Breaking News

ಮರಾಠಿ ಜನರನ್ನು ಸೋಲಿಸುವ ಉದ್ದೇಶವಿಟ್ಟುಕೊಂಡು ಬಿಜೆಪಿಯವರು ಈಗಾಗಲೇ ಬೆಳಗಾವಿಗೆ ಹೋಗಿದ್ದಾರೆ.: ರಾವುತ್‌

Spread the love

ಮುಂಬೈ: ‘ಮೇ 10ರಂದು ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಅಂಗವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಬೇಲಗಾವಿ ಮೂಲದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಪರವಾಗಿ ಪ್ರಚಾರ ಮಾಡಬೇಕು’ ಎಂದು ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವುತ್‌ ಅವರು ಭಾನುವಾರ ತಿಳಿಸಿದರು.

 

ಕರ್ನಾಟಕದಿಂದ ಕಾರಾವಾರದ ಸುತ್ತಮುತ್ತ ಇರುವ 865 ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಎಂಇಎಸ್‌ ಪಕ್ಷ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದೆ. ಪ್ರಸ್ತುತ, ಅದು (ಎಂಇಎಸ್‌) ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್‌, ‘ಎಂಇಎಸ್‌ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಲು ನಾನು ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳಿಗೆ ಹೋಗುತ್ತಿದ್ದೇನೆ. ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರೂ ಬೆಳಗಾವಿಗೆ ತೆರಳಿ ಎಂಇಎಸ್‌ ಪರ ಮತಯಾಚನೆ ಮಾಡಬೇಕು’ ಎಂದರು.

‘ಶಿಂದೆ ಅವರು ತಾವು ಮಹಾರಾಷ್ಟ್ರ- ಕರ್ನಾಟಕ ಗಡಿ ಆಂದೋಲನದಲ್ಲಿ ಭಾಗವಹಿಸಿರುವುದಾಗಿ ಹೇಳುತ್ತಾರೆ. ಒಂದು ವೇಳೆ, ಶಿಂದೆ ಅವರು ಆಂದೋಲನದಲ್ಲಿ ಭಾಗವಹಿಸಿದ್ದೇ ಆದರೆ ಅವರು ಬೆಳಗಾವಿಗೆ ಹೋಗಿ ಎಂಇಎಸ್‌ ಪರ ಪ್ರಚಾರ ಮಾಡಬೇಕು’ ಎಂದೂ ಹೇಳಿದರು.

‘ಎಂಇಎಸ್‌ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿಯವರು ಈಗಾಗಲೇ ಬೆಳಗಾವಿಗೆ ಹೋಗಿದ್ದಾರೆ. ಮರಾಠಿ ಜನರನ್ನು ಸೋಲಿಸುವ ಉದ್ದೇಶವಿಟ್ಟುಕೊಂಡು ಅಲ್ಲಿಗೆ ಹೋದವರಿಗೆ ನಾಚಿಕೆಯಾಗಬೇಕು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ