿಲ್ಲ . ಬೆಂಕಿಯಲ್ಲಿ ಮೃತ ಪಟ್ಟಿದ್ದಾನೆ .

ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ .


Spread the love

About Laxminews 24x7

Check Also

ರಾಜ್ಯಪಾಲರಿಗೆ ಕಡತ ರವಾನಿಸಿದ ಸರ್ಕಾರ ಬಿಎಸ್​​ವೈಗೆ ಢವಢವ ಶುರು

Spread the loveಬೆಂಗಳೂರು,   ಭ್ರಷ್ಟಾಚಾರ ದೂರಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ