Breaking News

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸೋಲುತ್ತೆ ಪರೋಕ್ಷವಾಗಿ ಒಪ್ಪಿಕೊಂಡ್ರಾ ಜಗ್ಗೇಶ್

Spread the love

ರ್ನಾಟಕ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾದಂತೆ ರಾಜ್ಯ ಚುನಾವಣಾ ಕಣ ರಂಗೇರಿದೆ. ಸಿದ್ದರಾಮಯ್ಯರನ್ನು ವರುಣಾದಲ್ಲಿ ಸೋಲಿಸಲು ಬಿಜೆಪಿ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿದೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರವಾಗಿ ನಟ, ಬಿಜೆಪಿ ನಾಯಕ ಜಗ್ಗೇಶ್ ಮತಯಾಚನೆ ಮಾಡಲಿದ್ದಾರೆ.ವರುಣಾದಲ್ಲಿ ಬಿಜೆಪಿ ಪರವಾಗಿ ಮತಯಾಚನೆಗೆ ತೆರಳುವ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್ ವಿ ಸೋಮಣ್ಣ ಕಾರ್ಯವೈಖರಿಯನ್ನು ಹಾಡಿ ಹೊಗಳಿದರು. ಸೋಮಣ್ಣ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, 5 ಲಕ್ಷ ಜನರಿಗೆ ಮನೆ ಕೊಟ್ಟಿದ್ದಾರೆ. ಅದಕ್ಕೆ ಅವರನ್ನು ವರುಣಾದಲ್ಲಿ ನಿಲ್ಲಿಸಲಾಗಿದೆ ಎಂದರು. ಈ ಬಾರಿ ಸೋಮಣ್ಣ ಗೆಲ್ಲುವುದು ಖಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಅವರ ಇದೇ ಕೊನೆ ಚುನಾವಣೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಇರಬೇಕು, ಅವರು ಉತ್ತಮ ನಾಯಕ, ಆದರೆ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಕೆಲವು ನಾಯಕರು ಇದೇ ಕೊನೆ ಚುನಾವಣೆ ಎನ್ನುವುದು ಸಾಮಾನ್ಯ ಎಂದು ಜಗ್ಗೇಶ್ ಹೇಳಿದರು. ಗೆದ್ದರೆ ಮತ್ತೊಮ್ಮೆ ಸಿಎಂ ಆಗ್ತೀನಿ ಅವಕಾಶ ತಪ್ಪಿಸಬೇಡಿ ಎಂದು ಎಂದು ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ದಾರೆ ಎನ್ನುವುದಕ್ಕೆ ಉತ್ತರ ನೀಡಿದ ಜಗ್ಗೇಶ್, ಅದನ್ನು ಮತದಾರರು ತೀರ್ಮಾನ ಮಾಡಬೇಕು, ಮತದಾರರು ಗೆಲ್ಲಿಸಿದಾಗ ಈ ಮಾತು ಹೇಳಿದರೆ ಅರ್ಥ ಇರುತ್ತದೆ, ಮತದಾರರ ನಿರ್ಧಾರ ಏನಿದೆ ಎಂದು ನಮಗೆ ಗೊತ್ತಿಲ್ಲೆ ಎಂದರು ಸಿದ್ದರಾಮಯ್ಯ ಸಿಎಂ ಆಗ್ತಾರ ಎಂದು ಕೇಳಿದ ಪ್ರಶ್ನೆಗೆ ನನ್ನ ಸ್ನೇಹಿತ ಅಂತೀನಿ ಹಂಗಾದ್ರೆ ಎಂದರು. ಅದೆಲ್ಲಾ ನಾವು ನಿರ್ಧಾರ ಮಾಡಲು ಆಗಲ್ಲ, ಭಗವಂತ ಮತ್ತು ಮತದಾರರು ಅದನ್ನು ತೀರ್ಮಾನ ಮಾಡ್ತಾರೆ ಮೇ 13ನೇ ತಾರೀಕು ಅವರು ಹೇಳ್ತಾರೆ ಎಂದರು.

ವರುಣಾದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಜಗ್ಗೇಶ್, ಸಿದ್ದರಾಮಯ್ಯ ಅವರು ಕಾರ್ಯಕರ್ತರಿಗೆ ಬುದ್ದಿ ಹೇಳಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ ಎಂದರು.ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ, ಅಂತಹ ವಾತಾವರಣ ಸೃಷ್ಟಿಯಾಗಿದೆ ಎಂದರು. ನಂದಿನಿ ವಿವಾದ ಕಾಂಗ್ರೆಸ್ ಟೂಲ್ ಕಿಟ್ ಎಂದು ಆರೋಪಿಸಿದ ಅವರು, ನಂದಿನಿ ಜನರ ರಾಜ್ಯದ ಜನರ ಮನೆ, ಮನದಲ್ಲಿದೆ. 2016ರಲ್ಲಿ ರಾಜ್ಯಕ್ಕೆ ಅಮುಲ್ ಪರಿಚಯಿಸಿದ್ದು ಸಿದ್ದರಾಮಯ್ಯನವರು ಎಂದು ಜಗ್ಗೇಶ್ ಹೇಳಿದರು.40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಕೂಡ ಕಾಂಗ್ರೆಸ್ ಟೂಲ್‌ ಕಿಟ್ ಅದಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸಿಲ್ಲ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಲೂಟಿ ಮಾಡಿದ, ಕಾಮನ್‌ವೆಲ್ತ್, 2ಜಿ ಹಗರಣದ ನಂತರವೇ ರಾಷ್ಟ್ರದಲ್ಲಿ ನರೇಂದ್ರ ಮೋದಿಯವರಿಗೆ ಜನ ಅಧಿಕಾರ ಕೊಟ್ಟಿದ್ದು ಎಂದು ಜಗ್ಗೇಶ್ ಹೇಳಿದರು.

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮಾಡುತ್ತಿರುವುದು, ಚುನಾವಣೆ ಮೇಲೆ ಪರಿಣಾಮ ಬೀರಲಿದೆ. 45 ರಿಂದ 50 ಕ್ಷೇತ್ರಗಳಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದರು. ಮಲ್ಲಿಕಾರ್ಜುನ ಖರ್ಗೆಯವರ ವಿಷಸರ್ಪ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಹಿರಿಯ ನಾಯಕರು ಆ ರೀತಿ ಮಾತನಾಡಬಾರದು ಎಂದು ಮನವಿ ಮಾಡಿದರು.ಸೋನಿಯಾ ಗಾಂಧಿಯನ್ನು ವಿಷಕನ್ಯೆ ಎಂದು ಕರೆದ ಯತ್ನಾಳ್ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿ, ಮೋದಿ ನಮ್ಮ ನಾಯಕರು ಅವರನ್ನು ಟೀಕಿಸಿದಾಗ ಇಂತಹ ಪ್ರತಿಕ್ರಿಯೆಗಳು ಬರುತ್ತವೆ. ಕಾಂಗ್ರೆಸ್‌ನವರು ಈ ರೀತಿ ಟೀಕೆ ಮಾಡುವುದನ್ನು ಬಿಡಲಿ ಎಂದರು.


Spread the love

About Laxminews 24x7

Check Also

ಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು.

Spread the loveಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ