Breaking News

ಐಶ್ವರ್ಯಾಗೆ ಮಿಸೆಸ್, ಲಬ್ಧಿಗೆ ಮಿಸ್ ಪಟ್ಟ

Spread the love

ನಿಪ್ಪಾಣಿ: ಜೊಲ್ಲೆ ಗ್ರೂಪ್, ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಕೃಷಿ ಉತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಿಸೆಸ್’ ನಿಪ್ಪಾಣಿ ಸ್ಪರ್ಧೆಯಲ್ಲಿ ನಗರದ ಐಶ್ವರ್ಯಾ ಖಾಂಡಕೆ ಪ್ರಥಮ, ಅನುರಾಧಾ ಮೇಸ್ತ್ರೀ ಮತ್ತು ರಾಜಶ್ರೀ ಪಾಟೀಲ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.
‘ಮಿಸ್’ ನಿಪ್ಪಾಣಿ ಸ್ಪರ್ಧೆಯಲ್ಲಿ  ಲಬ್ಧಿ ಶಾ. ಪ್ರಥಮ, ರೋಹಿಣಿ ಪಾಟೀಲ ಮತ್ತು ಮಾನಸಿ ಸದಾವರ್ತೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಮರ್ದಾನಿ ಕ್ರೀಡಾ ಸ್ಪರ್ಧೆಯಲ್ಲಿ ಕೊಲ್ಲಾಪುರದ ಚಾಣಕ್ಯ ಮರ್ದಾನಿ ಸಾಂಸ್ಕೃತಿಕ ಸೇವಾ ಸಂಘ ಪ್ರಥಮ, ಕಾಸಾರವಾಡಿಯ ಶ್ರೀರಾಮ ಗುರುಕುಲಂ ದ್ವಿತೀಯ, ನವಲಿಹಾಳದ ಶಿವಶಂಭು ಮರ್ದಾನಿ ಅಖಾಡಾ ತೃತೀಯ, ಕೊಲ್ಲಾಪುರದ ಸಂಯುಕ್ತ ಜುನಾ ಬುಧವಾರ ಪೇಠ ಮರ್ದಾನಿ ಅಖಾಡಾ ಚತುರ್ಥ, ಶಾಂತಿದೂತ ಮರ್ದಾನಿ ಅಖಾಡಾ ಐದನೇ ಸ್ಥಾನ ಪಡೆದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಬಹುಮಾನ ವಿತರಿಸಿದರು. ಶ್ವಾನ ಪ್ರದರ್ಶನದಲ್ಲಿ ದೇಶ ಹಾಗೂ ವಿದೇಶಿ ಶ್ವಾನಗಳು ಪಾಲ್ಗೊಂಡು ಎಲ್ಲರ ಗಮನ ಸೆಳೆದವು. ಸಂಗೀತ ಕಾರ್ಯಕ್ರಮ, ಕೃಷಿ ಯಂತ್ರೋಪಕರಣಗಳನ್ನು ನೋಡಲು ರೈತರು ದೂರದೂರಿನಿಂದ ಆಗಮಿಸಿದ್ದರು.

Spread the love

About Laxminews 24x7

Check Also

ಕಾರ್ಯಕರ್ತರ ಆಗಮನದಿಂದ ಕ್ಷೇತ್ರದಲ್ಲಿ ಬಿಜೆಪಿಯ ಬಲ ಹೆಚ್ಚಿದೆ

Spread the loveನಿಪ್ಪಾಣಿ: ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆಗಮನದಿಂದ ಕ್ಷೇತ್ರದಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಿದೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ