ಮೊಳಕಾಲ್ಮುರು: ಬಸ್ ಹಾಗೂ ಕ್ರೂಸರ್ ಮಧ್ಯೆ ಮೊಳಕಾಲ್ಮುರು ತಾಲ್ಲೂಕಿನ ಬಿಜಿ ಕೆರೆ ಬಳಿ ಭಾನುವಾರ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಿಮ್ಮಣ್ಣ(40) ಪತ್ನಿ ರತ್ನಮ್ಮ(38) ಸೋಮನಮರಡಿ ಗ್ರಾಮದ ದುರುಗಪ್ಪ(16), ಗಜಲಿ ಗ್ರಾಮದ ಮಹೇಶ (19) ಹಾಗು 55 ವರ್ಷದ ಓರ್ವ ವ್ಯಕ್ತಿ ಎಂದು ತಿಳಿದು ಬಂದಿದೆ.
ಮೃತರು ರಾಯಚೂರು ಜಿಲ್ಲೆ ದೆವದುರ್ಗ ತಾಲೂಕಿನ ಹುಣಸೂರು ಗ್ರಾಮದವರಾಗಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಸ್ ಬೆಂಗಳೂರಿನಿಂದ ಲಿಂಗಸುಗೂರಿಗೆ ಹೋಗುತಿತ್ತು. ಕ್ರೂಸರ್ ನಲ್ಲಿದ್ದ ಕಾರ್ಮಿಕರು ಚುನಾವಣೆಗೆ ಮತದಾನ ಮಾಡಲು ಗ್ರಾಮಗಳಿಗೆ ಬಂದಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
Laxmi News 24×7