Breaking News

belagavi-ರಾಮಕೃಷ್ಣ ಮಿಷನ್ ಆಶ್ರಮದ ವಾರ್ಷಿಕೋತ್ಸವ

Spread the love

ಬೆಳಗಾವಿ : ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ವಾರ್ಷಿಕೋತ್ಸವ ಫೆ.6ರಿಂದ 8ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶುಕ್ರವಾರ(ಫೆ.6) ಬೆಳಗ್ಗೆ 10ಕ್ಕೆ ವ್ಯಕ್ತಿತ್ವ ನಿರ್ಮಾಣ ಕುರಿತ ಯುವ ಸಮ್ಮೇಳನದಲ್ಲಿ ‘ನಮ್ಮ ಆಂತರಿಕ ಸಾಮರ್ಥ್ಯ ಅನ್ವೇಷಣೆ’ ಕುರಿತು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ, ‘ವ್ಯಕ್ತಿತ್ವ ನಿರ್ಮಾಣದಲ್ಲಿ ಧ್ಯಾನದ ಪ್ರಾಮುಖ್ಯ ಮತ್ತು ಅಭ್ಯಾಸ ವಿಧಾನ’ ಕುರಿತು ಸ್ವಾಮಿ ಮೋಕ್ಷಾತ್ಮನಾನಂದ, ‘ನವತಾರುಣ್ಯದ ಆಶಾಕಿರಣ ಸ್ವಾಮಿ ವಿವೇಕಾನಂದ’ ವಿಷಯವಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡುವರು. ನಂತರ ಪ್ರಶ್ನೋತ್ತರ ಮತ್ತು ಸಂವಾದ ಇರಲಿದೆ.
ಫೆ. 7ರಂದು ಬೆಳಗ್ಗೆ 10ಕ್ಕೆ ಶಿಕ್ಷಕ ಸಮ್ಮೇಳನದಲ್ಲಿ ಬೆಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ನಿತ್ಯಸ್ಥನಾನಂದಜಿ ‘ಆರು ಮೂಲಭೂತ ಮೌಲ್ಯಗಳು‘, ‘ಶಿಕ್ಷಣದ ಅವಶ್ಯಕತೆ’ ಕುರಿತು ಕಾನ್ಪುರ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಆತ್ಮಶ್ರದ್ಧಾನಂದಜಿ ‘ಶಿಕ್ಷಣದ ಅವ್ಯಕತೆ’ ಹಾಗೂ ’ಇದು ಸವಾಲುಗಳ ಸುನಾಮಿಯ ಕಾಲ’ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡುವರು. ಸಂಜೆ 6ಕ್ಕೆ ಪುಣೆಯ ಪಂಡಿತ ಶೌನಾಕ್ ಅಭಿಷೇಕಿ ಅಭಂಗವಾಣಿ ಇರಲಿದೆ.
ಫೆ. 8ರಂದು ಬೆಳಗ್ಗೆ 10ಕ್ಕೆ ‘ಆಧ್ಯಾತ್ಮಿಕ ಜೀವನ ನಿರ್ಮಾಣ’ ಕುರಿತ ಆಧ್ಯಾತ್ಮಿಕ ಸಮ್ಮೇಳನದಲ್ಲಿ ಸ್ವಾಮಿ ನಿತ್ಯಸ್ಥನಾನಂದಜಿ ಮಹಾರಾಜ ‘ಮೂರು ಅನ್ವೇಷಣೆಗಳು’, ಆತ್ಮ ಶ್ರದ್ಧಾನಾನಂದಜಿ ‘ಭಕ್ತ ಮತ್ತು ಭಗವಾನ’ ಹಾಗೂ ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದ ‘ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಉದಯಿಸಿದ ಸೂರ್ಯ’ ಕುರಿತು ಮಾತನಾಡುವರು. ಸಂಜೆ 6ಕ್ಕೆ ಪಂಡಿತ ರಾಕೇಶ ಚೌರಾಸಿಯಾ ಬಾನ್ಸೂರಿ ವಾದನ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.

Spread the love

About Laxminews 24x7

Check Also

ಸೈಬರ್ ವಂಚನೆ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ 8 ಜನ ಆರೋಪಿಗಳ ವಿರುದ್ಧ ಪ್ರಕರಣ

Spread the loveಬೆಳಗಾವಿ: ದೇಶದ ವಿವಿಧೆಡೆ ನಡೆದ ಸೈಬರ್ ವಂಚನೆ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ 1,400 ಬ್ಯಾಂಕ್ ಖಾತೆಗಳು ಕೆಲಸ ಮಾಡಿರುವ ಬಗ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ