Breaking News

ಅಮೆರಿಕ ಸುಂಕ ಹೇರಿದ್ರೂ ರಫ್ತು ಹೆಚ್ಚಳ, 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ ವಿನಿಮಯ ಮೀಸಲು

Spread the love

ನವದೆಹಲಿ: 2027 ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 6.8%-7.2% ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಆರ್ಥಿಕ ಸಮೀಕ್ಷೆ  ಹೇಳಿದೆ.

ಫೆ.1 ರಂದು ಬಜೆಟ್‌ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ಇಂದು ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?
– ಜಾಗತಿಕ ವ್ಯಾಪಾರ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಭಾರತದ ಒಟ್ಟು ರಫ್ತುಗಳು (ಸರಕು ಮತ್ತು ಸೇವೆಗಳು) 2025ರ ಹಣಕಾಸು ವರ್ಷದಲ್ಲಿ ದಾಖಲೆಯ 825.3 ಬಿಲಿಯನ್‌ ಡಾಲರ್‌ಗೆ ತಲುಪಿದೆ. 2026ರ ಹಣಕಾಸು ವರ್ಷದಲ್ಲೂ ಇದೇ ವೇಗದಲ್ಲಿ ಮುಂದುವರಿಯುತ್ತಿದೆ. ಅಮೆರಿಕದ ಹೆಚ್ಚಿನ ಸುಂಕ ವಿಧಿಸಿದರೂ ಸರಕುಗಳ ರಫ್ತು 2.4% (ಏಪ್ರಿಲ್-ಡಿಸೆಂಬರ್ 2025), ಸೇವೆಗಳ ರಫ್ತು  6.5% ಏರಿಕೆಯಾಗಿದೆ.

– 2026 ರಲ್ಲಿ ನೈಜ ಜಿಡಿಪಿ ಬೆಳವಣಿಗೆ 7.4% ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ದೇಶೀಯ ಬೇಡಿಕೆಯೇ ಹೆಚ್ಚಾಗಿ ಬೆಳವಣಿಗೆಯಾಗುತ್ತದೆ. ಉತ್ಪಾದನಾ ಚಟುವಟಿಕೆ ಬಲಗೊಂಡಿದೆ ಮತ್ತು ಕೃಷಿ ಸ್ಥಿರತೆಯನ್ನು ಒದಗಿಸಿದೆ.

– ಏಪ್ರಿಲ್-ಡಿಸೆಂಬರ್ 2025ರ ಸರಕು ಆಮದು 5.9% ರಷ್ಟು ಹೆಚ್ಚಾಗಿದೆ. ಚಾಲ್ತಿ ಖಾತೆ ಕೊರತೆಯು ಜಿಡಿಪಿಯ 0.8% ರಷ್ಟಿದೆ. ಜನವರಿ 16, 2026 ರ ಹೊತ್ತಿಗೆ 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ  ವಿನಿಮಯ ಮೀಸಲನ್ನು ಭಾರತ ಹೊಂದಿದೆ.

– ಕೋವಿಡ್‌ ನಂತರ ಸರ್ಕಾರ ಹಂತ ಹಂತವಾಗಿ ಬಂಡವಾಳ ವೆಚ್ಚವನ್ನು ಏರಿಕೆ ಮಾಡುತ್ತಿದೆ. ಕೋವಿಡ್‌ ಪೂರ್ವ ಅವಧಿಯಲ್ಲಿ 1.7% ಇದ್ದ ವೆಚ್ಚ ನಂತರ ಜಿಡಿಪಿಯ 2.9% ರಷ್ಟು ಏರಿಕೆಯಾಗಿತ್ತು. 2025ರ ಹಣಕಾಸು ವರ್ಷದಲ್ಲಿ 4%ಗೆ ಏರಿಕೆಯಾಗಿದೆ.

– ಹಣಕಾಸು ಕೊರತೆಯು 2021ರ ಹಣಕಾಸು ವರ್ಷದಲ್ಲಿ ಜಿಡಿಪಿಯ 9.2% ಇತ್ತು. ಆದರೆ 2025 ರಲ್ಲಿ ಇದು 4.8% ಇಳಿಕೆಯಾಗಿದೆ. 2026 ರಲ್ಲಿ 4.4% ಇಳಿಕೆ ಮಾಡುವಂತೆ ಬಜೆಟ್‌ನಲ್ಲಿ ಗುರಿಯನ್ನು ಹಾಕಲಾಗಿದೆ. ಈ ಅವಧಿಯಲ್ಲಿ ಆದಾಯ ಕೊರತೆಯು ಸ್ಥಿರವಾಗಿ ಕಡಿಮೆಯಾಗಿದೆ

– 2027ರಲ್ಲಿ ಹಣದುಬ್ಬರ ಹೆಚ್ಚಾಗಿರಬಹುದು ಆದರೆ ಕಳವಳಕಾರಿಯಲ್ಲ ಎಂದು ಸಮೀಕ್ಷೆ ಹೇಳಿದೆ. ಮುಖ್ಯವಾಗಿ ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯಾಗಬಹುದು. ಪ್ರಸ್ತುತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಮಧ್ಯಮ ಪ್ರಮಾಣದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಗದಿ ಮಾಡಿರುವ 4% ±2% ಗುರಿ ವ್ಯಾಪ್ತಿಯಲ್ಲೇ ಇರುವ ನಿರೀಕ್ಷೆಯಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಬೆಲೆಗಳು ಏರಿಕೆಯಾದ ಕಾರಣ ಭಾರತದ ಆರ್ಥಿಕತೆಯು ಸ್ಥಿರವಾಗಿ ಮುಂದುವರೆಯುತ್ತಿದೆ.

– 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ನಿರುದ್ಯೋಗ ದರವು ಸ್ಥಿರವಾಗಿ ಕಡಿಮೆಯಾಗಿದೆ. 2017-18 ರಲ್ಲಿ 6% ರಿಂದ 2023-24 ರಲ್ಲಿ 3.2% ಕ್ಕೆ ಇಳಿದಿದೆ. ಇದಲ್ಲದೆ ನಗರ ನಿರುದ್ಯೋಗ ದರವು ಸ್ವಲ್ಪ ಸುಧಾರಣೆಯನ್ನು ಕಂಡಿದೆ. ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಸರ್ಕಾರವು ತನ್ನ ಬಂಡವಾಳ ವೆಚ್ಚದ 75% ಅನ್ನು ರಕ್ಷಣಾ, ರೈಲ್ವೆ ಮತ್ತು ರಸ್ತೆ ಸಾರಿಗೆ ಮೇಲೆ ಹೂಡಿಕೆ ಮಾಡಿದೆ.

– ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಪ್ರಗತಿ ಕಂಡುಬಂದಿದೆ. ಸುಂಕ ವಿಧಿಸಿದ್ದರಿಂದ ಕೆಲ ವಲಯಗಳ ಮೇಲೆ ಪರಿಣಾಮ ಬಿದ್ದರೂ ಭಾರತದ ರಫ್ತುಗಳನ್ನು ಪರ್ಯಾಯವಾಗಿ ಬೇರೆ ಕಡೆಗೆ ತಿರುಗಿಸಲಾಗಿದೆ.

– ಭಾರತವು ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಹಲವಾರು ಸವಾಲುಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ನಾಲ್ಕು ಟ್ರಿಲಿಯನ್ ಡಾಲರ್ ಗಡಿಯನ್ನು ದಾಟುವತ್ತ ವೇಗವಾಗಿ ಸಾಗುತ್ತಿದೆ. ಟ್ರಂಪ್ ಟ್ಯಾರಿಫ್ ಯುದ್ಧದ ನಡುವೆಯೂ ಯುರೋಪ ಒಕ್ಕೂಟದ ಜೊತೆಗಿನ ಒಪ್ಪಂದ ಉತ್ಪಾದನಾ ವಲಯಕ್ಕೆ ಒಂದಷ್ಟು ರಿಯಾಯಿತಿ ಸಿಗಬಹುದು ಎಂದು ಸಮೀಕ್ಷೆ ಹೇಳಿದೆ.


Spread the love

About Laxminews 24x7

Check Also

ರಾಜ್ಯಪಾಲರ ಭಾಷಣದ ಮೊದಲ 11 ಪ್ಯಾರಾಗಳಲ್ಲಿ ವಿಬಿ ಜಿ ರಾಮ್​ ಜಿ ಕಾಯ್ದೆ ಟೀಕಿಸಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ

Spread the loveಬೆಂಗಳೂರು : ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷದ ಮಧ್ಯೆ ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಲಾಯಿತು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ