ಚೆನ್ನೈ: ನರ್ಸಿಂಗ್ ವಿದ್ಯಾರ್ಥಿಗಳನ್ನು ತರಬೇತಿಗೆ ಕಳುಹಿಸಲು ಲಂಚ ಪಡೆದಿದ್ದ ಆರೋಗ್ಯ ಅಧೀಕ್ಷಕರೊಬ್ಬರನ್ನು ಬಂಧಿಸಲಾಗಿದೆ.
ತಮಿಳುನಾಡಿನ ವೆಲ್ಲೂರಿನಲ್ಲಿ ಈ ಘಟನೆ ನಡೆದಿದೆ. ವಿಜಿಲೆನ್ಸ್ ಗೆ ಬಂದ ನರ್ಸಿಂಗ್ ಸಂಸ್ಥೆಯೊಂದರ ದೂರು ಆಧರಿಸಿ ಜಿಲ್ಲಾ ಆರೋಗ್ಯ ಅಧೀಕ್ಷಕ ಕೃಷ್ಣಮೂರ್ತಿ ಅವರನ್ನು ಬಂಧಿಸಲಾಗಿದೆ.
ಎಲ್ಲ ನರ್ಸಿಂಗ್ ಸಂಸ್ಥೆಗಳಲ್ಲಿ ಮೂರು ತಿಂಗಳ ಆಸ್ಪತ್ರೆಯಲ್ಲಿ ತರಬೇತಿ ಕಡ್ಡಾಯವಾಗಿದ್ದು ಇದಕ್ಕೆ ಜಿಲ್ಲಾ ಆರೋಗ್ಯ ಅಧೀಕ್ಷಕರು ಅನುಮತಿ ನೀಡಬೇಕು. ಈ ಅನುಮತಿ ನೀಡಲು ಕೃಷ್ಣಮೂರ್ತಿ ಲಂಚ ಕೇಳಿದ್ದ ಬಗ್ಗೆ ವೆಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪಿಆರ್ ನರ್ಸಿಂಗ್ ಸಂಸ್ಥೆಯ ಪ್ರಾಚಾರ್ಯೆ ಶರಣ್ಯ ಅವರು ವಿಜಿಲೆನ್ಸ್ ಗೆ ದೂರು ಸಲ್ಲಿಸಿದ್ದರು.
ಕೃಷ್ಣಮೂರ್ತಿ ನರ್ಸಿಂಗ್ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಲಂಚದ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.