Breaking News

ಪರೀಕ್ಷೆ ಫೇಲ್‌: ಅಪಹರಣದ ಕಥೆ!

Spread the love

ಇಂದೋರ್‌: ಬಿಎ ಪ್ರಥಮ ವರ್ಷದ ಪರೀಕ್ಷೆಯಲ್ಲಿ ನಪಾಸಾದ 18 ವರ್ಷದ ಯುವತಿಯೊಬ್ಬಳು, ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು ಅಪಹರಣದ ಕಥೆ ಕಟ್ಟಿದ್ದಾಳೆ. ಇದು ನಡೆದಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ.

ಶುಕ್ರವಾರ ಬಿಎ ಪ್ರಥಮ ವರ್ಷದ ಪರೀಕ್ಷೆಯ ಫ‌ಲಿತಾಂಶ ಪ್ರಕಟವಾಗಿದೆ.

ಅನುತ್ತೀರ್ಣಗೊಂಡ ಯುವತಿ, ಇಂದೋರ್‌ನಿಂದ ಉಜ್ಜಯಿನಿಗೆ ತೆರಳಿದ್ದಾಳೆ. ಬಳಿಕ ಅವರ ತಂದೆಗೆ ಕರೆ ಮಾಡಿ, ಇಂದೋರ್‌ನ ದೇವಾಲಯವೊಂದರ ಬಳಿಯಿಂದ ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಅಪರಿಚಿತ ಫೋನ್‌ನಿಂದ ಕರೆ ಮಾಡಿದ್ದಾಳೆ. ಮನೆಗೆ ಆಟೋದಲ್ಲಿ ಬರುತ್ತಿದ್ದ ವೇಳೆ, ಆಟೋ ಚಾಲಕ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ, ತನ್ನ ಮುಖಕ್ಕೆ ಬಟ್ಟೆ ಇಟ್ಟಿದ್ದು, ಇದರಿಂದ ತಾನು ಪ್ರಜ್ಞೆ ತಪ್ಪಿದ್ದಾಗಿ ಯುವತಿ ಹೇಳಿದ್ದಾಳೆ.
ಕೂಡಲೇ ಯುವತಿಯ ತಂದೆ ಇಂದೋರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದಾಗ, ಶನಿವಾರ ಯುವತಿ ಉಜ್ಜಯಿನಿಯ ರೆಸ್ಟೋರೆಂಟ್‌ ಒಂದರಲ್ಲಿ ಕುಳಿತಿರುವುದು ತಿಳಿದಿದೆ. ಪೊಲೀಸರು ಆಕೆಯ ಬ್ಯಾಗ್‌ ಪರಿಶೀಲಿಸಿದಾಗ, ಉಜ್ಜಯಿನಿಗೆ ಬಂದ ಬಸ್‌ ಟಿಕೆಟ್‌, ರೆಸ್ಟೋರೆಂಟ್‌ ಬಿಲ್‌ ದೊರೆತಿದೆ. ನಂತರ ಆಕೆಯ ಆಪ್ತಸಮಾಲೋಚನೆ ನಡೆಸಿದಾಗ ಎಲ್ಲಾ ವಿಷಯ ಬಹಿರಂಗವಾಗಿದೆ. ಆಕೆಯನ್ನು ಭಾನುವಾರ ಇಂದೋರ್‌ಗೆ ಕರೆತಂದ ಪೊಲೀಸರು, ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.


Spread the love

About Laxminews 24x7

Check Also

ಹಿರಿಯ ಪತ್ರಕರ್ತ ಪ್ರಕಾಶ ಪರುಳೇಕರ ನಿಧನ

Spread the love ಹಿರಿಯ ಪತ್ರಕರ್ತ ಪ್ರಕಾಶ ಪರುಳೇಕರ ನಿಧನ ಲೋಂಡಾ ಮೂಲದ ಬೆಳಗಾವಿಯ ಹಿರಿಯ ಪತ್ರಕರ್ತ, ಇನ್ ನ್ಯೂಸ್’ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ