Breaking News

ರಿಯಾಲಿಟಿ ಶೋನಲ್ಲಿ ಆಲ್ಕೋಹಾಲ್ ಸೇವನೆ.. ಕಪಿಲ್ ಶರ್ಮಾ ವಿರುದ್ಧ FIR

Spread the love

ರಿಯಾಲಿಟಿ ಶೋ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುವ ಕಪಿಲ್ ಶರ್ಮಾಗೆ ಇದೀಗ ಸಂಕಷ್ಟ ಎದುರಾಗಿದೆ. ಕಪಿಲ್ ಶರ್ಮಾ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ತನ್ನ ರಿಯಾಲಿಟಿ ಶೋನ ಶೂಟ್ ಒಂದರಲ್ಲಿ ಕೋರ್ಟ್ ಸೀನ್ ಶೂಟ್ ಮಾಡುವಾಗ ಮದ್ಯ ಸೇವಿಸಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ದೂರು ನೀಡಲಾಗಿದ್ದು ಎಫ್​ಐಆರ್ ದಾಖಲಾಗಿದೆ.

ಮಧ್ಯಪ್ರದೇಶದ ವಕೀಲರೊಬ್ಬರು ಸಿಜೆಎಂ ಕೋರ್ಟ್​ನಲ್ಲಿ ಈ ಎಫ್​ಐಆರ್ ದಾಖಲಿಸಿದ್ದಾರೆ. ಅಕ್ಟೋಬರ್ 1 ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ದೂರು ನೀಡಿರುವ ವಕೀಲರು.. ಕಪಿಲ್ ಶರ್ಮಾ ಶೋನಲ್ಲಿ ಮಹಿಳೆಯರನ್ನೂ ಅವಹೇಳನ ಮಾಡಲಾಗಿದೆ. ಒಂದು ಎಪಿಸೋಡ್​ನಲ್ಲಿ ಕೋರ್ಟ್​ ಸೀನ್ ಹಾಕಲಾಗಿದ್ದು ಅದರಲ್ಲಿ ನಟರು ಆಲ್ಕೋಹಾಲ್ ಸೇವಿಸಿದ್ದಾರೆ. ಇದು ನ್ಯಾಯಾಂಗ ನಿಂದನೆ. ಹೀಗಾಗಿ ಎಫ್ಐಆರ್ ದಾಖಲಿಸಲು ಒತ್ತಾಯಿಸಿದ್ದೇನೆ. ಇಂಥದ್ದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಹೇಳಿದ್ದಾರೆ.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ