Breaking News

ಸಂದರ್ಶನ | ವೃದ್ಧಿಯೇ ನನ್ನ ಗೆಲುವಿಗೆ ಸಾಧನ : ಬಾಲಚಂದ್ರ ಜಾರಕಿಹೊಳಿ

Spread the love

ಯಾಾವ ಅಂಶ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಸತತ ಐದು ಚುನಾವಣೆಗಳಲ್ಲಿ ನಾನು ಗೆದ್ದಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅವುಗಳನ್ನೇ ಮುಂದಿಟ್ಟುಕೊಂಡು ನಾನು ಹಾಗೂ ಪಕ್ಷದ ಬೆಂಬಲಿಗರು ಮತಯಾಚಿಸುತ್ತಿದ್ದೇವೆ.

 

lಈ ಬಾರಿಯೂ ಗೆಲ್ಲುತ್ತೇನೆ ಎಂಬ ವಿಶ್ವಾಸ ಮೂಡಿದೆಯೇ? ವಿಶ್ವಾಸ ಮೂಡಲು ಕಾರಣವೇನು?

ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಕೈಗೊಂಡಿದ್ದೇನೆ. ಪ್ರತಿ ಸಮುದಾಯದ ಶೇ 80ರಷ್ಟು ಮತದಾರರು ನನ್ನೊಂದಿಗೆ ಇದ್ದಾರೆ. ನಾನು ಅವರ ಸಂಕಷ್ಟಕ್ಕೆ ಸದಾ ಸ್ಪಂದಿಸಿದ್ದೇನೆ. ಹಾಗಾಗಿ ಈ ಬಾರಿಯೂ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ.

lಈ ಬಾರಿ ನಿಮ್ಮ ಎದುರಾಳಿ ಯಾರು? ಯಾರಾದರೂ ಸಮರ್ಥ ಅಭ್ಯರ್ಥಿ ಇದ್ದಾರೆಯೇ? ಅಥವಾ ಗೆಲುವು ಸುಲಭವಾಗಿದೆಯೇ?

ಸಮರ್ಥ, ಅಸಮರ್ಥ ಎನ್ನುವ ಪ್ರಶ್ನೆಯೇ ಇಲ್ಲ. ಚುನಾವಣೆ ಎಂದರೆ, ಜನರು ನೀಡುವ ತೀರ್ಪಿಗೆ ಬದ್ಧರಿರಬೇಕು. ಈ ಚುನಾವಣೆಯಲ್ಲಿ ಕನಿಷ್ಠ 50 ಸಾವಿರದಿಂದ 70 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ದೇವರು, ಹೆತ್ತವರು ಮತ್ತು ಕ್ಷೇತ್ರದ ಮತದಾರರ ಆಶೀರ್ವಾದದಿಂದ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಲಿದ್ದೇನೆ.

lನಿಮ್ಮ ಕ್ಷೇತ್ರದಲ್ಲಿ ನಾಯಕ ಸಮುದಾಯದ ಜನರು ಕಡಿಮೆ ಇದ್ದರೂ, 5 ಬಾರಿ ಗೆಲ್ಲಲು ಕಾರಣವೇನು?

ಅರಭಾವಿ ಕ್ಷೇತ್ರದಲ್ಲಿ ನಾಯಕ ಸಮುದಾಯ ಲೆಕ್ಕಕ್ಕಿಲ್ಲ. ಈ ಹಿಂದಿನ ಎಲ್ಲ ಚುನಾವಣೆಗಳಲ್ಲಿ ವೀರಶೈವ ಲಿಂಗಾಯತರು, ಕುರುಬರು, ಉಪ್ಪಾರರು, ಅಲ್ಪಸಂಖ್ಯಾತರು, ಪರಿಶಿಷ್ಟರು ಹಾಗೂ ಇತರೆ ಎಲ್ಲ ಹಿಂದುಳಿದ ವರ್ಗಗಳ ಮತದಾರರು ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ನಮ್ಮಲ್ಲಿ ಜಾತಿ ವಿಷಯ ಪ್ರಾಮುಖ್ಯತೆ ಪಡೆದಿಲ್ಲ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳೇ ಜನಮನ್ನಣೆ ತಂದುಕೊಟ್ಟಿವೆ.

lಮತ್ತೆ ಶಾಸಕರಾಗಿ ಆಯ್ಕೆಯಾದರೆ, ಯಾವ ಮೂರು ಕೆಲಸಗಳನ್ನು ಆದ್ಯತೆ ಮೇಲೆ ಕೈಗೊಳ್ಳುತ್ತೀರಿ?

ಮೆಳವಂಕಿ ಹಾಗೂ ಇತರೆ ಗ್ರಾಮಗಳ ಜನರ ದಾಹ ನೀಗಿಸಲು ₹482 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುತ್ತೇನೆ. ಅರಭಾವಿ ಕ್ಷೇತ್ರದ 20 ಕೆರೆಗಳಿಗೆ ₹323 ಕೋಟಿ ವೆಚ್ಚದಲ್ಲಿ ನೀರು ತುಂಬಿ ಸುವ ಯೋಜನೆ ಕಾಮಗಾರಿ ಆರಂಭಿಸುತ್ತೇನೆ. ಇದರಿಂದ ರೈತರಿಗೆ ಅನುಕೂಲ ವಾಗಲಿದೆ. ಜತೆಗೆ, ಕ್ಷೇತ್ರದ ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸುತ್ತೇನೆ.


Spread the love

About Laxminews 24x7

Check Also

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸೆಷನ್ಸ್​ ನ್ಯಾಯಾಲಯ ವಜಾಗೊಳಿಸಿದೆ.

Spread the love ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ