Breaking News

90 ಲಕ್ಷ ರೂ. ಖರ್ಚು ಮಾಡಿ ಕೊಂಡಿದ್ದಾರಂತೆ ! ಒಂದು ಹೊಂಡಾ ಆ್ಯಕ್ಟಿವಾ ಸ್ಕೂಟರ್

Spread the love

ಮಂಡ್ಯ: ಮಾರುಕಟ್ಟೆಯಲ್ಲಿ ಒಂದು ಹೊಂಡಾ ಆ್ಯಕ್ಟಿವಾ ಸ್ಕೂಟರ್ ಬೆಲೆ ಹೆಚ್ಚೆಂದರೆ 70- 80 ಸಾವಿರ ಇರಬಹುದು. ಆದರೆ ಇಲ್ಲೊಬ್ಬ ಕಾಂಗ್ರೆಸ್ ಅಭ್ಯರ್ಥಿ ಇದಕ್ಕೆ 90 ಲಕ್ಷ ರೂ. ಖರ್ಚು ಮಾಡಿ ಕೊಂಡಿದ್ದಾರಂತೆ !

“ಅದೆಂಥ ಸ್ಕೂಟರ್ ಇರಬಹುದು?, ಬೆಳ್ಳಿ ಬಂಗಾರದ ಲೇಪನವೇನಾದರೂ ಇದೆಯಾ?” ಅಂತ ಪ್ರತಿಯೊಬ್ಬರೂ ಪ್ರಶ್ನಿಸುವುದು ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ ಅವರು ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಆಸ್ತಿ ವಿವರದಲ್ಲಿ ಸಾಮಾನ್ಯ ಹೊಂಡಾ ಆ್ಯಕ್ಟಿವಾ-125ನ ಬೆಲೆ 93,03,730 ರೂ. ತೋರಿಸಿದ್ದಾರೆ.

ಈ ವಿಷಯ ತಿಳಿಯುತ್ತಲೇ ಮದ್ದೂರು ಕ್ಷೇತ್ರದ ಜನಸಾಮಾನ್ಯರೆಲ್ಲ ಹೌಹಾರಿದ್ದಾರೆ! ಈ ಬೆಲೆಯಲ್ಲಿ ಅಭ್ಯರ್ಥಿ ಐದಾರು ಐಷಾರಾಮಿ ಕಾರುಗಳನ್ನೇ ಖರೀದಿಸಬಹುದಿತ್ತು ಎಂದು ಉಸುರಿದ್ದಾರೆ.

ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ನಿನ್ನೆಯೇ ಮುಗಿದಿದ್ದು ಇಂದು ಅವುಗಳ ಪರಿಶೀಲನೆ ನಡೆಯಲಿದೆ. ಈ ವೇಳೆ 90 ಲಕ್ಷದ ಬೈಕ್ ರಹಸ್ಯ ಏನೆಂಬುದು ತಿಳಿಯಲಿದೆ.


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ