Breaking News

ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ ‘ಸಖಿ ಪಿಂಕ್ ಬೂತ್’

Spread the love

ವಿಜಯಪುರ(ದೇವನಹಳ್ಳಿ): ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ‘ಸಖಿ ಪಿಂಕ್‌ ಬೂತ್‌’ (ಗುಲಾಬಿ ಬಣ್ಣದ ಮತಗಟ್ಟೆ) ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ‘ಪಿಂಕ್ ಬೂತ್’ ತೆರೆಯಲಾಗಿದೆ.

 

ಇದರ ಜೊತೆಯಲ್ಲಿ ಯತನಿಕ್ ಮತಗಟ್ಟೆ, ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಪಿಂಕ್ ಬೂತ್ ಹೊರಗೆ ಮಹಿಳೆಯರ ಮನಸ್ಸಿಗೆ ಮುದ ನೀಡುವಂತಹ, ಅವರನ್ನು ಮತಗಟ್ಟೆಗೆ ಆಹ್ವಾನಿಸುವಂತಹ ಚಿತ್ತಾಕರ್ಷಕವಾದ ಚಿತ್ರಗಳನ್ನು ಬಿಡಿಸಲಾಗಿದೆ.

ಮತಗಟ್ಟೆ ಸಂಖ್ಯೆ 103ರಲ್ಲಿ ಮಹಿಳಾ ಮತದಾರರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಇರುವ ಕಾರಣ, ಇಲ್ಲಿ ತೆರೆಯಲಾಗಿದೆ. ಎಲ್ಲಾ ಮಹಿಳಾ ಮತದಾರರು ಬಂದು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಮತಗಟ್ಟೆಯು ಆಕರ್ಷಣಿಯವಾಗಿರುತ್ತದೆ. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಈ ಕಾರಣದಿಂದ ಮತದಾನದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಗಳಿವೆ.

ವಿಶೇಷವಾಗಿ ಗಾಲಿಕುರ್ಚಿಯ ಸಹಾಯದಿಂದ ಬರುವ ಮಹಿಳೆಯರು, ದೃಷ್ಟಿದೋಷ ಸೇರಿದಂತೆ ಅಂಗವಿಕಲ ಮಹಿಳೆಯರಿಗೆ ಈ ‘ಪಿಂಕ್‌ ಬೂತ್‌’ಗಳಲ್ಲಿ ವಿಶೇಷ ಅತಿಥ್ಯ ದೊರೆಯಲಿದೆ. ಇಂಥ ಮಹಿಳೆಯರು ಸರತಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ಮತಗಟ್ಟೆ ಕೇಂದ್ರಕ್ಕೆ ಪ್ರವೇಶಿಸಿ ಮತದಾನ ಮಾಡುವ ಅವಕಾಶವನ್ನೂ ಕಲ್ಪಿಸಲಾಗುವುದು ಎಂದು ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತದಾರರೆಲ್ಲರೂ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು. ಬಂದು ಮತ ಹಾಕುವುದರ ಜೊತೆಗೆ ಮತದಾನ ಮಾಡಿಸುವಂತಹ ಬದ್ಧತೆಯನ್ನು ತೋರಿಸಬೇಕು. ಮೇ. 9 ರಂದು ರಂಗೋಲಿ ಬಿಡಿಸಲಾಗುತ್ತದೆ. ಸೆಲ್ಫಿ ಸ್ಟ್ಯಾಂಡ್ ಕೂಡಾ ಇರುತ್ತದೆ ಎಂದು ಅಧಿಕಾರಿ ತ್ಯಾಗರಾಜು ತಿಳಿಸಿದರು.


Spread the love

About Laxminews 24x7

Check Also

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸೆಷನ್ಸ್​ ನ್ಯಾಯಾಲಯ ವಜಾಗೊಳಿಸಿದೆ.

Spread the love ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ