Breaking News

ಆಲ್ ಇಂಡಿಯಾ ಕ್ರಿಕೆಟ್ ಟೂರ್ನಿ 12ರಿಂದ

Spread the love

ಬೆಳಗಾವಿ: ಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಮುರುಘೇಂದ್ರಗೌಡ ಫೌಂಡೇಷನ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಪಟುಗಳನ್ನು ಒಳಗೊಂಡಿರುವ ‘ಆಲ್ ಇಂಡಿಯಾ ಓಪನ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ-26’  ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಮುರೇಂದ್ರಗೌಡ ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ ಮೈದಾನದಲ್ಲಿ ಫೆ.12ರಿಂದ ಫೆ.22ರ ವರೆಗೆ 11 ದಿನಗಳ ಕಾಲ ನಡೆಯಲಿರುವ  ಟೂರ್ನಿಯಲ್ಲಿ 48 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ.
ಕರ್ನಾಟಕ ಮಾತ್ರವಲ್ಲದೆ ಉತ್ತರಪ್ರದೇಶ, ದೆಹಲಿ, ಗೋವಾದ ತಂಡಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ, ರಣಜಿ, ಐಪಿಎಲ್‌ನಲ್ಲಿ ಆಡಿರುವ ಕ್ರಿಕೆಟಿಗರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿಯವರೆಗೆ 40 ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದರು.
ನಗರದ ದೊಡ್ಡ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಬೌಲರ್, ಬ್ಯಾಟ್ಸ್‌ಮನ್ ಎಲ್‌ಇಡಿ ಟಿವಿ,  ಸರಣಿ ಶ್ರೇಷ್ಠ ಕ್ರೀಡಾಪಟುವಿಗೆ ಬೈಕ್ ಉಡುಗೊರೆ ನೀಡಲಾಗುತ್ತಿದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ 5,27,127 ರೂ. ಹಾಗೂ ದ್ವಿತೀಯ ಸ್ಥಾನಕ್ಕೆ 2,51,127 ರೂ. ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು. ಪಾಲಿಕೆ ಸದಸ್ಯರಾದ ಹಣಮಂತ ಕೊಂಗಾಲಿ, ರಾಜಶೇಖರ ಡೋಣಿ, ಶ್ರೀನಿವಾಸ ಬಿಸನಕೊಪ್ಪ, ಮಹಾದೇವ ರಾಠೋಡ ಇತರರಿದ್ದರು.

Spread the love

About Laxminews 24x7

Check Also

ಸೂಕ್ತ ಸಂಗಾತಿ ಆಯ್ಕೆ ದಾಂಪತ್ಯ ಬುದಕಿಗೆ ಮುಖ್ಯ

Spread the loveಬೆಳಗಾವಿ: ದಾಂಪತ್ಯ ಜೀವನ ಬುದಕಿಗೆ ಬಹುದೊಡ್ಡದು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಚತುರ್ವಿಧ ಪುರುಷಾರ್ಥಗಳಲ್ಲಿ ಬಹು ಮುಖ್ಯವೆನಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ